ಮೆಡಿಕಲ್ ಸೀಟು ವಂಚನೆಗೆ ಮೋಸ ಹೋಗಬೇಡಿ: ಆಕಾಂಕ್ಷಿಗಳಿಗೆ ಕೆಇಎ ಸಲಹೆ ಏನು?

ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
Published on

ಪ್ರಮುಖ ಮುಖ್ಯಾಂಶಗಳು

  • ಕೆಲವರು ಸರ್ಕಾರಿ ಕೋಟಾದ ಸೀಟು ಹೊರತುಪಡಿಸಿ ಇತರ ಸೀಟುಗಳನ್ನು ಕೊಡಿಸುವುದಾಗಿ ನಂಬಿಸುವ ಪ್ರಯತ್ನಗಳ ಬಗ್ಗೆ ದೂರುಗಳು ಬರುತ್ತಿದ್ದು ಈ ಬಗ್ಗೆ ಎಚ್ಚರ ವಹಿಸಿ
  • ಸೀಟು ಕೊಡಿಸುತ್ತೇವೆ ಎಂದು ಯಾರಾದರು ಹೇಳಿದರೆ ಅದರ ಹಿಂದೆ ಮೋಸದ ಉದ್ದೇಶ ಇರುತ್ತದೆ
  • ಸರ್ಕಾರಿ ಕಾಲೇಜುಗಳ ಶೇ.15 ಸೀಟು ಮಾತ್ರ ಎನ್‌ಎಂಸಿ ಮೂಲಕ ಹಂಚಿಕೆ ಮಾಡಲಾಗುತ್ತದೆ. ಉಳಿದ ಶೇ.85 ಸೀಟುಗಳನ್ನು ಕೆಇಎ ಮೂಲಕ ಹಂಚಿಕೆ ಮಾಡಲಾಗುತ್ತದೆ. ಹಾಗೆಯೇ ಖಾಸಗಿ ವೈದ್ಯಕೀಯ ಕಾಲೇಜುಗಳ/ ಖಾಸಗಿ ವಿಶ್ವವಿದ್ಯಾಲಯಗಳ ಶೇ.100 ಸೀಟು ಕೆಇಎ ಮೂಲಕವೇ ಹಂಚಿಕೆ
ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್‌ಗಳ ಸರ್ಕಾರಿ, ಮ್ಯಾನೇಜ್‌ಮೆಂಟ್, ಎನ್‌ಆರ್‌ಐ ಸೇರಿ ಎಲ್ಲ ರೀತಿಯ ಕೋಟಾ ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕವೇ ಹಂಚಿಕೆ ಮಾಡಲಿದ್ದು, ಈ ವಿಷಯದಲ್ಲಿ ಯಾವುದೇ ಗೊಂದಲ ಬೇಡ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಸ್ಪಷ್ಟಪಡಿಸಿದ್ದಾರೆ.
ಕೆಲವರು ಸರ್ಕಾರಿ ಕೋಟಾದ ಸೀಟು ಹೊರತುಪಡಿಸಿ ಇತರ ಸೀಟುಗಳನ್ನು ಕೊಡಿಸುವುದಾಗಿ ನಂಬಿಸುವ ಪ್ರಯತ್ನಗಳ ಬಗ್ಗೆ ದೂರುಗಳು ಬರುತ್ತಿದ್ದು ಈ ಬಗ್ಗೆ ಎಚ್ಚರ ವಹಿಸಿ ಎಂದು ಅವರು ಸಲಹೆ ನೀಡಿದ್ದಾರೆ.
ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿಗೆ ಮ್ಯಾನೇಜ್‌ಮೆಂಟ್ ಮತ್ತು ಎನ್‌ಆರ್‌ಐ ಸೀಟುಗಳ ಶುಲ್ಕ ನಿಗದಿಪಡಿಸುವ ಅಧಿಕಾರ ಇದೆ. ಆದರೆ ಸೀಟು ಹಂಚಿಕೆಗೆ ಅದಕ್ಕೆ ಅವಕಾಶ ಇಲ್ಲ. ಅದೇನಿದ್ದರೂ ಕೆಇಎ ಮೂಲಕವೇ ಆಗಲಿದೆ. ಇದರ ನಡುವೆಯೂ ಸೀಟು ಕೊಡಿಸುತ್ತೇವೆ ಎಂದು ಯಾರಾದರು ಹೇಳಿದರೆ ಅದರ ಹಿಂದೆ ಮೋಸದ ಉದ್ದೇಶ ಇರುತ್ತದೆ ಎಂದು ಹೇಳಿದ್ದಾರೆ.
ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.15 ಸೀಟುಗಳನ್ನು ಮಾತ್ರ ಎನ್‌ಎಂಸಿ ಮೂಲಕ ಹಂಚಿಕೆ ಮಾಡಲಾಗುತ್ತದೆ. ಉಳಿದ ಶೇ.85 ಸೀಟುಗಳನ್ನು ಕೆಇಎ ಮೂಲಕ ಹಂಚಿಕೆ ಮಾಡಲಾಗುತ್ತದೆ. ಹಾಗೆಯೇ ಖಾಸಗಿ ವೈದ್ಯಕೀಯ ಕಾಲೇಜುಗಳ/ ಖಾಸಗಿ ವಿಶ್ವವಿದ್ಯಾಲಯಗಳ ಶೇ.100 ಸೀಟುಗಳನ್ನು ಕೆಇಎ ಮೂಲಕವೇ ಹಂಚಿಕೆ ಮಾಡಲಾಗುತ್ತದೆ. ಕೆಲವು ಡೀಮ್ಡ್ ವಿಶ್ವವಿದ್ಯಾಲಯಗಳ ಅಲ್ಪ ಪ್ರಮಾಣದ ಸೀಟು ಬಿಟ್ಟು ಉಳಿದ ಎಲ್ಲವನ್ನೂ ಎನ್‌ಎಂಸಿ ಮೂಲಕವೇ ಹಂಚಿಕೆಯಾಗುತ್ತದೆ ಎಂದು ಅವರು ವಿವರಿಸಿದರು.
ನೀಟ್ ರ‌್ಯಾಂಕ್ ಆಧಾರದ ಮೇಲೆ ಕೆಇಎ ಮೂಲಕವೇ ಸೀಟು ಹಂಚಿಕೆಯಾಗಲಿದೆ. ಈ ವಿಷಯದಲ್ಲಿ ಯಾವುದೇ ಗೊಂದಲ ಬೇಡ ಎಂದು ಪುನರುಚ್ಚಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net