ಪೆಟ್ರೋಲ್ ಬಂಕ್ ಮಾಲೀಕರಿಗೆ ಪೊಲೀಸರ ಖಡಕ್ ಸೂಚನೆ ಏನ್ ಗೊತ್ತಾ?
ಮಸ್ಕಿ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಕೆ.ರಂಗಯ್ಯ ಪೆಟ್ರೋಲ್ ಬಂಕ್ ಮಾಲೀಕರ ಸಭೆ ನಡೆಸಿದರು. ಎಂ.ಪ್ರಭುದೇವ, ಶಿವಕುಮಾರ ಇತರರಿದ್ದರು.
Published on:
Copied
Follow Us
ಮಸ್ಕಿ: ಖಾಸಗಿ ವ್ಯಕ್ತಿಗಳಿಗೆ ಬ್ಯಾರಲ್‌ಗಳಲ್ಲಿ ಹೆಚ್ಚಿನ ಇಂಧನ ನೀಡಬಾರದು ಎಂದು ಪೆಟ್ರೋಲ್ ಬಂಕ್ ಮಾಲೀಕರಿಗೆ ಪಿಎಸ್‌ಐ ಕೆ.ರಂಗಯ್ಯ ಸೂಚನೆ ನೀಡಿದರು.
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪೆಟ್ರೋಲ್ ಬಂಕ್ ಮಾಲೀಕರ ಸಭೆಯಲ್ಲಿ ಮಾತನಾಡಿದರು. 200 ಲೀ. ಒಳಗೆ ಇಂಧನ ತುಂಬಬೇಕು. ಟ್ಯಾಂಕರ್, ಬ್ಯಾರಲ್‌ಗಳಿಗೆ ಇಂಧನ ನೀಡಬಾರದು.
ಪ್ರಧಾನಿ ನರೇಂದ್ರ ಮೋದಿ ಅವರು ಇಂಧನ ಕಡಿಮೆ ಬಳಸಿ, ಬಂಗಾರ ಖರೀದಿ ಮುಂದೂಡಿ ಎಂದಿದ್ದು, ಇದನ್ನೇ ಬಂಡವಾಳ ಮಾಡಿಕೊಂಡು ಕೃತಕ ಅಭಾವ ಸೃಷ್ಟಿಸಿ ಇಂಧನ ದಾಸ್ತಾನು ಮಾಡಬಾರದು. ಅಂತಹ ಪ್ರಕರಣಗಳು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ವರ್ಚುವಲ್ ಸಭೆ: ನೌಕರರು ಸರ್ಕಾರಿ ವಾಹನಗಳನ್ನು ಹೆಚ್ಚಿಗೆ ಬಳಸದೆ ಇಂಧನ ಉಳಿಸಲು ಮುಂದಾಗಿದ್ದಾರೆ. ಜಿಲ್ಲಾ ಪೊಲೀಸ್ ಇಲಾಖೆ ಮಂಗಳವಾರದಿಂದಲೇ ವರ್ಚುವಲ್ ಸಭೆ ನಡೆಸಲು ತಿರ್ಮಾನಿಸಿದೆ. ಪಿಎಸ್‌ಐ, ಸಿಪಿಐ ಅವರು ಸಭೆಗಳಿಗಾಗಿ ಲಿಂಗಸುಗೂರು ಮತ್ತು ರಾಯಚೂರಿಗೆ ಹೋಗದೇ ವರ್ಚುವಲ್ ಸಭೆಯಲ್ಲಿ ಪಾಲ್ಗೊಳ್ಳುವ ಇಂಧನ ಉಳಿಸಲು ಮುಂದಾಗಿದ್ದಾರೆ.