ಕಚೇರಿಗೆ ಅಲೆದಾಡಿಸದೆ ಜನರ ಕೆಲಸ ಮಾಡಿ / NELAMANGAL

ನೆಲಮಂಗಲ ತಾಲೂಕು ಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಜನಸ್ಪಂದಾನ ಸಭೆಯಲ್ಲಿ ಶಾಸಕ ಎನ್​.ಶ್ರೀನಿವಾಸ್​ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿದರು. ತಹಸಿಲ್ದಾರ್​ ಮಲ್ಲೇಶ್​ಬೀರಪ್ಪ ಪೂಜಾರ್​, ಗ್ರೇಡ್​&2ತಹಸೀಲ್ದಾರ್​ ಕಲಾವತಿ, ತಾಪಂ ಇಒ ಡಾ.ಬಿಂದೂ, ಬಿಇಒ ರಮೇಶ್​ ಇದ್ದರು.
ನೆಲಮಂಗಲ ತಾಲೂಕು ಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಜನಸ್ಪಂದಾನ ಸಭೆಯಲ್ಲಿ ಶಾಸಕ ಎನ್​.ಶ್ರೀನಿವಾಸ್​ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿದರು. ತಹಸಿಲ್ದಾರ್​ ಮಲ್ಲೇಶ್​ಬೀರಪ್ಪ ಪೂಜಾರ್​, ಗ್ರೇಡ್​&2ತಹಸೀಲ್ದಾರ್​ ಕಲಾವತಿ, ತಾಪಂ ಇಒ ಡಾ.ಬಿಂದೂ, ಬಿಇಒ ರಮೇಶ್​ ಇದ್ದರು.
Published on
ನೆಲಮಂಗಲ : ಕಳೆದ ಸಭೆಯಲ್ಲಿ ಸ್ವೀಕೃತವಾದ ಅರ್ಜಿಗಳಿಗೆ ಪರಿಹಾರ ಸಿಕ್ಕಾಗ ಜನಸ್ಪಂದನಾ ಕಾರ್ಯಕ್ರಮಕ್ಕೆ ಅರ್ಥ ಸಿಗುತ್ತದೆ. ಮತ್ತೆ ಜನರು ಅರ್ಜಿಗಳನ್ನು ಹಿಡಿದುಕೊಂಡು ಕಚೇರಿಗಳಿಗೆ ಅಲೆಯುವಂತಾಗಬಾರದು ಎಂದು ಶಾಸಕ ಎನ್​.ಶ್ರೀನಿವಾಸ್​ ತಿಳಿಸಿದರು.
ತಾಲೂಕು ಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಜನಸ್ಪಂದಾನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನಸಾಮಾನ್ಯರ ಅರ್ಜಿಗಳಿಗೆ ಅಧಿಕಾರಿಗಳು ರ್ನಿಲಕ್ಷ$್ಯ ವಹಿಸದೆ ಶ್ರೀ ಸ್ಪಂದಿಸಬೇಕು. ಜನಸ್ಪಂದನಾ ಸಭೆಗಳು ಜನರಿಗೆ ಸಹಕಾರಿಯಾಗಬೇಕು. ಅಧಿಕಾರಿಗಳು ಸಮಸ್ಯೆ ಇತ್ಯರ್ಥಪಡಿಸಲು ಸೂಕ್ಷ$್ಮ ರೀತಿಯಲ್ಲಿ ಸ್ಪಂದಿಸಬೇಕು. ಜನರ ದೈನಂದಿನ ಸಮಸ್ಯೆಗಳ ಅರ್ಜಿಗಳನ್ನು ಸ್ಥಳಿಯ ಹಂತದಲ್ಲಿ ಪರಿಹರಿಸಲಾಗುವುದು. ಕಾನೂನಿನ ಚೌಕಟ್ಟಿನೊಳಗೆ ಅಧಿಕಾರಿಗಳು ಜನರ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದರು.
ನಿಯಮಾನುಸಾರ ಕ್ರಮ: ಕಾನೂನಾತ್ಮಕವಾಗಿ ಅವಕಾಶವಿದ್ದರೆ ಕೆಲಸ ಮಾಡಿಕೊಡಬೇಕು. ಇಲ್ಲದಿದ್ದರೆ ಎಲ್ಲರಿಗೂ ಅರ್ಥವಾಗುವಂತೆ ಹಿಂಬರಹ ಕೊಡಬೇಕು. ಎಲ್ಲರಿಗೂ ಕಾಲಾವಕಾಶ ಪಡೆದುಕೊಂಡು ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕರು ತಾಕೀತು ಮಾಡಿದರು.
ನಗರಸಭೆ ಅಧ್ಯಕ್ಷ ಎನ್​.ಗಣೇಶ್​, ಉಪಾಧ್ಯಕ್ಷ ಆನಂದ್​, ಸದಸ್ಯ ಸಿ.ಪ್ರದಿಪ್​, ನರಸಿಂಹಮೂರ್ತಿ, ನೆ.ಯೋ.ಪ್ರಾಧಿಕಾರ ಅದ್ಯಕ್ಷ ನಾಗರಾಜು, ಸದಸ್ಯ ವೆಂಕಟೇಶ್​, ಮುಖಂಡ ಕೆ.ಕೃಷ್ಣಪ್ಪ, ಸಿ.ಎಂ.ಗೌಡ, ಚಿಕ್ಕಣ್ಣ, ಮುನಿಯಪ್ಪ, ಮನುಗೌಡ, ರವಿಕುಮಾರ್​ ಉಪಸ್ಥಿತರಿದರು.
ಕಚೇರಿ ಸಿಬ್ಬಂದಿಗೆ ತರಾಟೆ : ಇತ್ತೀಚೆಗೆ ತಾಲೂಕು ಕಚೇರಿಯಲ್ಲಿ ಮಹಿಳೆಯೊಬ್ಬರು ಅರ್ಜಿ ನೀಡಲು ಬಂದಿದ್ದ ವೇಳೆ ಕಚೇರಿಯ ಠಪಾಲ್​ನಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯೊಬ್ಬರು ಅಸಭ್ಯವಾಗಿ ವರ್ತಿಸಿದ್ದನ್ನು ಸಭೆಯಲ್ಲಿ ಮಹಿಳೆ ಶಾಸಕರ ಗಮನಕ್ಕೆ ತಂದರು. ಶಾಸಕ ಎನ್​.ಶ್ರೀನಿವಾಸ್​ ತಾಲೂಕಿನಾದ್ಯಂತ ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಅತ್ಯಂತ ಸೌಜನ್ಯದಿಂದ ಹಾಗೂ ಗೌರವಯುತವಾಗಿ ನಡೆದುಕೊಳ್ಳಬೇಕು ಎಂದು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.
20 ಅರ್ಜಿ ವಿಲೇವಾರಿ : ಜನಸ್ಪಂದನದಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾಗಿದ್ದ ಒಟ್ಟು 55 ಅರ್ಜಿಗಳ ಪೈಕಿ 20ಕ್ಕೂ ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಲಾಯಿತು. ಉಳಿದವುಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ರವಾನಿಸಿ ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಶಾಸಕ ಶ್ರೀನಿವಾಸ್​ ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net