"ಡಿ.8ರಿಂದ ಬೆಳಗಾವಿ ಸೆಷನ್ ಶುರುವಾಗುತ್ತದೆ. ಅಲ್ಲಿ ನಮ್ಮ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದ್ದೇವೆ. ಯಾವ ಯಾವ ವಿಚಾರಗಳ ಕುರಿತು ಮಾತನಾಡಬೇಕು ಎಂಬುದನ್ನು ಸಮಾಲೋಚಿದ್ದೇವೆ. ವಿಪಕ್ಷ ಅವಿಶ್ವಾಸ ನಿರ್ಣಯ ಮಂಡನೆ ಮಾಡುತ್ತೇವೆ ಎಂಬ ವರದಿ ಇದೆ. ಅದನ್ನು ಒಟ್ಟಾಗಿ ಎದುರಿಸುತ್ತೇವೆ. ನಾವು ರಾಜ್ಯದ ಸಮಸ್ಯೆಯಾಗಿರುವ ಕಬ್ಬು ವಿಚಾರ, ಕೃಷಿ, ಮೆಕ್ಕೆಜೋಳದ ಸಮಸ್ಯೆ ನಿವಾರಿಸಲು ಪ್ರಯತ್ನಿಸುತ್ತಿದ್ದೇವೆ" ಎಂದರು.