ವೈದ್ಯರ ನಿರ್ದೇಶನವಿಲ್ಲದೆ ಔಷಧ ಬಳಸದಿರಿ / VIJAYAPUR

ವಿಜಯಪುರದ ಗಿರಿಜಾ ಶಂಕರ ಕಲ್ಯಾಣ ಮಂಟಪದಲ್ಲಿ ಪ್ರಗತಿ ಆಂಗ್ಲ ಪ್ರಾಥಮಿಕ ಪಾಠಶಾಲೆಯಿಂದ  ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಸುವೀಕ್ಷಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ ಮಾಧವ್​ ರವರನ್ನು ಸನ್ಮಾನಿಸಲಾಯಿತು.ಪ್ರಗತಿ ಆಂಗ್ಲ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಜೆ.ಎನ್​. ಪ್ರಕಾಶ್​, ಸಹ ಶಿಕ್ಷಕರಾದ ಎಚ್​. ಶಾಂತಮೂರ್ತಿ, ಶಿಕ್ಷಕಿಯರಾದ ಎಚ್​.ವಿ. ಆಶಾಲತಾ, ವೇದಾವತಿ, ಎಂ. ಪ್ರತಿಭಾ, ಪಿ.ಎಂ. ತನುಜಾ, ಮಹಾಲಕ್ಷಿ$್ಮ, ಎನ್​. ಪವಿತ್ರಾ ಇದ್ದರು.
ವಿಜಯಪುರದ ಗಿರಿಜಾ ಶಂಕರ ಕಲ್ಯಾಣ ಮಂಟಪದಲ್ಲಿ ಪ್ರಗತಿ ಆಂಗ್ಲ ಪ್ರಾಥಮಿಕ ಪಾಠಶಾಲೆಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಸುವೀಕ್ಷಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ ಮಾಧವ್​ ರವರನ್ನು ಸನ್ಮಾನಿಸಲಾಯಿತು.ಪ್ರಗತಿ ಆಂಗ್ಲ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಜೆ.ಎನ್​. ಪ್ರಕಾಶ್​, ಸಹ ಶಿಕ್ಷಕರಾದ ಎಚ್​. ಶಾಂತಮೂರ್ತಿ, ಶಿಕ್ಷಕಿಯರಾದ ಎಚ್​.ವಿ. ಆಶಾಲತಾ, ವೇದಾವತಿ, ಎಂ. ಪ್ರತಿಭಾ, ಪಿ.ಎಂ. ತನುಜಾ, ಮಹಾಲಕ್ಷಿ$್ಮ, ಎನ್​. ಪವಿತ್ರಾ ಇದ್ದರು.
Published on
ವಿಜಯಪುರ : ಯಾವುದೇ ಕಾರಣಕ್ಕೂ ವೈದ್ಯರ ಅಧಿಕೃತ ಸಲಹೆ ಇಲ್ಲದೆ ಮಕ್ಕಳ ಆರೋಗ್ಯದ ವಿಷಯದಲ್ಲಿ ಪಾಲಕರು ಸ್ವಚಿಕಿತ್ಸೆ ನೀಡುವುದು ಹಾಗೂ ತೋಚಿದಂತೆ ಔಷಧ ನೀಡುವುದು ಮತ್ತು ತಾವೂ ಬಳಸುವುದು ತಪ್ಪು. ಕೆಲವೊಮ್ಮೆ ಇದು ಮಕ್ಕಳ ಮೇಲೆ ಗಂಭೀರ ಹಾಗೂ ತೀವ್ರ ಸ್ವರೂಪದ ಅಡ್ಡಪರಿಣಾಮಬೀರುತ್ತದೆ ಎಂದು ಸುವೀಕ್ಷಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಎಂ.ಮಾಧವ್​ ತಿಳಿಸಿದರು.
ಪಟ್ಟಣದ ಗಿರಿಜಾ ಶಂಕರ ಕಲ್ಯಾಣ ಮಂಟಪದಲ್ಲಿ ಪ್ರಗತಿ ಆಂಗ್ಲ ಪ್ರಾಥಮಿಕ ಪಾಠಶಾಲೆಯಿಂದ ಏರ್ಪಡಿಸಲಾಗಿದ್ದ "ಪರಿಚಯ-ಪಾಲಕರು ಹಾಗೂ ಶಿಕ್ಷಕರ ಸಮಾಗಮ'ದಲ್ಲಿ ಮಾತನಾಡಿದರು.ಮಕ್ಕಳಿಗೆ ಚಾಕೊಲೇಟ್​, ಜಂಕ್​ಫುಡ್​ ಮತ್ತಿತರ ಹೊರಗಿನ ಆಹಾರಕೊಡಬಾರದು. ಸಾಧ್ಯವಾದಷ್ಟು ಮನೆಯಲ್ಲಿಯೇ ಸಿದ್ಧಪಡಿಸಿದ ಪೌಷ್ಟಿಕ ಆಹಾರ ನೀಡಬೇಕು ಹಾಗೂ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕು. ಮಕ್ಕಳನ್ನು ಹೊರಗೆ ಕಳುಹಿಸುವಾಗ ಮಾಸ್ಕ್​ ಧರಿಸುವ ರೂಢಿ ಮಾಡಿಸಬೇಕು. ದ್ವಿಚಕ್ರ ವಾಹನಗಳಲ್ಲಿ ಕರೆದೊಯ್ಯುವಾಗ ಕಣ್ಣಿನ ರಕ್ಷಣೆಗೆ ಕನ್ನಡಕ ಬಳಸಬೇಕು. ಮಕ್ಕಳ ಮುಂದೆ ಹಿರಿಯರು ಮೊಬೈಲ್​ ಬಳಸಬಾರದು. ಏಕೆಂದರೆ ಮಕ್ಕಳು ಹೇಳಿದ್ದನ್ನು ಕಲಿಯುವುದಕ್ಕಿಂತ, ಹಿರಿಯರನ್ನು ನೋಡಿ ಕಲಿಯುವುದೇ ಹೆಚ್ಚು ಎಂದು ತಿಳಿಸಿದರು.
ಪ್ರಗತಿ ಶಿಕ್ಷಣ ಸಂಸ್ಥೆಗಳ ಆಡಳಿತ ವ್ಯವಸ್ಥಾಪಕಕೃಪಾಶಂಕರ್​ ಮಾತನಾಡಿ, "ಪ್ರಥಮ ಬಾರಿಗೆ ಮಕ್ಕಳನ್ನು ಶಾಲೆಗೆ ಕಳುಹಿಸುವ ಪಾಲಕರಿಗೆ ಶಾಲೆಯ ವಾತಾವರಣ ಮತ್ತು ಶಿಕ್ಷಕರ ಬಗ್ಗೆ ಹಾಗೂ ಶಿಕ್ಷಕರಿಗೂ ಮಕ್ಕಳ ಪಾಲಕರ ಹಿನ್ನೆಲೆಯ ಬಗ್ಗೆ ಪರಸ್ಪರ ಅರಿವು ಮೂಡಲಿ ಎಂಬ ಸದುದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಎಂದರು.
ಹಿಂದಿನ ಕಾಲದಲ್ಲಿ ಮನೆಗಳಲ್ಲಿ ಮೊಬೈಲ್​ ಇರಲಿಲ್ಲ. ಚೌಕಾಬಾರ, ಅಳಗುಳಿ ಮನೆ, ಕುಂಟೆಬಿಲ್ಲೆ ಮುಂತಾದ ದೇಸಿ ಆಟಗಳನ್ನು ಆಡುತ್ತಿದ್ದಾಗ ಮಕ್ಕಳಿಗೆ ಕೈ&-ಕಾಲುಗಳಿಗೆ ದೈಹಿಕ ವ್ಯಾಯಾಮದ ಜತೆಗೆ ಲೆಕ್ಕಾಚಾರದ ಬುದ್ಧಿವಂತಿಕೆಯೂ ಬರುತ್ತಿತ್ತು. ಆದರೆ ಕಾಲ ಬದಲಾದಂತೆ ಕ್ಯಾಲ್ಕುಲೇಟರ್​ ಬಂದು ಮಕ್ಕಳು ಮಗ್ಗಿಗಳನ್ನೇ ಮರೆಯುತ್ತಿದ್ದಾರೆ. ಇದೀಗ ಎ.ಐ ಕೃತಕ ಬುದ್ದಿಮತ್ತೆ ಅತಿಯಾದ ಬಳಕೆಯಿಂದ ಮುಂದಿನ ದಿನಗಳಲ್ಲಿ ಮಕ್ಕಳು ತಮ್ಮ ಸ್ವಂತ ಯೋಚನಾ ಶಕ್ತಿಕಳೆದುಕೊಂಡು ದಡ್ಡರಾಗುವ ಸಂಭವವೇ ಹೆಚ್ಚಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕಾರ್ಯಕ್ರಮನಂತರ ಮಕ್ಕಳಿಂದ ಹಾಡು ಹಾಗೂ ನೃತ್ಯಗಳನ್ನೊಳಗೊಂಡ ಸಾಂಸತಿಕಕಾರ್ಯಕ್ರಮಗಳು ಜರುಗಿದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net