ಅಂಗವಿಕಲ ಮಕ್ಕಳೆಂದು ಸ್ಥೈರ್ಯ ಕುಗ್ಗಿಸಿಕೊಳ್ಳದಿರಿ / HOSAKOTE

ಹೊಸಕೋಟೆಯ ಅಂಗನವಾಡಿ ಸಂಪನ್ಮೂಲ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲ ಮಕ್ಕಳ ತಾಯಂದಿರಿಗೆ ಟೇಲರಿಂಗ್​ ತರಬೇತಿ ನೀಡುವ ಕಾರ್ಯಕ್ರಮದಲ್ಲಿ ಎಂವಿಜೆ ಆಸ್ಪತ್ರೆಯ ವೈದ್ಯರಾದ ಡಾ.ವಿನಯ್​, ಡಾ.ರಜತ್​, ಡಾ.ವೈಭವ್​, ನಿರ್ಮಲಾ, ವಿದ್ಯಾ ಸಂಸ್ಥೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜನಾಧಿಕಾರಿ ಸುಷ್ಮಾ, ಟುಗೆಥೆರಿಕ್ಸ್​ನ ಸಂಯೋಜನಾಧಿಕಾರಿ ವರ್ಷಾ, ಪ್ರೇಮಾ ಇದ್ದರು.
ಹೊಸಕೋಟೆಯ ಅಂಗನವಾಡಿ ಸಂಪನ್ಮೂಲ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲ ಮಕ್ಕಳ ತಾಯಂದಿರಿಗೆ ಟೇಲರಿಂಗ್​ ತರಬೇತಿ ನೀಡುವ ಕಾರ್ಯಕ್ರಮದಲ್ಲಿ ಎಂವಿಜೆ ಆಸ್ಪತ್ರೆಯ ವೈದ್ಯರಾದ ಡಾ.ವಿನಯ್​, ಡಾ.ರಜತ್​, ಡಾ.ವೈಭವ್​, ನಿರ್ಮಲಾ, ವಿದ್ಯಾ ಸಂಸ್ಥೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜನಾಧಿಕಾರಿ ಸುಷ್ಮಾ, ಟುಗೆಥೆರಿಕ್ಸ್​ನ ಸಂಯೋಜನಾಧಿಕಾರಿ ವರ್ಷಾ, ಪ್ರೇಮಾ ಇದ್ದರು.
Published on
ಹೊಸಕೋಟೆ : ಅಂಗವಿಕಲ ಮಕ್ಕಳು ಹೊರೆ ಅಥವಾ ಶಾಪವಲ್ಲ, ತಾಯಂದಿರು ಮಾನಸಿಕ ಸ್ಥೆ$ರ್ಯ ಕುಗ್ಗಿಸಿಕೊಳ್ಳುವ ಅವಶ್ಯಕತೆಯಿಲ್ಲ, ಮಕ್ಕಳು ದೇವರ ಸಮಾನ ಎಂದು ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಅಧಿಕಾರಿ ಶಿವಮ್ಮ ಹೇಳಿದರು.
ನಗರದ ಜಿಕೆಬಿಎಂಎಸ್​ ಶಾಲಾ ಅವರಣದ ಅಂಗನವಾಡಿ ಸಂಪನ್ಮೂಲ ಕೇಂದ್ರದಲ್ಲಿ ದಿ ಅಸೋಸಿಯೇಷನ್​ ಆಫ್​ ಪೀಪಲ್​ ವಿಥ್​ ಡಿಸೆಬಿಲಿಟಿ, ಬಿಐಇಆರ್​ಟಿ ವಿದ್ಯಾ ಸಂಸ್ಥೆ, ಟುಗೆಥೆರಿಕ್ಸ್​ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲ ಮಕ್ಕಳ ತಾಯಂದಿರಿಗೆ ಟೇಲರಿಂಗ್​ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು.
ಪೌಷ್ಟಿಕ ಆಹಾರ ಎಂದರೆ ದುಬಾರಿ ಆಹಾರವಲ್ಲ, ದಿನನಿತ್ಯ ನಾವುಗಳೇ ಬಳಸುವ ಬೇಳೆ ಕಾಳುಗಳನ್ನು ಮೊಳಕೆ ಕಟ್ಟಿದ ಸಾಂಬರ್​ ಮಾಡುವುದು, ಹಸಿ ಸೊಪು$್ಪ, ತರಕಾರಿಗಳ ಬಳಕೆ ಮಾಡಿದಲ್ಲಿ ಪೌಷ್ಟಿಕ ಆಹಾರ ಕೊರತೆ ನೀಗಿಸಬಹುದು. ಅಂಗವಿಕಲ ಮಕ್ಕಳ ಆರೈಕೆ ಮಾಡುವುದೇ ಸವಾಲಿನ ವಿಷಯ. ಅಂತಹದ್ದರಲ್ಲಿ ಅಂಗವಿಕಲ ಮಕ್ಕಳಿರುವ ಮಹಿಳೆಯರು ಆರ್ಥಿಕ ಸಬಲತೆ ಸಾಧಿಸುವುದು ದೂರದ ಮಾತು. ಗ್ರಾಮೀಣ ಭಾಗದ ಮಹಿಳೆಯರು ಗರ್ಭಿಣಿಯಾಗಿದ್ದಾಗ ಸರಿಯಾದ ತಪಾಸಣೆ ಮತ್ತು ಸಮಾಲೋಚನೆಗೆ ಒಳಗಾಗದೆ ಮಕ್ಕಳು ಅಂಗವಿಕಲತೆಯಿಂದ ಪಾರಾಗುವುದನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಹಾಗಾಗಿಗರ್ಭಿಣಿ ಮಹಿಳೆಯರು ಸಂಕುಚಿತ ಮತ್ತು ಮೂಢ ಆಚರಣೆಗಳಿಗೆ ಬಲಿಯಾಗದೆ ಸರಿಯಾದ ಸಮಯಕ್ಕೆ ಸೂಕ್ತ ತಪಾಸಣೆ ಮತ್ತು ಜಿಕಿತ್ಸೆ ಪಡೆದುಕೊಂಡು ಭವಿಷ್ಯದಲ್ಲಿ ಆಗಬಹುದಾದ ಅನಾಹುತಗಳಿಂದ ತಪ್ಪಿಸಿಕೊಳ್ಳಬೇಕು ಎಂದರು.
ಆರಂಭಿಕ ಅಂಗವೈಕಲ್ಯ ಮಕ್ಕಳ ಸಮಾಲೋಚನಾ ಸಂಸ್ಥೆಯ ರಾಜ್ಯ ಸಂಯೋಜಕ ಮನುಕುಮಾರ್​ ಮಾತನಾಡಿ, ತಾಲೂಕಿನಲ್ಲಿ 294 ಅಂಗವಿಕಲ ಮಕ್ಕಳಿದ್ದಾರ. ಅದರಲ್ಲಿ 8 ವರ್ಷದೊಳಗಿನ ಮಕ್ಕಳ ತಾಯಂದಿರಿಗೆ ಈ ತರಬೇತಿ ನೀಡಲಾಗುತ್ತಿದೆ. ಇಂತಹ ಮಕ್ಕಳಿಗೆ ಎಳೆಯ ವಯಸ್ಸಿನಲ್ಲೇ ಸೂಕ್ತ ಚಿಕಿತ್ಸೆ ನೀಡಿದರೆ ಸ್ಪಂದನೆ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಎಂಬ ಉದ್ದೇಶದಿಂದ ನಗರದ ಎಂವಿಜೆ ಆಸ್ಪತ್ರೆಯೊಂದಿಗೆ ಐದು ವರ್ಷದ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ತಾಲೂಕಿನ ಯಾವುದೇ ಅಂಗವಿಕಲ ಮಗು ನಮ್ಮ ಸಂಸ್ಥೆಯ ಮೂಲಕ ತಪಾಸಣೆ, ಚಿಕಿತ್ಸೆಗೆ ಹೋದರೆ ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಇದನ್ನು ಫಲಾನುಭವಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ವಿದ್ಯಾ ಸಂಸ್ಥೆಯ ಸಂಯೋಜನಾಧಿಕಾರಿ ಸುಷ್ಮಾ ಮಾತನಾಡಿ, ಅಂಗವಿಕಲ ಮಕ್ಕಳ ಪಾಲಕರು ತಮ್ಮ ಮಕ್ಕಳ ತಪಾಸಣೆಗಾಗಿ ಕೇಂದ್ರಕ್ಕೆ ಬಂದ ಸಂದರ್ಭದಲ್ಲಿ ಟೇಲರಿಂಗ್​ ಕಲಿಕೆಗೆ ಅನುವಾಗಲೆಂದು ಇಂದಿನಿಂದ ಮೂರು ತಿಂಗಳವರೆಗೆ ತರಬೇತಿ ನೀಡಲಾಗುತ್ತಿದೆ.ಪಾಲಕರು ಇದರ ಸದುಪಯೋಗ ಪಡಿಸಿಕೊಂಡು ಮನೆಯಲ್ಲೇ ಸಣ್ಣಪುಟ್ಟ ಖರ್ಚುಗಳಿಗೆ ಅನುಕೂಲವಾಗುವಂತೆ ಕುಲಕಸುಬನ್ನಾಗಿ ಮಾಡಿಕೊಳ್ಳಬೇಕೆಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net