ಬರಿ ಚುನಾವಣೆಗಾಗಿ ಕೆಲಸ ಮಾಡದೇ ಪಕ್ಷಕ್ಕಾಗಿ ಶಿಸ್ತಿನಲ್ಲಿ ಕಾರ್ಯನಿರ್ವಹಿಸಿ: arvind limbavali

  ಮಹದೇವಪುರ ಕ್ಷೇತ್ರದ ಮಾರತ್ತಹಳ್ಳಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಗ್ರೇಟರ್ ಬೆಂಗಳೂರು ಪ್ರಾಧಿಕಾರ  ಪ್ರಕಾರ ವಿಂಗಡಣೆಗೊಂಡಿರುವ ನಗರ ಮಂಡಲದ ವಾರ್ಡ್ ಗಳ ನೂತನ ವಾರ್ಡ್ ಅಧ್ಯಕ್ಷರನ್ನು ಮಾಜಿ ಸಚಿವ ಅರವಿಂದ ಲಿಂಬಾವಳಿ ಅಭಿನಂದಿಸಿದರು
ಮಹದೇವಪುರ ಕ್ಷೇತ್ರದ ಮಾರತ್ತಹಳ್ಳಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪ್ರಕಾರ ವಿಂಗಡಣೆಗೊಂಡಿರುವ ನಗರ ಮಂಡಲದ ವಾರ್ಡ್ ಗಳ ನೂತನ ವಾರ್ಡ್ ಅಧ್ಯಕ್ಷರನ್ನು ಮಾಜಿ ಸಚಿವ ಅರವಿಂದ ಲಿಂಬಾವಳಿ ಅಭಿನಂದಿಸಿದರು
Published on
ವಿಜಯವಾಣಿ ಸುದ್ದಿಜಾಲ ಮಹದೇವಪುರ: ಪಕ್ಷ ಕೊಟ್ಟ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಬಿಜೆಪಿ ಕಾರ್ಯಕರ್ತರಿಗೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಸಲಹೆ ನೀಡಿದರು. ಕ್ಷೇತ್ರದ ಮಾರತ್ತಹಳ್ಳಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಗ್ರೇಟರ್ ಬೆಂಗಳೂರು ಪ್ರಾಧಿಕಾರ  ಪ್ರಕಾರ ವಿಂಗಡಣೆಗೊಂಡಿರುವ ನಗರ ಮಂಡಲದ ವಾರ್ಡ್ ಗಳಿಗೆ ನೂತನ ವಾರ್ಡ್ ಅಧ್ಯಕ್ಷರ ಘೋಷಣೆ ಸಭೆಯಲ್ಲಿ ಮಾತನಾಡಿದರು.
ಕಾರ್ಯಕರ್ತರು ಯಾವುದೇ ಗೊಂದಲವಿಲ್ಲದೆ ಸಂಘಟನೆ ಮಾಡಿ ಪಕ್ಷದ ಸಿದ್ದಾಂತಗಳಿಗೆ ಬದ್ದರಾಗಿ ಕಾರ್ಯನಿರ್ವಾಹಿಸಬೇಕು ಜಿಬಿಎ ಚುನಾವಣೆಯಲ್ಲಿ ಆಕಾಂಕ್ಷೆಗಳ ಆಯ್ಕೆಯನ್ನು ಪಕ್ಷ ತೀರ್ಮಾನ ಮಾಡುತ್ತದೆ. ಚುನಾವಣೆಗಾಗಿ ಕೆಲಸ ಮಾಡಬೇಡಿ, ಪಕ್ಷಕ್ಕಾಗಿ ಶಿಸ್ತಿನ ಸಿಪಾಯಿಗಳಂತೆ ಕಾರ್ಯನಿರ್ವಾಹಿಸುವಂತೆ ತಿಳಿಸಿದರು.
ಮಹದೇವಪುರ ಕ್ಷೇತ್ರದಲ್ಲಿ ಸಾವಿರಾರು ಸಂಖ್ಯೆಯಲ್ಲಿ  ಅಕ್ರಮ ಬಾಂಗ್ಲಾದೇಶಿ ನಿವಾಸಿಗಳು ವಾಸವಿದ್ದಾರೆ. ಅವರ ಬಗ್ಗೆ ಸರ್ಕಾರ ಎಚ್ಚರ ವಹಿಸಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದಂತೆ ನೋಡಿಕೊಳ್ಳಬೇಕಿದೆ. ಈ ಹಿಂದೆಯೇ  ಸೇರ್ಪಡೆಗೊಂಡಿದ್ದಾರೆ ಅಂತಹವರನ್ನು ಪಟ್ಟಿಯಿಂದ ತೆಗೆದು ಹಾಕಬೇಕೆಂದು ಸರ್ಕಾರಕ್ಕೆ ಒತ್ತರಿಸಿದರು.  
 ನೂತನವಾಗಿ ಆಯ್ಕೆಯಾಗಿರುವ ವಾರ್ಡ್‌ಗಳ ಅಧ್ಯಕ್ಷರುಗಳಿಗೆ ಅಭಿನಂದನೆ ಸಲ್ಲಿಸಿ, ಪಕ್ಷವನ್ನು   ಸಂಘಟಿಸುವ ನಿಟ್ಟಿನಲ್ಲಿ ಹಾಗೂ ಪಕ್ಷದ ಸರ್ವತೋಮುಖ ಬೆಳವಣಿಗೆಯಲ್ಲಿ ನಿರ್ವಹಿಸಬೇಕಾದ ಜವಾಬ್ದಾರಿಗಳ ಕುರಿತು ಮಾಹಿತಿಯನ್ನು ನೀಡಿದರು. 
ಈ ಸಂದರ್ಭದಲ್ಲಿ ಕ್ಷೇತ್ರ ಬಿಜೆಪಿ ನಗರ ಮಂಡಲ ಅಧ್ಯಕ್ಷ ಎನ್.ಆರ್. ಶ್ರೀಧರ ರೆಡ್ಡಿ, ನಿಕಟಪೂರ್ವ ಅಧ್ಯಕ್ಷ ಮನೋಹರ ರೆಡ್ಡಿ, ರಾಜ್ಯ ಪರಿಷತ್ ಸದಸ್ಯರು ಎಲ್. ರಾಜೇಶ್, ಭೂ ನ್ಯಾಯಂಮಡಳಿ ಮಾಜಿ ಸದಸ್ಯ ಕೆ.ಎನ್. ಬಾಬುರೆಡ್ಡಿ ಮುಖಂಡರಾದ  ಹನುಮಂತಗೌಡ,  ನಾಗೇಶ್ ರೆಡ್ಡಿ, ಲೋಕೇಶ್, ಲೋಕನಾಥ್, ಮಂಜುನಾಥ್ ಗೋಪಿನಾಥ್ ಸೇರಿದಂತೆ ವಿವಿಧ ವಾರ್ಡಿನ ಅಧ್ಯಕ್ಷರು ಕಾರ್ಯಕರ್ತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net