ಅಮ್ಮನೇ ಸರ್ವಸ್ವ ಎಂದ ಡಿಕೆಶಿ: ಪದಗ್ರಹಣಕ್ಕೂ ಮುನ್ನ ತಾಯಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ನಿಯೋಜಿತ ಸಿಎಂ! DK Shivakumar
ಅಮ್ಮನೇ ಸರ್ವಸ್ವ ಎಂದ ಡಿಕೆಶಿ: ಪದಗ್ರಹಣಕ್ಕೂ ಮುನ್ನ ತಾಯಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ನಿಯೋಜಿತ ಸಿಎಂ! DK Shivakumar
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಇಂದು ಅಧಿಕಾರ ಸ್ವೀಕರಿಸಲಿರುವ ಡಿ.ಕೆ. ಶಿವಕುಮಾರ್
ಪದಗ್ರಹಣಕ್ಕೂ ಮುನ್ನ ರಾಜಕೀಯ ಮುತ್ಸದ್ದಿತನ ಹಾಗೂ ಸಂಸ್ಕಾರದ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ ಡಿಕೆಶಿ
ಹೆತ್ತ ತಾಯಿ ಹಾಗೂ ರಾಜ್ಯ ರಾಜಕಾರಣದ ಧ್ರುವತಾರೆಗಳಂತಿರುವ ಹಿರಿಯ ನಾಯಕರ ಆಶೀರ್ವಾದ ಪಡೆದ ನಿಯೋಜಿತ ಸಿಎಂ
ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ಡಿ.ಕೆ. ಶಿವಕುಮಾರ್ ( DK Shivakumar ) ಅವರು ಪದಗ್ರಹಣಕ್ಕೂ ಮುನ್ನ ರಾಜಕೀಯ ಮುತ್ಸದ್ದಿತನ ಹಾಗೂ ಸಂಸ್ಕಾರದ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ.
ತಮ್ಮ ಬದುಕಿನ ಅತ್ಯಂತ ದೊಡ್ಡ ಜವಾಬ್ದಾರಿಯನ್ನು ಸ್ವೀಕರಿಸುವ ಮುನ್ನ ಅವರು ಹೆತ್ತ ತಾಯಿ ಹಾಗೂ ರಾಜ್ಯ ರಾಜಕಾರಣದ ಧ್ರುವತಾರೆಗಳಂತಿರುವ ಹಿರಿಯ ನಾಯಕರನ್ನು ಖುದ್ದಾಗಿ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಈ ಮೂಲಕ ಹೊಸ ಆಡಳಿತದ ಪರ್ವ ಆರಂಭಿಸುವ ಮುನ್ನ ದೊಡ್ಡವರ ಹರಕೆಗೆ ತಲೆಬಾಗಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ತಮ್ಮ ತಾಯಿ ಗೌರಮ್ಮ ಅವರ ಪಾದಗಳಿಗೆ ನಮಸ್ಕರಿಸಿ ಭಾವುಕರಾಗಿ ಆಶೀರ್ವಾದ ಪಡೆದರು. ಕಷ್ಟದ ದಿನಗಳಲ್ಲೂ ತಮಗೆ ಶಕ್ತಿಯಾಗಿ ನಿಂತ ತಾಯಿಯ ಹರಕೆ ಪಡೆದ ಬಳಿಕ, ಅವರ ಫೋಟೋಗಳನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ತಾಯಿಯೇ ಮೂಲ ಎಂದು ಬರೆದುಕೊಂಡಿದ್ದಾರೆ.
ತಾಯಿಯ ಆಶೀರ್ವಾದ ಪಡೆಯುವುದಕ್ಕೂ ಮುನ್ನ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ನಿವಾಸಕ್ಕೆ ತೆರಳಿ ಅವರ ಆಶೀರ್ವಾದ ಪಡೆದರು. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಹಿರಿಯ ನಾಯಕರ ಮಾರ್ಗದರ್ಶನ ಕೋರಿದ ಡಿಕೆಶಿ ನಡೆಗೆ ದೊಡ್ಡಗೌಡರು ಕೂಡ ಬೆನ್ನು ಸವರಿ ಶುಭ ಹಾರೈಸಿದ್ದಾರೆ.
ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಡಿ.ಕೆ. ಶಿವಕುಮಾರ್, ಮುಂಬರುವ ದಿನಗಳಲ್ಲಿ ರಾಜ್ಯದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದು ಕೋರಿದರು. ಬಿಎಸ್ವೈ ಅವರು ನೂತನ ಸಿಎಂಗೆ ಸಿಹಿ ತಿನ್ನಿಸಿ, ಆಡಳಿತ ಯಶಸ್ವಿಯಾಗಲಿ ಎಂದು ಮನಸ್ಪೂರ್ವಕವಾಗಿ ಹಾರೈಸಿದರು. ರಾಜಕೀಯವಾಗಿ ಎಷ್ಟೇ ಜಿದ್ದಾಜಿದ್ದಿ ಇದ್ದರೂ, ಅಧಿಕಾರ ಸ್ವೀಕಾರದ ಇಂತಹ ಮಹತ್ವದ ಸಂದರ್ಭದಲ್ಲಿ ಹಿರಿಯ ನಾಯಕರನ್ನು ಗೌರವಿಸುವ ಮೂಲಕ ಡಿಕೆಶಿ ಎಲ್ಲರ ಗಮನ ಸೆಳೆದಿದ್ದಾರೆ.
ಇನ್ನೂ ತಮ್ಮ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಶಿವಕುಮಾರ್, ಅತ್ಯಂತ ಆತ್ಮೀಯವಾಗಿ ಅಪ್ಪಿಕೊಂಡು ವಿಶ್ವಾಸ ಹಂಚಿಕೊಂಡರು. ಸರ್ಕಾರವನ್ನು ಯಶಸ್ವಿಯಾಗಿ ಮುನ್ನಡೆಸಲು ಅನುಭವಿ ನಾಯಕರ ಒಗ್ಗಟ್ಟಿನ ಮಂತ್ರದೊಂದಿಗೆ ಸಿದ್ದರಾಮಯ್ಯ ಅವರ ಸದಾಶಯಗಳನ್ನು ಪಡೆದುಕೊಂಡರು.