ನೀರು, ಮೇವಿಗೆ ಸಮಸ್ಯೆ ಆಗದಿರಲಿ water

ನೀರು, ಮೇವಿಗೆ ಸಮಸ್ಯೆ ಆಗದಿರಲಿ water
ನೀರು, ಮೇವಿಗೆ ಸಮಸ್ಯೆ ಆಗದಿರಲಿ water
Published on
ಬೂದಿಕೋಟೆ: ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಹೋಬಳಿ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಅವರು ಬುಧವಾರ ಭೇಟಿ ನೀಡಿ ವೀಸಿದರು.water
ಬೂದಿಕೋಟೆ ಸಮೀಪದ ಪುರಾತನ ಕೋಟೆ, ಮಾರ್ಕಂಡೇಯ ಡ್ಯಾಂನ್ನು ಅಧಿಕಾರಿಗಳೊಂದಿಗೆ ಭೇಟಿ ನೀಡಿ ವೀಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಸ್ಥಳಿಯರೊಂದಿಗೆ ಚರ್ಚಿಸಿದಾಗ ನೀರಿನ ಸಮಸ್ಯೆ, ಮೇವಿನ ಸಮಸ್ಯೆ ಎದುರಾಗುವ ಕುರಿತು ಡಿಸಿ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಅವರು, ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತಾ ಕ್ರಮವಹಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಿರಂತರವಾಗಿ ನಿಮ್ಮೊಟ್ಟಿಗೆ ಸಂಪರ್ಕದಲ್ಲಿದ್ದು, ಸಮಸ್ಯೆಗೆ ಸ್ಪಂದಿಸಲಿದ್ದಾರೆ ಎಂದು ತಿಳಿಸಿದರು.
ಡ್ಯಾಂನಲ್ಲಿ ಈಗಲೂ ನೀರಿದ್ದು ಅದನ್ನು ಉಪಯೋಗಿಸಿಕೊಳ್ಳಲು ಆಗದಿರುವುದು ವಿಪಾರ್ಯಸದ ಸಂಗತಿ. ಮಾಲೂರು ತಾಲೂಕಿಗೆ ನೀರು ಸರಬರಾಜು ಮಾಡುವ ಪೈಪ್​ಲೈನ್​ ಕಾಮಗಾರಿ ಯಾಕೆ ನಿಂತಿದೆ ಎಂದು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರು. ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಪ್ರತಿಕ್ರೇಶಿ ಪ್ರತಿಕ್ರಿಯಿಸಿ, ಪೈಪ್​ಲೈನ್​ ಕಾಮಗಾರಿ ಪೂರ್ಣಗೊಂಡಿಲ್ಲವೆಂದು ತಿಳಿಸಿದರು.
ಡ್ಯಾಂ ಸ್ಥಳವನ್ನು ಪ್ರವಾಸಿ ಸ್ಥಳವನ್ನಾಗಿ ಮಾಡಬಹುದು, ಆದರೆ, ಇಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿಲ್ಲ. ಹೀಗಾದರೆ ಪ್ರವಾಸಿಗರು ಬರಲು ಹೇಗೆ ಸಾಧ್ಯ. ಇನ್ನಾದರು ಪ್ರವಾಸಿ ತಾಣವನ್ನಾಗಿ ಮಾಡಲು ಅಧಿಕಾರಿಗಳು ಮುಂದಾಗಬೇಕು ಎಂದು ಡಿಸಿ ಸೂಚಿಸಿದರು.
ಬೂದಿಕೋಟೆ ಪಂಚಾಯಿತಿ ವ್ಯಾಪ್ತಿಗೆ ಎಷ್ಟು ಗ್ರಾಮಗಳು ಬರುತ್ತವೆ, ನೀರಿನ ಸಮಸ್ಯೆ ಇದಿಯೇ ಎಂದು ಪ್ರಶ್ನಿಸಿದಾಗ ಇದಕ್ಕೆ ಉತ್ತರಿಸಿ ಪಿಡಿಒ, ಯಾವುದೇ ಗ್ರಾಮಗಳಲ್ಲಿ ನೀರಿನ ಅಭಾವವಿಲ್ಲ, ಸಮಸ್ಯೆ ಕಂಡು ಬಂದಲ್ಲಿ ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.
ಜಾನುವಾರುಗಳು ಕುಡಿಯುವ ನೀರಿನ ತೊಟ್ಟಿಯನ್ನು ವೀಕ್ಷಿಸಿದಾಗ ಕೊಳಚೆಯಿಂದ ಕೂಡಿದ್ದು ಕಂಡು ಬಂತು. ಇದರಿಂದ ಗರಂ ಆದ ಡಿಸಿ ಡಾ.ಎಂ.ಆರ್​. ರವಿ ಅವರು, ಜಾನುವಾರುಗಳು ಈತರ ನೀರನ್ನು ಕುಡಿಯಲು ಸಾಧ್ಯವೇ, ನಿಮ್ಮ ಮನೆಯಲ್ಲಿ ಹೀಗೆ ಕೊಳಚೆ ನೀರು ಕುಡಿಯುತ್ತೀರಿ ಎಂದು ಜಲಗಾರರನ್ನು ತರಾಟೆಗೆ ತೆಗೆದುಕೊಂಡ ಅವರು, ಕೂಡಲೇ ತೊಟ್ಟಿಯನ್ನು ಸ್ವಚ್ಛಗೊಳಿಸಬೇಕು ಎಂದು ಸೂಚಿಸಿದರು.
ತಹಸೀಲ್ದಾರ್​ ಸುಜಾತಾ, ಆರ್​ಐ ಪವನ್​ ಕುಮಾರ್​, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಯುವರಾಜ್​, ಪಿಡಿಒ ಕಿಶೋರ್​ ಕುಮಾರ್​, ಕಾರ್ಯದರ್ಶಿ ಮುನಿರಾಜು, ಗ್ರಾಪಂ ಮಾಜಿ ಅಧ್ಯಕ್ಷ ಬಿ.ಆರ್​.ಮಂಜುನಾಥ್​, ಗ್ರಾಮ ಆಡಳಿತ ಅಧಿಕಾರಿ ವಿನೋದ್​, ಶರಣಪ್ಪ, ಅಂಜಲಿ ಇದ್ದರು.
ಐತಿಹಾಸಿಕ ಸ್ಥಳ ಸಂರಕ್ಷಣೆ ಅಗತ್ಯ:
ಬೂದಿಕೋಟೆಗೆ ಐತಿಹಾಸಿ ಇತಿಹಾಸವಿದೆ. ಅದನ್ನು ಅಭಿವೃದ್ಧಿಪಡಿಸಬೇಕಾದ ಅಗತ್ಯವಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಭರವಸೆ ನೀಡಿದರು. ಈಗಲೂ ಐತಿಹಾಸಿಕ ಸ್ಥಳಗಳು ಇರುವುದು ನಮ್ಮ ಅದೃಷ್ಟ. ಅವುಗಳನ್ನು ಉಳಿಸುವುದು ನಮ್ಮ ಕರ್ತವ್ಯವಾಗಿರುವುದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದು ಚರ್ಚಿಸಿ ಕೋಟೆ ಹಾಗೂ ಮಾರ್ಕಂಡೇಯ ಡ್ಯಾಮ್​ ಅನ್ನು ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net