ಪಟ್ಟಣದ ಪಿಎಂಶ್ರೀ ಆದರ್ಶ ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಪಿಎಂಶ್ರೀ ಯೋಜನೆಯಿಂದ ಖರೀದಿಸಿರುವ ಉಪಕರಣಗಳನ್ನು ಪರಿಶೀಲಿಸಿ ಸಮರ್ಪಕವಾಗಿ ಬಳಕೆಯಾಗದಿರುವುದನ್ನ ಕಂಡು ಮುಖ ಶಿಕ್ಷಕ ವೆಂಕಟೇಶ್ ಅವರನ್ನು ತರಾಟೆಗೆ ತೆಗೆದುಕೊಂಡು, ಶಾಲಾ ಕೊಠಡಿಗಳಲ್ಲಿ ಸ್ಮಾರ್ಟ್ ಕ್ಲಾಸ್ ನಡೆಸಲು ಲಕ್ಷಾಂತರ ರೂ ಮೌಲ್ಯದ ಪರಿಕರಗಳಿದ್ದು, ಅವುಗಳನ್ನು ತರಗತಿಗಳಲ್ಲಿ ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸೂಚಿಸಿದರು.