ಕ್ಷಯ ಭಯ ಬೇಡ, ಚಿಕಿತ್ಸೆ ಪಡೆಯಿರಿ

ಅಫಜಲಪುರದಲ್ಲಿ ಕ್ಷಯ ರೋಗ ಮತ್ತು ಏಡ್ಸ್​ ಸುರಕ್ಷಾ ಅಭಿಯಾನದ ಕರಪತ್ರ ಬಿಡುಗಡೆ ಮಾಡಲಾಯಿತು. ಡಾ.ಮಹ್ಮದ್​ ಗಫೂರ್​, ಡಾ.ಚೇತನ ಧುಮಾಲೆ, ಡಾ.ಪ್ರಸನ್ನ ಕಟ್ಟಿ, ಡಾ.ಸಂಜೀವಿನಿ ಜಾಧವ್​, ಡಾ.ರತ್ನಶಿಲಾ, ಡಾ.ಇರ್ಷಾದ್​ ಅಲಿ ಇತರರಿದ್ದರು.
ಅಫಜಲಪುರದಲ್ಲಿ ಕ್ಷಯ ರೋಗ ಮತ್ತು ಏಡ್ಸ್​ ಸುರಕ್ಷಾ ಅಭಿಯಾನದ ಕರಪತ್ರ ಬಿಡುಗಡೆ ಮಾಡಲಾಯಿತು. ಡಾ.ಮಹ್ಮದ್​ ಗಫೂರ್​, ಡಾ.ಚೇತನ ಧುಮಾಲೆ, ಡಾ.ಪ್ರಸನ್ನ ಕಟ್ಟಿ, ಡಾ.ಸಂಜೀವಿನಿ ಜಾಧವ್​, ಡಾ.ರತ್ನಶಿಲಾ, ಡಾ.ಇರ್ಷಾದ್​ ಅಲಿ ಇತರರಿದ್ದರು.
Published on

ಅಫಜಲಪುರ: ಕ್ಷಯ ರೋಗ ಗುಣಪಡಿಸಬಹುದಾದ ಕಾಯಿಲೆ ಆಗಿದ್ದು, ಸೂಕ್ತ ಚಿಕಿತ್ಸೆ ಅಗತ್ಯವಾಗಿದೆ. ಸೋಂಕಿತರು ನಿರ್ಲಕ್ಷ್ಯ ಮಾಡದೇ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಮಹ್ಮದ್​ ಗಫೂರ್​ ಸಲಹೆ ನೀಡಿದರು. ತಾಲೂಕು ಆಸ್ಪತ್ರೆಯಲ್ಲಿ ಬಾಲ ಕ್ಷಯ ರೋಗ ಕುರಿತು ಬುಧವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸೋಂಕಿತ ವ್ಯಕ್ತಿ ಕೆಮ್ಮು, ಸೀನು ಅಥವಾ ಮಾತನಾಡುವಾಗ ಗಾಳಿಯಲ್ಲಿ ಸೂಕ್ಷ್ಮ ಸೋಂಕು ಬೆರೆತು ಇತರರಿಗೆ ಹರಡುವ ಸಾಧ್ಯತೆ ಇದೆ. ರೋಗಿಗಳು ವೈದ್ಯಕಿಯ ಚಿಕಿತ್ಸೆ, ನಿಯಮಿತ ಔಷಧ ಸೇವನೆ, ವೈಯಕ್ತಿಕ ನೈರ್ಮಲ್ಯ ಕಾಪಾಡಬೇಕು ಎಂದು ಹೇಳಿದರು. ಕರಪತ್ರ ಬಿಡುಗಡೆ ಮಾಡಲಾಯಿತು. ಟಿಎಚ್​ಒ ಡಾ.ಚೇತನ ಧುಮಾಲೆ, ಪ್ರಮುಖರಾದ ಡಾ.ಪ್ರಸನ್ನ ಕಟ್ಟಿ, ಡಾ.ಸಂಜೀವಿನಿ ಜಾಧವ್​, ಡಾ.ರತ್ನಶಿಲಾ, ಡಾ.ಇರ್ಷಾದ್​ ಅಲಿ, ಡಾ.ಅಮರದೀಪ ಪವಾರ್​, ಮುಸ್ತಾಫಾ ಮೋಮಿನ್​, ದಯಾನಂದ ರಜಪೂತ, ಶಿವು ಕಲಶೆಟ್ಟಿ, ವಿಠ್ಠಲ್​ ಬಡಿಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net