ತಿರುಪತಿಗೆ ಹೊರಡುವ ಬಸ್​ ಮಾರ್ಗ ಬದಲಾಯಿಸದಿರಿ

 ಚೇಳೂರು ತಿರುಪತಿ ಬಸ್​
ಚೇಳೂರು ತಿರುಪತಿ ಬಸ್​
Published on
ಚೇಳೂರು: ಬಾಗೇಪಲ್ಲಿಯಿಂದ ತಿರುಪತಿಗೆ ಹೊರಡುವ ಬಸ್​ ಮಾರ್ಗ ಬದಲಾಯಿಸಬಾರದೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಪ್ರಸ್ತುತ ಬಸ್​ ಚಲಿಸುತ್ತಿರುವ ಮಾರ್ಗವು ನಮಗೆಲ್ಲರಿಗೂ ಅನುಕೂಲಕರವಾಗಿದೆ.
ಇತ್ತೀಚೆಗೆ ಗೌರಿಬಿದನೂರುನಿಂದ ಬರುವಂತೆ ಮಾರ್ಗ ಬದಲಾಯಿಸಲು ಇಲಾಖೆ ನಿರ್ಧರಿಸಿದೆ. ಈ ಮಾರ್ಗ ಬದಲಾವಣೆಯಾದರೆ ವಿದ್ಯಾರ್ಥಿಗಳಿಗೆ ಮತ್ತು ವೃದ್ಧರಿಗೆ ತೊಂದರೆಯಾಗಲಿದೆ.
ಪ್ರಸ್ತುತ ಬಾಗೇಪಲ್ಲಿ ಪಟ್ಟಣದಿಂದ ಬೆಳಗಿನ ಜಾವವಿರುವ ಒಂದೇ ಒಂದು ಬಸ್​ ಇದು 6.40 ಗಂಟೆಗೆ ಪಾತಪಾಳ್ಯ ಮಾರ್ಗವಾಗಿ ಚೇಳೂರಿನಿಂದ ತಿರುಪತಿಗೆ ಹೋಗುತ್ತಿದ್ದು, ಜನತೆಗೆ ಅನುಕೂಲಕರವಾಗಿದೆ. ಆದ್ದರಿಂದ ಹಳೆಯ ಮಾರ್ಗವನ್ನೇ ಮುಂದುವರಿಸಲು ಜನ ಮನವಿ ಮಾಡಿದ್ದಾರೆ.ಟಕದಿಂದ ಹೆಚ್ಚಿನ ಪ್ರಮಾಣದಲ್ಲಿ ಬಸ್​ಗಳು ಬಿಟ್ಟರೆ ಜನತೆಗೆ ಅನುಕೂಲವಾಗುತ್ತದೆ. ಈ ಗ್ರಾಮೀಣ ಭಾಗಗಳಲ್ಲಿ ಬಸ್​ಗಳು ವಿರಳ.
ಡಿಎಎಸ್​ ಜಿಲ್ಲಾ ಸಂಚಾಲಕ ಕಡ್ಡಿಲು ವೆಂಕಟರವಣ ಮಾತನಾಡಿ, ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಸ್ತುತ ಇರುವ ಬಸ್​ ಮಾರ್ಗ ಬದಲಾಯಿಸದೆ, ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು. ಇಲ್ಲದಿದ್ದರೆ ಡಿಪೋ ಮುಂದೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net