ಗ್ರಾಮದ ಅಭಿವೃದ್ಧಿಗೆ ಹತ್ತಾರು ಯೋಜನೆ

ಹುಮನಾಬಾದ್​ ತಾಲೂಕಿನ  ದುಬಲಗುಂಡಿ ಗ್ರಾಮದ ಶ್ರೀ ಸಂಗಮೇಶ್ವರ ದೇವಾಲಯದಲ್ಲಿ ಸೋಮವಾರ ನೂತನ ಸಮುದಾಯ ಭವನ ಕಟ್ಟಡ ಕಾಮಗಾರಿಗೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್​ ಚಾಲನೆ ನೀಡಿದರು. ನಾಗಶೆಟ್ಟಿ ವಾರದ, ಕಲ್ಯಾಣರಾವ ಶೆಟಕಾರ, ಅನಿಲ ಪಸರ್ಗಿ ಇತರರಿದ್ದರು.
ಹುಮನಾಬಾದ್​ ತಾಲೂಕಿನ ದುಬಲಗುಂಡಿ ಗ್ರಾಮದ ಶ್ರೀ ಸಂಗಮೇಶ್ವರ ದೇವಾಲಯದಲ್ಲಿ ಸೋಮವಾರ ನೂತನ ಸಮುದಾಯ ಭವನ ಕಟ್ಟಡ ಕಾಮಗಾರಿಗೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್​ ಚಾಲನೆ ನೀಡಿದರು. ನಾಗಶೆಟ್ಟಿ ವಾರದ, ಕಲ್ಯಾಣರಾವ ಶೆಟಕಾರ, ಅನಿಲ ಪಸರ್ಗಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್​ ಭರವಸೆ
  • ದುಬಲಗುಂಡಿಯಲ್ಲಿ ಸಮುದಾಯ ಭವನ ಕಟ್ಟಡ ಕಾಮಗಾರಿಗೆ ಚಾಲನೆ
ಹುಮನಾಬಾದ್​: ದುಬಲಗುಂಡಿ ಗ್ರಾಮದ ಶ್ರೀ ಸಂಗಮೇಶ್ವರ ದೇವಾಲಯಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದಿ ಮಂಡಳಿ ಯೋಜನೆಯಡಿ ಅಂದಾಜು 25ಲಕ್ಷ ರೂ.ಗಳಲ್ಲಿ ನೂತನ ಸಮುದಾಯ ಭವನ ಕಟ್ಟಡ ಕಾಮಗಾರಿಗೆ ಸೋಮವಾರ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್​ ಚಾಲನೆ ನೀಡಿದರು.
ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮದ ವಿವಿಧ ಸಮುದಾಯಗಳಿಗೆ ಪ್ರಸ್ತುತ ಸಾಲಿನಲ್ಲಿ ಕಾಮಗಾರಿ 60 ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿದೆ. ಗ್ರಾಮದ ಅಭಿವೃದ್ಧಿಗಾಗಿ ಹತ್ತಾರು ಯೋಜನೆಯಗಳನ್ನು ರೂಪಿಸಲಾಗಿದ್ದು, ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳು ಈಡೇರಿಸುವುದಾಗಿ ಭರವಸೆ ನೀಡಿದರು.
ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ನಾಗಶೆಟ್ಟಿ ವಾರದ, ಉಪಾಧ್ಯ ಕಲ್ಯಾಣರಾವ ಶೆಟಕಾರ, ಪ್ರಮುಖರಾದ ಬಸವರಾಜ ರಾಜೇಶರ, ಮಲ್ಲಪ್ಪ ಕಾಶಾಪನೋರ, ನಾಗಪ್ಪ ಕಾಶಾಪನೋರ, ಅನಿಲ ಕಣಜಿ, ಅಶೋಕ ಪಾಟೀಲ, ಶಂಕರ ಗಾಂಗಾ, ಪದ್ಮಾವತಿ ಪೋತರಾಜ್​, ಅನಿಲ ಪಸರ್ಗಿ, ರಾಮಣ್ಣ ಸೋಲಮಲ್ಲ, ಶರಣು ಸಿದ್ದವಿರ, ವೀರೇಶ ಸಜ್ಜನ, ಆನಂದ ಮಲಶೆಟ್ಟಿ, ರತನ ಠಾಕೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net