

ಪ್ರಮುಖ ಮುಖ್ಯಾಂಶಗಳು
ಬೆಳಗಾವಿ ಪಾಲಿಕೆಗೆ ಅನುದಾನ ನೀಡದಂತೆ ಒತ್ತಾಯ
ವಿಜಯವಾಣಿ ಸುದ್ದಿಜಾಲ ಬೆಳಗಾವಿ:
ಕರ್ನಾಟಕದ ಪರವಾಗಿ ಗಟ್ಟಿಯಾಗಿ ನಿಲ್ಲದ ಸ್ಥಳೀಯ ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರ ಯಾವುದೇ ರೀತಿಯ ಅನುದಾನ ನೀಡಬಾರದು ಎಂದು ಒತ್ತಾಯಿಸಿ ಗಡಿನಾಡು ಕನ್ನಡಿಗರ ಸೇನೆ ಕಾರ್ಯಕರ್ತರು ಮಂಗಳವಾರ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಈಚೆಗೆ ಪಾಲಿಕೆಯ ಮಹಾಪೌರರು ಹಾಗೂ ಉಪಮಹಾಪೌರರು ಡಿ.ಕೆ.ಶಿವುಕುಮಾರ ಅವರನ್ನು ಭೇಟಿಯಾಗಿ 250 ಕೋಟಿ ರೂ.ಅನುದಾನ ಮಂಜೂರು ಮಾಡುವಂತೆ ಮನವಿ ಮಾಡಲಾಗಿದೆ. ಪಾಲಿಕೆಯಲ್ಲಿ ಕರ್ನಾಟಕದ ಪರವಾಗಿ ಗೊತ್ತುವಳಿ ಅಂಗೀಕರಿಸಬೇಕೆಂದು ಕನ್ನಡಪರ ಸಂಘಟನೆಗಳು ಕಳೆದ ಹಲವು ದಿನಗಳಿಂದ ಒತ್ತಾಯಿಸುತ್ತಿವೆ. ಆದರೆ ಕನ್ನಡಪರ ನಿರ್ಣಯ ತೆಗೆದುಕೊಳ್ಳದೆ ನಾಡದ್ರೋಹದ ಕೆಲಸ ಮಾಡಿರುವ ಮೇಯರ್ ಹಾಗೂ ಉಪ ಮೇಯರ್ ರಾಜ್ಯ ಸರ್ಕಾರದಿಂದ ಅನುದಾನ ಕೇಳಿರುವುದು ನಾಚೀಕೆಗೇಡಿತನವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಅನುದಾನ ನೀಡಬಾರದು ಎಂದು ಮನವಿ ಮೂಲಕ ಒತ್ತಾಯಿಸಲಾಗಿದೆ.
ಬಲರಾಮ ಮಾಸೇನಟ್ಟಿ, ಸಂತೋಷ ತಳ್ಳಿಮನಿ, ಸಂತೋಷ ಮಾಸೇನಟ್ಟಿ, ಎಸ್.ಎಸ್ ಮೂಕನ್ನವರ, ಆನಂದ ಬಿಲಾವರ ಇತರರು ಇದ್ದರು.