ಅವೈಜ್ಞಾನಿಕ ಮಾನದಂಡ ನಮ್ಮಲ್ಲಿ ಹೇರಬೇಡಿ

ಯಾದಗಿರಿಯಲ್ಲಿ ಸೋಮವಾರ ಹಮ್ಮಿಕೊಂಡ ಎಸ್​ಐಆರ್​ ವಿರೋಧಿ ಜನಜಾಗೃತಿ ಜಾಥಾದಲ್ಲಿ ಜೆ.ಎಂ.ವೀರಸಂಗಯ್ಯ, ಮರೆಪ್ಪ ಚಟ್ಟೇರಕರ್​, ಮಾನಪ್ಪ ಕಟ್ಟಿಮನಿ, ಫಕೀರ್​ ಅಹ್ಮದ್​, ಭೀಮಣ್ಣ ಹೊಸಮನಿ, ಗೋಪಾಲ್​ ತೆಳಗೇರಿ, ಮಾಯಾ ಎಸ್​.ಆರ್​. ನಾಯಕ, ದುರ್ಗೇಶ, ಮಲ್ಲಿಕಾರ್ಜುನ ಸತ್ಯೆಪೇಟಿ ಇತರರಿದ್ದರು.
ಯಾದಗಿರಿಯಲ್ಲಿ ಸೋಮವಾರ ಹಮ್ಮಿಕೊಂಡ ಎಸ್​ಐಆರ್​ ವಿರೋಧಿ ಜನಜಾಗೃತಿ ಜಾಥಾದಲ್ಲಿ ಜೆ.ಎಂ.ವೀರಸಂಗಯ್ಯ, ಮರೆಪ್ಪ ಚಟ್ಟೇರಕರ್​, ಮಾನಪ್ಪ ಕಟ್ಟಿಮನಿ, ಫಕೀರ್​ ಅಹ್ಮದ್​, ಭೀಮಣ್ಣ ಹೊಸಮನಿ, ಗೋಪಾಲ್​ ತೆಳಗೇರಿ, ಮಾಯಾ ಎಸ್​.ಆರ್​. ನಾಯಕ, ದುರ್ಗೇಶ, ಮಲ್ಲಿಕಾರ್ಜುನ ಸತ್ಯೆಪೇಟಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 20ರಂದು ಬೆಂಗಳೂರಿನಲ್ಲಿ ಸಮಾವೇಶ
  • ಮತದಾರರ ಪಟ್ಟಿಯ ಪರಿಷ್ಕರಣೆಗೆ ವಿರೋಧ
ಯಾದಗಿರಿ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್​ಐಆರ್​) ಪ್ರಕ್ರಿಯೆ ವಿರೋಧಿಸಿ ಜೂ.20ರಂದು ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ನಡೆಯಲಿರುವ ಬೃಹತ್​ ಸಮಾವೇಶದ ನಿಮಿತ್ತ ಕಲ್ಯಾಣ ಕರ್ನಾಟಕ ಭಾಗದಿಂದ ಹೊರಡಲಿರುವ ಎಸ್​ಐಆರ್​ ವಿರೋಧಿ ಜನಜಾಗೃತಿ ಜಾಥಾಕ್ಕೆ ಸೋಮವಾರ ನಗರದ ಗಾಂಧಿ ವೃತ್ತದಲ್ಲಿ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ಎದ್ದೇಳು ಕರ್ನಾಟಕದ ಮುಖಂಡ ಜೆ.ಎಂ. ವೀರಸಂಗಯ್ಯ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಹೆಸರಿನಲ್ಲಿ ದೇಶಾದ್ಯಂತ ಲಾಂತರ ಅರ್ಹ ಮತದಾರರ ಸಾಂವಿಧಾನಿಕ ಮತದಾನದ ಹಕ್ಕು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಯಾವುದೇ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡದಂತೆ ಚುನಾವಣಾ ಆಯೋಗ ಕ್ರಮ ವಹಿಸಬೇಕು. ಇತರೆ ರಾಜ್ಯಗಳಲ್ಲಿ ಅನುಸರಿಸಲಾದ ಅವೈಾನಿಕ ಮಾನದಂಡಗಳನ್ನು ರಾಜ್ಯದಲ್ಲಿ ಜಾರಿಗೆ ತರಬಾರದು ಎಂದು ಒತ್ತಾಯಿಸಿದರು.
ಮತದಾರರ ಬಳಿ ಅಗತ್ಯ ದಾಖಲೆಗಳ ಕೊರತೆ ಇದ್ದಲ್ಲಿ ರಾಜ್ಯ ಸರ್ಕಾರ ಗ್ರಾಮಸಭೆಗಳ ಮೂಲಕ ದಾಖಲೆಗಳನ್ನು ಒದಗಿಸಬೇಕು. ಸಣ್ಣಪುಟ್ಟ ಮಾಹಿತಿ ಲೋಪಗಳನ್ನು ನೆಪವನ್ನಾಗಿ ಮಾಡಿಕೊಂಡು ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಪ್ರಯತ್ನ ನಡೆಯಬಾರದು ಎಂದು ಅವರು ಆಗ್ರಹಿಸಿದರು.
ಜಿಲ್ಲಾ ಸಂಯೋಜಕ ಮರೆಪ್ಪ ಚಟ್ಟೇರಕರ್​ ಮಾತನಾಡಿ, ಎಸ್​ಐಆರ್​ ಪ್ರಕ್ರಿಯೆ ಪ್ರಜಾಪ್ರಭುತ್ವದ ಮೂಲ ಮೌಲ್ಯಗಳಿಗೆ ಧಕ್ಕೆ ತರುವ ಬೆಳವಣಿಗೆಯಾಗಿದ್ದು, ಮತದಾರರ ಹಕ್ಕುಗಳ ರಣೆಗೆ ಜನರು ಸಂಟಿತ ಹೋರಾಟ ನಡೆಸಬೇಕಾಗಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವ ಮತ್ತು ಸಂವಿಧಾನ ಮೌಲ್ಯಗಳ ಸಂರಣೆಗೆ ಜನಾಂದೋಲನ ಅಗತ್ಯವಾಗಿದ್ದು, ಜಾಥಾ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ರಾಜ್ಯವ್ಯಾಪಿ ಹೋರಾಟವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಮಾನಪ್ಪ ಕಟ್ಟಿಮನಿ, ಫಕೀರ್​ ಅಹ್ಮದ್​, ಭೀಮಣ್ಣ ಹೊಸಮನಿ, ಗೋಪಾಲ್​ ತೆಳಗೇರಿ, ಮಾಯಾ ಎಸ್​.ಆರ್​. ನಾಯಕ, ದುರ್ಗೇಶ, ಮಲ್ಲಿಕಾರ್ಜುನ ಸತ್ಯೆಂಪೇಟ, ಇರ್ಫಾನ್​, ವಾದ್ಮೀಯಾ, ಜುಲಾನ್​, ಮೊಹ್ಮದ್​ ಸಲೀಂ, ಸೈಯದ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net