ಕಾರ್ಯಕರ್ತರ ನಡುವೆ ಗುಂಪುಗಾರಿಕೆ ಮಾಡದಿರಿ

Do not gang up among activists
Do not gang up among activists
Published on
ತುರುವೇಕೆರೆ: ಜೆಡಿಎಸ್​ನಿಂದ ದೊಡ್ಡಾಘಟ್ಟ ಚಂದ್ರೇಶ್​ ಟಿಕೇಟ್​ ಕೇಳಲಿ ಅಭ್ಯಂತರವಿಲ್ಲ. ಅದನ್ನು ಬಿಟ್ಟು ಕಾರ್ಯಕ್ರಮದ ನೆಪದಲ್ಲಿ ಕಾರ್ಯಕರ್ತರ ನಡುವೆ ಜೆಡಿಎಸ್​ನಲ್ಲಿ ಗುಂಪುಗಾರಿಕೆ ಮಾಡಬಾರದು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಎಚ್ಚರಿಕೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಜೆಡಿಎಸ್​ನಿಂದ ಆಯೋಜಿಸಿದ್ದ ಜೆಡಿಎಸ್​ ಕಾರ್ಯಕರ್ತರ ಸಭೆ ಹಾಗೂ ಎಸ್​ಐಆರ್​ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಜೆಡಿಎಸ್​ಗೆ ಬಂದಾಗ ತಾಲೂಕಿನಲ್ಲಿ 7 ಸಾವಿರ ಮತಗಳು ಪಕ್ಷಕ್ಕೆ ಬಂದಿದ್ದವು. ಸುಮಾರು ವರ್ಷಗಳ ಕಾಲ ಪಕ್ಷ ಸಂಘಟನೆ ಮಾಡಿ ಈಗ 70 ಸಾವಿರಕ್ಕೂ ಹೆಚ್ಚು ಮತಗಳು ಬರುವ ಹಾಗೆ ಸಂಘಟನೆ ಮಾಡಿದ್ದೇನೆ. ಜೆಡಿಎಸ್​ನಿಂದ ನಾಲ್ಕು ಭಾರಿ ಶಾಸಕರನ್ನಾಗಿದ್ದೇನೆ ಎಂದರು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿಯೇ ಕಡೇ ಚುನಾವಣೆ ಎಂದು ಘೋಷಿಸಿ ರಾಜಕೀಯ ನಿವೃತ್ತಿ ಪಡೆಯಲು ನಿರ್ಧಾರ ಮಾಡಿದ್ದೇನು. ಆದರೆ ಮಾಜಿ ಸಿಎಂ ಎಚ್​.ಡಿ.ಕುಮಾರ್​ಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರ ಬಳಿ ಕರೆದುಕೊಂಡು ಹೋಗಿ ಎನ್​ಡಿಎ ಮೈತ್ರಿಯಾಗಿದ್ದು, ಮುಂದೆ ರಾಜ್ಯದಲ್ಲಿ ಎನ್​ಡಿಎ ಸರ್ಕಾರ ಬಂದರೆ ಮಂತ್ರಿಯಾಗುವ ಅವಕಾಶ ಇದೆ ಅದ್ದರಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಸೂಚಿಸಿದರು. ಅದ್ದರಿಂದ ಎನ್​ಡಿಎ ಅಭ್ಯಥಿಯಾಗಿ ಸ್ಪರ್ಧಿಸಲಿದ್ದೇನೆ ಎಂದರು.
ಈಗಾಗಲೇ ಬಿಜೆಪಿ ಹಾಗೂ ಜೆಡಿಎಸ್​ ಹಾಲಿ ಶಾಸಕರಿಗೆ ಮುಂದಿನ ವಿಧಾನಸಭಾ ಚುನಾವಣೆ ಟಿಕೇಟ್​ ನೀಡುವಂತೆ ಮಾತುಕತೆಯಾಗಿದೆ. ಚುನಾವಣೆ ಇನ್ನು 2 ವರ್ಷ ಇದೆ ಅಭ್ಯರ್ಥಿ ವಿಚಾರ ಅಪ್ರಸ್ಥುತ ಅದರೂ ತಾಲೂಕಿನಲ್ಲಿ ಚಂದ್ರೇಶ್​ ಟಿಕೆಟ್​ ಆಕಾಂಕ್ಷಿಗಳಾಗಿದ್ದಾರೆ ಎಂಬ ಮಾತುಗಳನ್ನು ಮುಖಂಡರು ಪ್ರಸ್ಥಾಪಿಸಿದ್ದಾರೆ. ಆದರೆ ಟಿಕೇಟ್​ ವಿಚಾರವಾಗಿ ನನಗೆ ಹಾಗೂ ಬಿಜೆಪಿ ಮಾಜಿ ಶಾಸಕ ಮಸಾಲಜಯರಾಮ್​ ನಡುವೆ ಟಿಕೇಟ್​ ಪೈಪೋಟಿ ಇರುವುದು ಚಂದ್ರೇಶ್​ದೊಂದಿಗೆ ಅಲ್ಲ. ಕಾರ್ಯಕರ್ತರು ಅರ್ಥಮಾಡಿಕೊಳ್ಳಿ ಎಂದರು.
ವೆಂಕಟಾಪುರ ಯೋಗೀಶ್​, ರಂಗನಾಥ್​, ಮೂರ್ತಣ್ಣ ಸಿ.ಎಸ್​.ಪುರ, ಲೀಲಾವತಿಗಿಡ್ಡಯ್ಯ, ನರಸೇಗೌಡ, ನಂಜೇಗೌಡ, ಜಯರಾಮ್​, ತಿಮ್ಮೇಗೌಡ, ಎ.ಬಿ.ಜಗದೀಶ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net