

ದೇವನಹಳ್ಳಿ :
ದಿವ್ಯಜ್ಯೋತಿ ಕ್ರೆಡಿಟ್ ಕೋ&ಆಪರೇಟಿವ್ ಸೊಸೈಟಿ ಪ್ರಸಕ್ತ ಸಾಲಿನಲ್ಲಿ 1.34 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಡಾ.ಎನ್.ಚಂದ್ರಶೇಖರ್ ತಿಳಿಸಿದರು.
ಸೊಸೈಟಿ ಆವರಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, 310 ಸದಸ್ಯರಿರುವ ಸೊಸೈಟಿಯಲ್ಲಿ 1125ಕ್ಕೂ ಹೆಚ್ಚು ಷೇರುದಾರರಿದ್ದಾರೆ. ಸರ್ಕಾರದಿಂದಾಗಲಿ ಡಿಸಿಸಿ ಬ್ಯಾಂಕ್ನಿಂದಾಗಲಿ ನೆರವು ಪಡೆದಿಲ್ಲ. ಸ್ವಂತ ಬಂಡವಾಳ, ಷೇರು ಹಣ, ನಿಶ್ಚಿತ ಠೇವಣಿಯೊಂದಿಗೆ ಸೊಸೈಟಿ ಕಾರ್ಯನಿರ್ವಹಿಸುತ್ತಿದೆ. ಸೊಸೈಟಿ ಪ್ರಾರಂಭದಿಂದ ಇದುವರೆಗೆ 195 ಸದಸ್ಯರಿಗೆ ಒಟ್ಟು 46.12 ಲಕ್ಷ ರೂ. ಸಾಲ ನೀಡಿದೆ. ಪ್ರಸಕ್ತ ಸಾಲಿಗೆ 13 ಜನರಿಗೆ 7.85 ಲಕ್ಷ ರೂ. ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕನ್ನಡ ಸಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎನ್.ಕೃಷ್ಣಪ್ಪ ಮಾತನಾಡಿ, ಒಬ್ಬರಿಂದ ಎಲ್ಲರಿಗಾಗಿ ಎಲ್ಲರಿಂದ ಒಬ್ಬರಿಗೆ ಎಂಬ ಸಹಕಾರದ ತತ್ವದ ಅಡಿಯಲ್ಲಿ ನಡೆಯುವುದೇ ಕೋ&ಆಪರೇಟಿವ್ ಸೊಸೈಟಿಗಳು ಎಂದರು.
ಸೊಸೈಟಿ ಉಪಾಧ್ಯಕ್ಷ ಡಾ.ಮುನಿರಾಜು ಅಪ್ಪಯ್ಯ ಮಾತನಾಡಿದರು.
ಸೊಸೈಟಿ ನಿರ್ದೇಶಕರಾದ ಗೊಕರೆ ಗೇಟ್ ಸಿ.ಮಂಜುನಾಥ, ಆರ್.ವೆಂಕಟರಾಜು, ಎನ್.ಕೃಷ್ಣಪ್ಪ, ಪಿ.ಪದ್ಮಾವತಿ, ಜನಕಮಣಿ, ಪೂಜಾರಿ ನಾಗರಾಜ್, ಎಚ್.ಕೆ.ಶಾಂತಲಾ, ಎಂ.ನಂದಿನಿ, ಶಿವಕುಮಾರ್, ಎಂ.ಮುತ್ತಪ್ಪ, ನಿವೃತ್ತ ಪ್ರೊ, ಶರಣಯ್ಯ ಹಿರೇಮಠ, ರೈತ ಸಂದ ತಾಲೂಕು ಗೌರವಾಧ್ಯಕ್ಷ ಆರ್.ಮುನಿಶಾಮಪ್ಪ, ಜಿಲ್ಲಾ ರಂಗಭೂಮಿ ಕಲಾವಿದರ ಸಂದ ಅಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ ಇತರರು ಇದ್ದರು.