ಜೇವರ್ಗಿಯಲ್ಲಿ ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ದೊಡ್ಡಪ್ಪಗೌಡ ನರಿಬೋಳ

ಪ್ರಮುಖರಾದ  ವಿಜಯಕುಮಾರ್ ಪಾಟೀಲ ಹಂಗರಗಾ, ಗುರುಲಿಂಗಪ್ಪಗೌಡ ಪಾಟೀಲ ಆಂದೋಲಾ, ನೀಲಕಂಠ ಸಾಹು ಆವಂಟಿ ಮೊದಲಾದವರು ಇದ್ದರು
ಪ್ರಮುಖರಾದ ವಿಜಯಕುಮಾರ್ ಪಾಟೀಲ ಹಂಗರಗಾ, ಗುರುಲಿಂಗಪ್ಪಗೌಡ ಪಾಟೀಲ ಆಂದೋಲಾ, ನೀಲಕಂಠ ಸಾಹು ಆವಂಟಿ ಮೊದಲಾದವರು ಇದ್ದರು
Published on
ಕಲಬುರಗಿ : ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಬಸವೇಶ್ವರ ಪುತ್ಥಳಿ ನಿರ್ಮಾಣ ಮಾಡುವ ಕಾಮಗಾರಿಯ ಭೂಮಿ ಪೂಜೆಯನ್ನು ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಯುಗಾದಿ ಹಬ್ಬದ ದಿನವಾದ ಇಂದು ನೆರವೇರಿಸಿ ಚಾಲನೆ ನೀಡಿದರು.
ಜೇವರ್ಗಿ ಪಟ್ಟಣದಲ್ಲಿ ಬಸವೇಶ್ವರ ವೃತ್ತದ ಬಳಿಯಲ್ಲಿ ವಿಶ್ವಗುರುವಿನ ಪುತ್ಥಳಿ ನಿರ್ಮಿಸಬೇಕು ಎಂಬ ಪ್ರಯತ್ನ ಸುಮಾರು ದಿನಗಳಿಂದ ನಡೆದಿತ್ತು. ಅದಕ್ಕಾಗಿ ಲಿಂಗಾಯತ ಸಮಾಜದ ಎಲ್ಲ ಮುಖಂಡರ ಕೋರಿಕೆಯಂತೆ ಸರ್ಕಾರ ಎಪಿಎಂಸಿಯಲ್ಲಿ ಸ್ಥಳವನ್ನು ಸರ್ಕಾರವು ಮಂಜೂರು ಮಾಡಿತ್ತು.
ಆ ಸ್ಥಳದಲ್ಲಿ ಸಾಂಸ್ಕೃತಿಕ ನಾಯಕರಾದ ಬಸವೇಶ್ವರ ಪುತ್ಥಳಿಯನ್ನು ನಿರ್ಮಿಸಲು ಭೂಮಿ ಪೂಜೆ ನೆರವೇರಿಸುವ ಮೂಲಕ‌ಮಹತ್ವದ ಕಾರ್ಯಕ್ಕೆ ಭಾರತೀಯರ ಹೊಸ ವರ್ಷ ದಿನವಾದ ಯುಗಾದಿ ಹಬ್ಬದ ದಿನವಾದ ಗುರುವಾರ ಹಲವಾರು ಮುಖಂಡರ ಸಮ್ಮುಖದಲ್ಲಿ ಚಾಲನೆ ದೊರಕಿತು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಅದ್ಯಕ್ಷ ಶರಣಕುಮಾರ ಮೋದಿ
ರಾಜ್ಯ‌‌ ಸಮಿತಿ ಸದಸ್ಯ ರಾಜಶೇಖರ ಸಿರಿ, ಮಹಾಸಭಾ
ಪ್ರಮುಖರಾದ ವಿಜಯಕುಮಾರ್ ಪಾಟೀಲ ಹಂಗರಗಾ, ಗುರುಲಿಂಗಪ್ಪಗೌಡ ಪಾಟೀಲ ಆಂದೋಲಾ, ನೀಲಕಂಠ ಸಾಹು ಆವಂಟಿ ಮೊದಲಾದವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net