ಬೆಂಗಳೂರು-ಮೈಸೂರು ಮತ್ತು ಬೆಂಗಳೂರು-ಹೊಸೂರು ಮಾರ್ಗಗಳು ಸೇರಿದಂತೆ ಪ್ರಮುಖ ರೈಲ್ವೆ ಕಾರಿಡಾರ್‌ಗಳ ಅಕ್ಕಪಕ್ಕದಲ್ಲಿ ಹಲವಾರು ಸ್ಥಳಗಳಲ್ಲಿ ಕಸ ಮತ್ತು ತ್ಯಾಜ್ಯಗಳು ಶೇಖರಣೆಗೊಂಡಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಮ್ಮೆ ತ್ಯಾಜ್ಯವನ್ನು ಪದೇ ಪದೇ ಸುರಿದರೆ, ಅದು ರೈಲ್ವೆ ಜಾಗ ಮತ್ತು ಪಕ್ಕದ ಆಸ್ತಿಗಳ ನಡುವಿನ ಗಡಿಯನ್ನು ಸವೆಸುತ್ತದೆ, ಅಂತಿಮವಾಗಿ ಇದು ರೈಲ್ವೆ ಭೂ ಒತ್ತುವರಿಗೆ ದಾರಿ ಮಾಡಿಕೊಡುತ್ತದೆ" ಎಂದು ಆ ಅಧಿಕಾರಿ ಹೇಳಿದರು, (ಏಜೆನ್ಸೀಸ್).