ಇರಾನ್ ಜೊತೆ ಶಾಂತಿ ಮಾತುಕತೆಗಾಗಿ ಕದನ ವಿರಾಮ ವಿಸ್ತರಿಸಿದ ಟ್ರಂಪ್; ಹೊರ್ಮುಜ್ ಜಲಸಂಧಿ ದಿಗ್ಬಂಧನ ಮುಂದುವರಿಕೆ | extends ceasefire
ಡೊನಾಲ್ಡ್ ಟ್ರಂಪ್
Published on:
Copied
Follow Us
ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಎರಡು ವಾರಗಳ ಕದನ ವಿರಾಮ ಮುಕ್ತಾಯ ಹಿನ್ನೆಲೆ, ಶಾಂತಿ ಮಾತುಕತೆಗೆ ಇರಾನ್ಗೆ ಹೆಚ್ಚಿನ ಸಮಯ ನೀಡುವ ಸಲುವಾಗಿ ಕದನ ವಿರಾಮವನ್ನು(extends ceasefire) ಅನಿರ್ಧಿಷ್ಠಾವಧಿಗೆ ವಿಸ್ತರಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ.
ಈ ಕುರಿತು ತಮ್ಮ ಟ್ರೂತ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, ಹೊರ್ಮುಜ್ ಜಲಸಂಧಿಯಲ್ಲಿ ದಿಗ್ಭಂಧನವನ್ನು ಮುಂದುವರೆಸಲು ಮತ್ತು ಇತರೆ ಎಲ್ಲಾ ವಿಷಯಗಳಲ್ಲಿ ಎಲ್ಲದಕ್ಕೂ ಸಿದ್ದರಾಗಿ ಎಂದು ನಮ್ಮ ಸೇನೆಗೆ ನಿರ್ದೇಶಿಸಿದ್ದೇನೆ. ಆದರೆ ಇರಾನ್ಗೆ ಶಾಂತಿ ಮಾತುಕತೆಗೆ ಪ್ರಸ್ತಾವನೆ ಸಲ್ಲಿಸಲು ಕದನ ವಿರಾಮವನ್ನು ವಿಸ್ತರಿಸಿದ್ದೇನೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಸಿಎನ್ಬಿಸಿ ಪೋನ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಟ್ರಂಪ್, ಬುಧವಾರ ಸಂಜೆಯೊಳಗೆ ಇರಾನ್ ಮಾತುಕತೆಯ ಮೇಜಿಗೆ ಬರದಿದ್ದರೆ, ಅಮೆರಿಕದ ಯುದ್ಧವಿಮಾನಗಳು ಇರಾನ್ ಮೇಲೆ ಬಾಂಬ್ ಮಳೆ ಸುರಿಸಲು ಸಜ್ಜಾಗಿವೆ ಎಂದು ನೇರ ಎಚ್ಚರಿಕೆ ನೀಡಿದ್ದರು.
ನಾನು ಇರಾನ್ ಜೊತೆ ಒಂದು ದೊಡ್ಡ ಒಪ್ಪಂದ ಮಾಡಿಕೊಳ್ಳುತ್ತೇನೆ ಎಂಬ ಭರವಸೆಯಿದೆ. ಆದರೆ ಅವರಿಗೆ ಸಂಧಾನಕ್ಕೆ ಬರುವುದನ್ನು ಬಿಟ್ಟು ಬೇರೆ ದಾರಿಯೇ ಇಲ್ಲ. ನಮ್ಮ ದಿಗ್ಬಂಧನ ತಂತ್ರವು ಭರ್ಜರಿ ಯಶಸ್ಸು ಕಂಡಿದೆ. ಜಗತ್ತಿನ ಪ್ರಮುಖ ತೈಲ ಮಾರ್ಗವಾದ ಸ್ಟೈಟ್ ಆಫ್ ಹೊರ್ಮುಜ್ ಈಗ ಸಂಪೂರ್ಣವಾಗಿ ಅಮೆರಿಕದ ನಿಯಂತ್ರಣದಲ್ಲಿದೆ ಎಂದು ಘೋಷಿಸಿದ್ದರು.
ಇನ್ನೂ ಟ್ರಂಪ್ ಅವರ ಕದನ ವಿರಾಮ ವಿಸ್ತರಣೆಯನ್ನು ಪಾಕಿಸ್ತಾನ ಅಧ್ಯಕ್ಷ ಶೆಹಬಾಜ್ ಷರೀಫ್ ಅಭಿನಂಧಿಸಿದ್ದು, ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಸ್ವಾಗತ ಮಾಡಿದ್ದಾರೆ (ಏಜೆನ್ಸೀಸ್).