

ನೆಲಮಂಗಲ :
ಶ್ರವಣ ಆರೋಗ್ಯವು ಸಮಗ್ರ ಆರೋಗ್ಯದ ಅವಿಭಾಜ್ಯ ಅಂಗವಾಗಿದ್ದು, ಶ್ರವಣ ದೋಷ ಉಂಟಾದ ಕೂಡಲೇ ತಪಾಸಣೆಗೆ ಒಳಗಾಗಬೇಕು ಎಂದು ವೈದ್ಯ ಡಾ.ಪವನ್ ಶಿವಕುಮಾರ್ ತಿಳಿಸಿದರು.
ಸದಾಶಿವನಗರದ ರೋಟರಿ ಭವನದಲ್ಲಿ ರೋಟರಿ, ಪತ್ರಕರ್ತರ ಸಂ, ಈಶ್ವರ್ ಮಲ್ಪೆ ತಂಡದ ಸಹಯೋಗದಲ್ಲಿ ಆಯೋಜಿಸಿದ್ದ ಶ್ರವಣ ಉಚಿತ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಹದಲ್ಲಿ ಕಿವಿ ಅತ್ಯಂತ ಸೂಕ್ಷ$್ಮ ಅಂಗ. ಅದನ್ನು ಸರಿಯಾದ ರೀತಿ ಆರೈಕೆ ಮಾಡಬೇಕು. ಇಲ್ಲವಾದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಶ್ರವಣದೋಷಗಳು ಹುಟ್ಟಿನಿಂದಲೇ ಬರಬಹುದು ಇಲ್ಲವೆ ಯೌವನದಲ್ಲಿ ಕಾಣಿಸಿಕೊಳ್ಳಬಹುದು. ವಂಶಪಾರಂಪರ್ಯವಾಗಿಯೂ ಬರಬಹುದು. ವಯಸ್ಸಾದ ನಂತರ ಕಾಣಿಸಿಕೊಳ್ಳುವ ಶ್ರವಣದೋಷವೂ ಆಗಬಹುದು. ರ್ನಿಲಸದೆ ತವೈದ್ಯರನ್ನು ಕಂಡು, ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ರೋಟರಿ ಅಧ್ಯಕ್ಷ ಲೋಕೇಶ್ ಮಾತನಾಡಿ, ಸಮಾಜ ಸೇವಕ ಈಶ್ವರ್ ಮಲ್ಪೆ ತಂಡದಿಂದ ನಿರಂತರವಾಗಿ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ವಿತರಣೆ ಕಾರ್ಯ ಜಿಲ್ಲಾದ್ಯಂತ ನಡೆಯುತ್ತಿರುವುದು ಶ್ಲಾನೀಯ. ಇದು ಅತ್ಯಂತ ಜನೋಪಯೋಗಿ ಸೇವೆಯಾಗಿದೆ. ರೋಟರಿ ಸಂಸ್ಥೆಯಿಂದ ಇದೇ ಮೊದಲ ಬಾರಿಗೆ ಪ್ರತ್ಯೇಕವಾಗಿ ಶ್ರವಣ ತಪಾಸಣೆ ಶಿಬಿರ ನಡೆಸಲಾಗುತ್ತಿದೆ ಎಂದರು.
ಈಶ್ವರ್ ಮಲ್ಪೆ ತಂಡದ ಸಂಚಾಲಕ ಲವಕುಮಾರ್ ಮಾತನಾಡಿ, ಶ್ರವಣ ಪರೀೆ ಶಿಬಿರದಲ್ಲಿ ಸುಮಾರು 30ಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದು, ತ ವೈದ್ಯರಿಂದ ತಪಾಸಣೆ ಮಾಡಿಸಲಾಗಿದೆ. ಜತೆಗೆಶ್ರವಣ ಯಂತ್ರ ಪಡೆದುಕೊಳ್ಳುವವರಿಗೆ ಈಶ್ವರ್ ಮಲ್ಪೆ ತಂಡದಿಂದ ಶೇ.40ರಷ್ಟು ಸಹಾಯಧನ ನೀಡಲಾಗುವುದು. ಶ್ರವಣ ಪರೀೆ ನಡೆಸಲು ಅವಕಾಶ ಕಲ್ಪಿಸಿಕೊಟ್ಟ ರೋಟರಿ ಸಂಸ್ಥೆ ಹಾಗೂ ಪತ್ರಕರ್ತರ ಸಂದವರಿಗೆ ಧನ್ಯವಾದಗಳು ಎಂದರು.
ರೋಟರಿ ಕಾರ್ಯದರ್ಶಿ ಸುಶೀಲ್, ಮಾಜಿ ಅಧ್ಯಕ್ಷ ಟಿ.ನಾಗರಾಜು, ನಿಯೋಜಿತ ಅಧ್ಯಕ್ಷ ಚಂದ್ರಕುಮಾರ್, ನಿರ್ದೇಶಕ ರವಿಕುಮಾರ್, ರುದ್ರೇಗೌಡ, ಶಿವಶಂಕರ್ಪ್ರಸಾದ್, ಕುಮಾರ್, ಸೋಮಶೇಖರ್, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.