ಪಟ್ಟಣದ ಸಮೀಪದ ಜಿ.ಹರಿವೇಸಂದ್ರ ಗ್ರಾಮದ ಮಂಜುನಾಥ್ ಹಾಗೂ ನೇತ್ರಾವತಿ ದಂಪತಿಯ ಹತ್ತು ವರ್ಷದ ಪುತ್ರಿ ಐದು ತಿಂಗಳ ಹಿಂದೆ ಜ್ವರದಿಂದ ಬಳಲಿ ನಂತರ ಕೈ ಕಾಲು ಸ್ವಾಧೀನ ಇಲ್ಲದಂತಾಗಿ ನಿಮ್ಹಾನ್ಸ್‌ಗೆ ತೆರಳಿದಾಗ ಮಿದುಳು ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದ್ದ ವಿಚಾರ ತಿಳಿದು ಬಂದಿತ್ತು. ಚಿಕಿತ್ಸೆಗೆ ತೆರಳಿದಾಗ ಬಾಲಕಿಯ ಆಧಾರ್ ಕಾರ್ಡ್ ಸರಿ ಇಲ್ಲದ ಬಗ್ಗೆ ತಿಳಿದು ತಿದ್ದುಪಡಿಗೆ ನಿರಂತರ ಪ್ರಯತ್ನ ಪಟ್ಟಿದ್ದರೂ ಪ್ರಯೋಜನ ಆಗಿರಲಿಲ್ಲ.