ತಾಲ್ಲೂಕಿನಾದ್ಯಂತ ತೀವ್ರ ಮಳೆಯ ಅಭಾವ ಎದುರಾಗಿರುವ ಹಿನ್ನೆಲೆಯಲ್ಲಿ, ಗಂಗುನಾಯಕ ತಾಂಡಾದಲ್ಲಿ ನಡೆದ ಈ ವಿಶಿಷ್ಟ ಕತ್ತೆಗಳ ಮದುವೆ ಆಚರಣೆಯು ಸುತ್ತಮುತ್ತಲಿನ ಹಳ್ಳಿಗಳ ಜನರ ಗಮನ ಸೆಳೆದಿದೆ. ಈ ಸಂದರ್ಭದಲ್ಲಿ ಅಶೋಕ ಚವ್ಹಾಣ, ಸುಧಾಕರ ಪವ್ಹಾರ, ರಾಜು ಚವ್ಹಾಣ, ತಿಪ್ಪಣ್ಣ ಗುಣಾಜಿ, ಗೋವಿಂದ ಪವ್ಹಾರ, ರವಿಪ್ರಕಾಶ ನರನಾಳ, ಕೀಶನ ಕಾರಭಾರಿ, ರಾಜಪ್ಪ, ಸುಭಾಷ, ಭೀಮಶಾ, ಬಾಲು ಪೂಜಾರಿ, ಹಣಮಂತ, ಗೋಪಾಲ, ಅಂಬರೀಷ್, ಸುರೇಶ ಮಂದರಗಿ, ನಾಗಪ್ಪ, ಧನಶ್ರೀ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.