ಮಠ-ಮಂದಿರ ಅಭಿವೃದ್ಧಿಗೆ ದಾನಿಗಳ ಸಹಕಾರ ಅಗತ್ಯ

ಸೇಡಂನ ಶ್ರೀ ಕೊತ್ತಲ ಬಸವೇಶ್ವರ ದೇವಾಲಯಕ್ಕೆ 5 ಎಕರೆ ಭೂಮಿ ದಾನ ಮಾಡಿದ ಮಾಲಪಾಣಿ ಕುಟುಂಬ ಸದಸ್ಯರನ್ನು ದೇವಾಲಯದ ಪ್ರಮುಖರು ಸತ್ಕರಿಸಿದರು. ಶ್ರೀ ಪಂಚಾಕ್ಷರ ಸ್ವಾಮೀಜಿ, ಶ್ರೀ ಸದಾಶಿವ ಸ್ವಾಮೀಜಿ, ಮಾಜಿ ಸಂಸದ ಬಸವರಾಜ ಪಾಟೀಲ್​ ಸೇಡಂ, ಮಾಜಿ ಶಾಸಕ ರಾಜಕುಮಾರ ಪಾಟೀಲ್​ ತೆಲ್ಕೂರ ಇತರರಿದ್ದರು.
ಸೇಡಂನ ಶ್ರೀ ಕೊತ್ತಲ ಬಸವೇಶ್ವರ ದೇವಾಲಯಕ್ಕೆ 5 ಎಕರೆ ಭೂಮಿ ದಾನ ಮಾಡಿದ ಮಾಲಪಾಣಿ ಕುಟುಂಬ ಸದಸ್ಯರನ್ನು ದೇವಾಲಯದ ಪ್ರಮುಖರು ಸತ್ಕರಿಸಿದರು. ಶ್ರೀ ಪಂಚಾಕ್ಷರ ಸ್ವಾಮೀಜಿ, ಶ್ರೀ ಸದಾಶಿವ ಸ್ವಾಮೀಜಿ, ಮಾಜಿ ಸಂಸದ ಬಸವರಾಜ ಪಾಟೀಲ್​ ಸೇಡಂ, ಮಾಜಿ ಶಾಸಕ ರಾಜಕುಮಾರ ಪಾಟೀಲ್​ ತೆಲ್ಕೂರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಂಸದ ಬಸವರಾಜ ಪಾಟೀಲ್​ ಅನಿಸಿಕೆ
  • ಮಾಲಪಾಣಿ ಕುಟುಂಬದಿಂದ ಭೂಮಿದಾನ
ಸೇಡಂ : ಶ್ರೀ ಕೊತ್ತಲ ಬಸವೇಶ್ವರ ದೇವಾಲಯಕ್ಕೆ ಹೊಂದಿಕೊಂಡಿರುವ ಮಾಲಪಾಣಿ ಪರಿವಾರದ 5 ಎಕರೆಗೂ ಅಧಿಕ ಜಮೀನು ದೇವಾಲಯಕ್ಕೆ ದಾನ ಮಾಡುವ ಮೂಲಕ ಧರ್ಮದ ಕಾರ್ಯಕ್ಕೆ ಕೈಜೋಡಿಸಿರುವುದು ಶ್ಲಾನೀಯ ಎಂದು ಮಾಜಿ ಸಂಸದ ಬಸವರಾಜ ಪಾಟೀಲ್​ ಸೇಡಂ ಹೇಳಿದರು.
ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಮಂಗಳವಾರ ದೇವಾಲಯ ಪಂಚಮಂಡಳಿ ಆಯೋಜಿಸಿದ್ದ ಭೂದಾನ ಪತ್ರ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದಿನ ಪೂಜ್ಯರಾದ ಶ್ರೀ ಸಪ್ಪಣ್ಣಾರ್ಯ ಶಿವಯೋಗಿ, ಶ್ರೀ ಮಡಿವಾಳಯ್ಯ ಸ್ವಾಮೀಜಿ ಹಾಗೂ ಪ್ರಸ್ತುತ ಪೀಠಾಧಿಪತಿ ಶ್ರೀ ಸದಾಶಿವ ಸ್ವಾಮಿಗಳು ದೇವಾಲಯದ ಅಭಿವೃದ್ಧಿಗಾಗಿ ಶ್ರಮಿಸುತ್ತಾ ಬಂದಿದ್ದಾರೆ. ದಿನ ಕಳೆದಂತೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವುದಿಂದ ಸ್ಥಳದ ಕೊರತೆ ಇತ್ತು. ಮಾಪಲಾಣಿ ಪರಿವಾರ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ ನೀಡಿರುವುದರಿಂದ ದೇವಾಲಯದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ಮಾಜಿ ಶಾಸಕ ರಾಜಕುಮಾರ ಪಾಟೀಲ್​ ತೆಲ್ಕೂರ ಮಾತನಾಡಿ, ಸಮಾಜದಲ್ಲಿ ದಾನಿಗಳು ಇರಬೇಕು. ಅಂದಾಗ ದೇವಸ್ಥಾನ, ಮಠಗಳು ಅಭಿವೃದ್ಧಿ ಹೊಂದಲು ಸಾಧ್ಯ. ಸೇಡಂ ತಾಲೂಕು ಯಾವತ್ತಿಗೂ ಧರ್ಮದ ಕಾರ್ಯದಲ್ಲಿ ಮುಂದಿದ್ದು, ಮಾಲಪಾಣಿ ಪರಿವಾರದ ಕಾರ್ಯ ಇನ್ನೊಬ್ಬರಿಗೆ ಪ್ರೇರಣೆಯಾಗಿದೆ ಎಂದು ಬಣ್ಣಿಸಿದರು.
ಮಾಲಪಾಣಿ ಪರಿವಾರದ ಅನೀಲ ಮಾಲಪಾಣಿ ಮಾತನಾಡಿದರು. ಶ್ರೀ ಪಂಚಾಕ್ಷರ ಸ್ವಾಮೀಜಿ ಸಾನ್ನಿಧ್ಯ, ಶ್ರೀ ಸದಾಶಿವ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಭೂದಾನಿಗಳಾದ ಯಮುನಾಬಾಯಿ ಮಾಲಪಾಣಿ, ಅನುರಾಧಾ ಮಾಲಪಾಣಿ, ಬ್ರಿಜ್​ಕವರ್​ ಮಾಲಪಾಣಿ ಇತರರಿದ್ದರು. ದೇವಾಲಯದ ಕೋಶಾಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ಬಾಳಿ ಪ್ರಾರ್ಥಿಸಿದರು. ವೀರೇಶ ಹೂಗಾರ ನಿರೂಪಣೆ ಮಾಡಿದರು. ಸಂಗಮೇಶ ಇಂಜಳ್ಳಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net