

ವಿಜಯಪುರ :
ಹೂವು, ಹಣ್ಣು ಮತ್ತು ಪೂಜಾ ಸಾಮಗ್ರಿ ದರ ಗಗನಕ್ಕೇರಿದ್ದರೂ ಲಕ್ಷಿ$್ಮ ದೇವಿಯನ್ನು ಮನೆಗಳಲ್ಲಿ ಅಲಂಕರಿಸಲು ಉತ್ಸುಕರಾಗಿರುವುದು ಮಾರುಕಟ್ಟೆಯಲ್ಲಿ ಕಂಡುಬಂತು.
ದಿನಸಿ ಅಂಗಡಿಗಳಲ್ಲಿ ಬೆಲ್ಲ, ತೊಗರಿಬೇಳೆ ಮತ್ತು ತುಪ್ಪದ ಬೆಲೆ ಸಾಮಾನ್ಯವಾಗಿತ್ತು. ಆದರೆ ಪೂಜಾ ಸಾಮಗ್ರಿಗಳ ದರ ಜನರ ಜೇಬಿಗೆ ಕೊಂಚ ಕತ್ತರಿಹಾಕಿತ್ತು. ಮಾರುಕಟ್ಟೆಯಲ್ಲಿ ಹೂವಿನ ದರ ಕಳೆದ ವಾರಕ್ಕೆ ಹೋಲಿಸಿದರೆ ದುಪ್ಪಟ್ಟಾಗಿತ್ತು.
ಕನಕಾಂಬರ ಕೆಜಿಗೆ 4000&4500 ರೂ. ವರೆಗೆ ಮಾರಾಟವಾಗುತ್ತಿದ್ದು, ಸದ್ಯಕ್ಕೆ ಬೆಲೆ ಅಂಬರಕ್ಕೇರಿದೆ. ಕಾಕಡ ಮಲ್ಲಿಗೆಗೆ 1200&1500 ರೂ. ಗುಲಾಬಿ ಮತ್ತು ಸೇವಂತಿಗೆ 400&500 ರೂ. ಚೆಂಡು ಹೂವು ಕೆಜಿಗೆ 80&100 ರೂ.ಆಗಿದ್ದು, ಖರೀದಿಗೆ ಗ್ರಾಹಕರು ಹಿಂದೆಮುಂದೆ ನೋಡುವಂತಾಗಿತ್ತು.
ಹಬ್ಬದ ಹಿನ್ನೆಲೆಯಲ್ಲಿ ಹಣ್ಣುಗಳ ದರವೂ ಏರಿಕೆಯಾಗಿದ್ದು, ಪ್ರತಿ ಕೆಜಿ ಏಲಕ್ಕಿ ಬಾಳೆಗೆ 120 ರೂ., ಪಚ್ಚೆ ಬಾಳೆ 60 ರೂ. ವರೆಗೂ ಏರಿಕೆಯಾಗಿದೆ. ದ್ರಾ ಕೆಜಿಗೆ 240 ರೂ. ಸೇಬು 180 ರಿಂದ 250 ರೂ., ಅನಾನಸ್ ಜೋಡಿಗೆ 200 ರೂ., ಮುಂಚೆ ಕೆಜಿಗೆ 20 ರೂ. ಇದ್ದ ಕಲ್ಲಂಗಡಿ ಹಣ್ಣಿನ ಬೆಲೆ ದಿಢೀರನೇ 50 ರೂ.ಗೆ ಜಿಗಿದಿದೆ.
ನೈಸರ್ಗಿಕ ಹೂವುಗಳ ಬೆಲೆ ಏರಿಕೆ ತಡೆಗಟ್ಟಲು ಮತ್ತು ದೀರ್ಕಾಲದ ಅಲಂಕಾರಕ್ಕಾಗಿ ಮಾರುಕಟ್ಟೆಗೆ ವಿಧವಿಧವಾದ ಪ್ಲಾಸ್ಟಿಕ್ ಹೂವುಗಳು ಲಗ್ಗೆ ಇಟ್ಟಿದ್ದು, ಒಂದು ಮಾರು ಪ್ಲಾಸ್ಟಿಕ್ ಹೂವು 150 ರೂ.ಗೆ ಮಾರಾಟವಾಗುತ್ತಿತ್ತು.