ಡಾನ್ ಬೋಸ್ಕೋದಿಂದ ಬಡ ಮಕ್ಕಳ ಶಿಕ್ಷಣಕ್ಕೆ ಒತ್ತು

ಕೊಳ್ಳೇಗಾಲ ತಾಲೂಕಿನ ಪ್ರಕಾಶ್ ಪಾಳ್ಯ ಗ್ರಾಮದ ಡಾನ್ ಬೋಸ್ಕೋ ವಿದ್ಯಾ ಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಂಸ್ಥೆಯ ರಜತ ಮಹೋತ್ಸವ ಹಾಗೂ ಶಾಲಾ-ಕಾಲೇಜಿನ ವಾರ್ಷಿಕೋತ್ಸವ ಸಮಾರಂಭಕ್ಕೆ ಬೆಂಗಳೂರಿನ ಡಾನ್ ಬಾಸ್ಕೋ ಸಂಸ್ಥೆ ಪ್ರಾತ್ಯಾಧಿಕಾರಿ ಫಾ.ಜೋಸ್ ಕೋಯಿಕಲ್ ಚಾಲನೆ ನೀಡಿದರು. ಫಾದರ್ ಲಾರೆನ್ಸ್, ಪ್ರಭಾರ ಡಿಡಿ ಪ್ರಿಯಾ ಶಂಕರ್, ರಾಜಾ ಮಾಣಿಕ್ಯಂ, ಫಾದರ್ ಸೆಬ್ಬಾಸ್ಟೀಯನ್ ಇತರರು ಇದ್ದರು.

Published on
ಕೊಳ್ಳೇಗಾಲ: ಡಾನ್ ಬೋಸ್ಕೋ ವಿದ್ಯಾಸಂಸ್ಥೆ ಗ್ರಾಮೀಣ ಭಾಗದ ಬಡ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಶ್ರಮಿಸುತ್ತಿದೆ ಎಂದು ಬೆಂಗಳೂರಿನ ಡಾನ್ ಬಾಸ್ಕೋ ಸಂಸ್ಥೆ ಪ್ರಾತ್ಯಾಧಿಕಾರಿ ಫಾದರ್ ಜೋಸ್ ಕೋಯಿಕಲ್ ಹೇಳಿದರು.

ತಾಲೂಕಿನ ಪ್ರಕಾಶ್ ಪಾಳ್ಯ ಗ್ರಾಮದ ಡಾನ್ ಬೋಸ್ಕೋ ವಿದ್ಯಾ ಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಂಸ್ಥೆಯ ರಜತ ಮಹೋತ್ಸವ ಹಾಗೂ ಶಾಲಾ-ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಪ್ರಕಾಶ್ ಪಾಳ್ಯದಲ್ಲಿ ಡಾನ್ ಬೋಸ್ಕೋ ವಿದ್ಯಾ ಸಂಸ್ಥೆ ಸ್ಥಾಪನೆಯಾಗಿ 25 ವರ್ಷಗಳು ತುಂಬಿದೆ. ಅಂದಿನ ಫಾದರ್ ರಾಜ್ ಅವರು ಸಂಸ್ಥೆ ಸ್ಥಾಪಿಸಿದವರು ಎಂದು ಸ್ಮರಿಸಿದರು. ಫಾದರ್ ರಾಜ್ ಅವರ ಸ್ಮರಣಾರ್ಥ ಸಂಸ್ಥೆಯ ರಜತ ಮಹೋತ್ಸವವನ್ನು ಏರ್ಪಡಿ ಸಿರುವುದು ಶ್ಲಾಘನೀಯ ಎಂದರು.

ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ ಕವಿತಾ ಮಾತಾನಾಡಿ, ಶಿಕ್ಷಣ ಜೀವನದ ಅವಿಭಾಜ್ಯ ಅಂಗವಾಗಿದೆ. ವಿದ್ಯಾರ್ಥಿಗಳು ತಮ್ಮ ತಮ್ಮ ಜವಾಬ್ದಾರಿ ಹಾಗೂ ಕರ್ತವ್ಯವನ್ನು ಅರಿತು ಉತ್ತಮ ನಾಗರಿಕರಾಗಬೇಕು ಎಂದರು.

ಸುಗಮ ಸಂಗೀತ ಅಂತಾರಾಷ್ಟ್ರೀಯ ಗಾಯಕ ಎಂ.ಅರುಣ್ ಕುಮಾರ್ ಮಾತನಾಡಿ, ಡಾನ್ ಬೋಸ್ಕೋ ವಿದ್ಯಾಸಂಸ್ಥೆ ಸ್ಥಾಪಿಸಿದ ಅಂದಿನ ಫಾದರ್ ರಾಜ್ ಅವರ ಶ್ರಮ, ದೂರದೃಷ್ಟಿ ಪ್ರಸಂಶನೀಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಕಾಶ್ ಪಾಳ್ಯ ಡಾನ್ ಬೋಸ್ಕೋ ಸಂಸ್ಥೆ ರೆಕ್ಟರ್ ಫಾದರ್ ಲಾರೆನ್ಸ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರ ಡಿಡಿ ಪ್ರಿಯಾ ಶಂಕರ್, ಬಿಆರ್‌ಪಿ ರಾಜಾ ಮಾಣಿಕ್ಯಂ, ಡಾನ್ ಬೋಸ್ಕೋ ಶಾಲೆ ಮುಖ್ಯಶಿಕ್ಷಕ ಫಾ.ಸೆಬ್ಬಾಸ್ಟೀಯನ್, ಕಾಲೇಜಿನ ಪ್ರಾಂಶುಪಾಲ ಮಹದೇವ, ಉಪಪ್ರಾಂಶುಪಾಲ ನಾಗೇಂದ್ರ, ಕನ್ನಡ ಉಪನ್ಯಾಸಕ ಎಂ.ರಾಜಶೇಖರ ಕೊಮಾರನಪುರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net