ಉಚಿತ ತರಬೇತಿಯನ್ನು ರ್ನಿಲಸದಿರಿ

Don't miss out on free training.
Don't miss out on free training.
Published on
ಚಿಕ್ಕನಾಯಕನಹಳ್ಳಿ : ಶಾಸಕ ಸಿ.ಬಿ.ಸುರೇಶ್​ಬಾಬು ಅವರ ಎಸ್​.ಬಿ.ಚಾರಿಟಬಲ್​ ಟ್ರಸ್ಟ್​ನಿಂದ ನಡೆಯುತ್ತಿರುವ ಉಚಿತ ಸಿಇಟಿ, ನೀಟ್​, ಜೆಇಇ ತರಬೇತಿಯನ್ನು ಉಚಿತ ಎಂದು ಉದಾಸೀನ ಮಾಡದೇ ಗಂಭೀರವಾಗಿ ಪರಿಗಣಿಸಿ ತರಬೇತಿ ಪಡೆದು ಭವಿಷ್ಯ ರೂಪಿಸಿಕೊಳ್ಳಿ ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿ.ಸೋಮಶೇಖರ್​ ತಿಳಿಸಿದರು.
ಪಟ್ಟಣದ ತೀನಂಶ್ರೀ ಭವನದಲ್ಲಿ ಎಸ್​.ಬಿ.ಚಾರಿಟಬಲ್​ ಟ್ರಸ್ಟ್​ನಿಂದ ಜ್ಞಾನಕಲ್ಪ ಉಚಿತ ಸಿಇಟಿ ನೀಟ್​ , ಜೆಇಇ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಈ ತರಬೇತಿ ಜ್ಞಾನದ ಪ್ರಯೋಗ ಶಾಲೆಯಂತಿದ್ದು, ಇದರಲ್ಲಿ ತರಬೇತಿ ಪಡೆದು ಉತ್ತಮ ಜ್ಞಾನವಂತರಾಗಿ ನಿಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಿ ಎಂದರು.
ಸಿಇಟಿ ತರಬೇತಿ ಶಿಬಿರದ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಸಾ.ಚಿ.ನಾಗೇಶ್​ ಮಾತನಾಡಿ, ನಮ್ಮ ಶಾಸಕರ ಕನಸು ಆಶಯವು ನಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂಬುದಾಗಿದೆ. ಅದ್ದರಿಂದ ಮಕ್ಕಳು ಉತ್ತಮವಾಗಿ ಈ ತರಬೇತಿಯನ್ನು ಪಡೆದು ಮುಂದಿನ ದಿನಗಳಲ್ಲಿ ಉತ್ತಮವಾದ ಹುದ್ದೆಗಳನ್ನು ಪಡೆದು ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದರು.
ಪಿಎಲ್​ಡಿ ಬ್ಯಾಂಕ್​ನ ನಿರ್ದೇಶಕ ರಾಮಚಂದ್ರಯ್ಯ, ಉಪನ್ಯಾಸಕ ಕೃಷ್ಣಚೈತನ್ಯ, ಸಮಿತಿಯ ಸದಸ್ಯ ಕುಮಾರ್​, ನಾಗರಾಜು, ಪ್ರಾಂಶುಪಾಲ ಕೃಷ್ಣಮೂರ್ತಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net