ಆಡಿರುವ 12ರಲ್ಲಿ ತಲಾ 6 ಸೋಲು-ಗೆಲುವಿನೊಂದಿಗೆ 12 ಅಂಕ ಹೊಂದಿರುವ ರಾಜಸ್ಥಾನ ಪಾಲಿಗೆ ಉಳಿದಿರುವ ಎರಡು ಪಂದ್ಯಗಳು ನಿರ್ಣಾಯಕ ಎನಿಸಿದ್ದು, ಉಳಿದೆರಡರಲ್ಲೂ ಗೆದ್ದರೆ ಗರಿಷ್ಠ 16 ಅಂಕ ಕಲೆಹಾಕಲಿದೆ. ಸಿಎಸ್‌ಕೆ ಅಥವಾ ಸನ್‌ರೈಸರ್ಸ್ ನಡುವೆ ಒಂದು ತಂಡ 16 ಅಂಕ ಕಲೆಹಾಕಿದರೂ, ರನ್‌ರೇಟ್ ಲೆಕ್ಕಾಚಾರವಿಲ್ಲದೆ ಪ್ಲೇಆ್ಗೇರಲಿದೆ. ಸಿಎಸ್‌ಕೆ ತನ್ನ 2 ಪಂದ್ಯಗಳನ್ನು ಗೆದ್ದು, ಆರ್‌ಸಿಬಿ ತನ್ನ ಮುಂದಿನ ಪಂದ್ಯದಲ್ಲಿ ಸನ್‌ರೈಸರ್ಸ್ ಅನ್ನು ಮಣಿಸಿದರೆ, ರನ್‌ರೇಟ್ ಆಧಾರದಲ್ಲಿ ಅಗ್ರ-4ರಲ್ಲಿ ಸ್ಥಾನ ಪಡೆಯುವ ಅವಕಾಶವಿದೆ. ರಾಜಸ್ಥಾನ ಒಂದರಲ್ಲಿ ಗೆದ್ದರೆ, ಇತರ ಪಂದ್ಯಗಳ ಲಿತಾಂಶವೂ ವರದಾನವಾಗಬೇಕಿದೆ. ಲಖನೌ ಪಾಲಿಗೆ ಈ ಪಂದ್ಯ ಔಪಚಾರಿಕ ಎನಿಸಿದ್ದು, ಅಂಕಪಟ್ಟಿಯ ಕೊನೇ ಸ್ಥಾನ ತಪ್ಪಿಸಲು ಹೋರಾಡಲಿದೆ.