ಸರ್ಕಾರಿ ಕಚೇರಿಯ ಅಧಿಕಾರಿಗಳ ಕುರ್ಚಿ ಮೇಲೆ ಬಿಳಿ ಟವಲ್​​ ಯಾಕೆ ಇರುತ್ತೆ ಗೊತ್ತಾ? ಈ ಸಂಪ್ರದಾಯ ಶುರುವಾಗಿದ್ದೇಗೆ? | towel on chair

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Towel on chair: ಭಾರತೀಯ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಕುರ್ಚಿ ಮೇಲೆ ಬಿಳಿ ಟವಲ್ ಅನ್ನು ಹೊದಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ನೀವು ಎಂದಾದರೂ ಸರ್ಕಾರಿ ಕಚೇರಿಗೆ ಕಾಲಿಟ್ಟಿದ್ದರೆ, ಅಲ್ಲಿ ನೀವು ಇದನ್ನು ಗಮನಿಸಿರಬಹುದು. ಈ ಸಂಪ್ರದಾಯ ಯಾವಾಗಿನಿಂದ ಶುರುವಾಯಿತು, ಅದನ್ನು ಯಾಕೆ ಹಾಕಲಾಗುತ್ತದೆ ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಎದ್ದಿದೆ. ಈ ಸಣ್ಣ ಹೊದಿಕೆಯು ಆಶ್ಚರ್ಯಕರ ಪ್ರಮಾಣದ ಇತಿಹಾಸ, ಶ್ರೇಣಿ ವ್ಯವಸ್ಥೆ ಮತ್ತು ಸಂಕೇತಗಳನ್ನು ಹೊಂದಿದೆ. 
ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಕೇತನ್ ಎಂಬುವರು, ಭಾರತದ ಯಾವುದೇ ಸರ್ಕಾರಿ ಕಚೇರಿಗೆ ಹೋದರೂ, ಅಧಿಕಾರಿಗಳ ಕುರ್ಚಿಗಳ ಮೇಲೆ ಟವೆಲ್‌ಗಳು ಸಾಮಾನ್ಯ ದೃಶ್ಯ ಕಂಡು ಬರುತ್ತದೆ. ಅದು ಅಧಿಕಾರದ ಸರ್ವವ್ಯಾಪಿ ಸಂಕೇತ. ಟವಲ್‌ನ ಪ್ರಾಮುಖ್ಯತೆ ಎಷ್ಟಿದೆಯೆಂದರೆ ಕೆಲವು ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ಶಾಸಕರೊಬ್ಬರು ಕುರ್ಚಿಗಳ ಮೇಲೆ ಟವಲ್​ ಹೊದಿಸದೆ ಇರುವುದಕ್ಕೆ ಅಸಮಾಧಾನಗೊಂಡು ದೂರುಗಳನ್ನು ಸಲ್ಲಿಸಿದ್ದರು ಎಂದು ಬರೆದುಕೊಂಡಿದ್ದರು.
ಅದಕ್ಕೆ ರಾಜಕಾರಣಿ ಗುರುದೀಪ್ ಸಿಂಗ್ ಸಪ್ಖಲ್ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ರಿಟ್ವೀಟ್ ಮಾಡಿ, ಈ ಬಗ್ಗೆ ವಿವರವಾದ ಪೋಸ್ಟ್ ಬರೆದಿದ್ದು, ಭಾರತದ ಅಧಿಕಾರಶಾಹಿ ಸಂಸ್ಕೃತಿಯಲ್ಲಿ ಬ್ರಿಟಿಷ್ ಆಡಳಿತ ಶಾಹಿಯ ಅಭ್ಯಾಸಗಳು ಹೇಗೆ ಆಳವಾಗಿ ಬೇರೂರಿವೆ ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಕುರ್ಚಿ ಮೇಲೆ ಟವಲ್ ಹಾಕುವ ಸಂಪ್ರದಾಯ ಶುರುವಾಗುವುದು ಬ್ರಿಟಿಷ್ ಯುಗದಲ್ಲಿ. ಬ್ರಿಟಿಷ್ ಅಧಿಕಾರಿಗಳು ಕುದುರೆ ಮೇಲೆ ಸವಾರಿ ಮಾಡ್ತಿದ್ದರು. ಧೂಳು, ಬೆವರು ಹಾಗೂ ಹವಾನಿಯಂತ್ರಣವಿಲ್ಲದ ಕಾರಣ ಬೆವರು ಒರೆಸಲು ಮತ್ತು ಸ್ವಲ್ಪ ಆರಾಮವಾಗಿರಲು ಟವಲ್​ಗಳನ್ನು ಬಳಸುತ್ತಿದ್ದರು.
ಸ್ವಾತಂತ್ರ್ಯದ ನಂತರ ಕುದುರೆಗಳು ಕಣ್ಮರೆಯಾದವು, ಕಚೇರಿಗಳು ಆಧುನೀಕರಣಗೊಂಡವು.  ಮತ್ತು ಹವಾನಿಯಂತ್ರಣಗಳು ಬಂದವು, ಆದರೆ ಟವೆಲ್‌ಗಳು ಎಲ್ಲಿಯೂ ಹೋಗಲಿಲ್ಲ. ಅವು ಕುರ್ಚಿಗಳ ಮೇಲೆಯೇ ಉಳಿದವು. ಕಾರ್ಯದ ಬಗ್ಗೆ ಕಡಿಮೆ ಮತ್ತು ಸಂಪ್ರದಾಯದ ಬಗ್ಗೆ ಹೆಚ್ಚು ಗಮನ ಹರಿಸಿದವು. ಮುಂದೆ ಬಿಳಿ ಟವಲ್ ಪ್ರಾಯೋಗಿಕ ವಸ್ತುದಿಂದ ಅಧಿಕಾರದ ಸೂಕ್ಷ್ಮ ಗುರುತಾಗಿ ರೂಪಾಂತರಗೊಂಡಿದೆ ಎಂದು ಹೇಳಿದ್ದಾರೆ.

ಇದಷ್ಟೇ ಅಲ್ಲದೇ ಟೇಬಲ್‌ಗಳ ಗಾತ್ರ ಮತ್ತು ಶಾಯಿಯ ಬಣ್ಣವನ್ನು ಸಹ ಶ್ರೇಣಿ ವ್ಯವಸ್ಥೆಯಿಂದ ವ್ಯಾಖ್ಯಾನಿಸಲಾಗಿದೆ. ಭಾರತದ ಅಧಿಕಾರಶಾಹಿಯು 13 ತಿಂಗಳುಗಳ ಕಾಲ ಅಧಿಕಾರಿಗಳು ಫೈಲ್‌ಗಳಲ್ಲಿ ಯಾವ ಬಣ್ಣದ ಶಾಯಿಯನ್ನು ಬಳಸಬಹುದು ಎಂಬುದರ ಕುರಿತು ಚರ್ಚೆ ನಡೆಸಿತು. ನಿಯಮಗಳನ್ನು ನಿಗದಿಪಡಿಸುವ ಮೊದಲು ಈ ವಿಷಯವು ಅನೇಕ ಇಲಾಖೆಗಳ ಮೂಲಕ ಹೋಯಿತು. ಕಿರಿಯ ಅಧಿಕಾರಿಗಳು ನೀಲಿ ಅಥವಾ ಕಪ್ಪು ಶಾಯಿಯನ್ನು ಬಳಸುತ್ತಿದ್ದರು, ಆದರೆ ಹಿರಿಯ ಅಧಿಕಾರಿಗಳು ಕೆಂಪು ಮತ್ತು ಹಸಿರು ಬಣ್ಣವನ್ನು ಕಾಯ್ದಿರಿಸಿದ್ದರು ಎಂಬುದನ್ನು ತಿಳಿಸಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net