ಜಿಲ್ಲಾಡಳಿತದಿಂದ ಸಂತ ಕವಿ ಸರ್ವಜ್ಞ ಜಯಂತಿ

ರಾಯಚೂರಿನ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ  ಶುಕ್ರವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು  ಮಹಾನಗರ ಪಾಲಿಕೆ ಸಮುದಾಯ ಸಂಘಟನಾಧಿಕಾರಿ ಕೃಷ್ಣ ಕಟ್ಟಿಮನಿ ಉದ್ಘಾಟಿಸಿದರು. ಗ್ರೇಡ್ 2 ತಹಶೀಲ್ದಾರ್ ಪರಶುರಾಮ,ನಿವೃತ್ತ ಪ್ರಾಚಾರ್ಯ ವೈಸುರೇಂದ್ರಬಾಬು ಕುಂಬಾರ , ಸಮಾಜದ ಪ್ರಮುಖರಾದ ಶಿವರಾಜಪ್ಪ, ವೀರಭದ್ರಪ್ಪ, ಬಸವರಾಜ, ಶಿವಪ್ರಕಾಶ, ಭೀಮಪ್ಪ, ಲಕ್ಷ್ಮೀ ರೆಡ್ಡಿ, ತಿಮ್ಮಪ್ಪ, ಬಸವರಾಜ, ರಮೇಶ, ನರಸಿಂಗಪ್ಪ, ಸಾಯಿಬಾಬ ಇದ್ದರು.

Published on

ರಾಯಚೂರು

ಸಮ ಸಮಾಜ ನಿರ್ಮಾಣದ ಕುರಿತು ಉತ್ತಮ ಸಂದೇಶಗಳನ್ನು ಜರಿಗೆ ತಮ್ಮ ವಚನಗಳ ಮೂಲಕ ನೀಡಿದ ಮಹಾಜಕವಿ ಸರ್ವಜ್ಞರ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕೆಂದು ಮಹಾನಗರ ಪಾಲಿಕೆ ಸಮುದಾಯ ಸಂಘಟನಾಧಿಕಾರಿ ಕೃಷ್ಣ ಕಟ್ಟಿಮನಿ ಹೇಳಿದರು.

ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಮಡಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸರ್ವಜ್ಞ ಕೇವಲ ಒಂದು ಜಾತಿಗೆ ಸೀಮಿತರಾದವರಲ್ಲ ಅವರು, ಇಡೀ ಜಗತ್ತಿಗೆ ಉತ್ತಮ ಸಂದೇಶಗಳನ್ನು ನೀಡಿದ ವಿಶ್ವವ್ಯಾಪಿ ಕವಿಯಾಗಿದ್ದಾರೆ. ಸಮಾಜ ಇನ್ನಷ್ಟು ಅಭಿವೃದ್ಧಿಯಾಗಲು ಸಮಾಜದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಬೇಕು. ಅಷ್ಟೆ ಅಲ್ಲದೇ. ಹಿಂದಿನ ಶರಣರ ತತ್ವಾದರ್ಶಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಉತ್ತಮ ಪ್ರಜೆಗಳ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.

ಯರಮರಸ್‌ನ ನಿವೃತ್ತ ಪ್ರಾಚಾರ್ಯ ವೈಸುರೇಂದ್ರಬಾಬು ಕುಂಬಾರ ಉಪನ್ಯಾಸ ನೀಡಿ, 16ನೇ ಶತಮಾನದ ಶ್ರೇಷ್ಠ ಕವಿಗಳಲ್ಲೊಬ್ಬರಾದ ಸರ್ವಜ್ಞರು ಮೂರು ಸಾಲುಗಳಲ್ಲಿ ಅರ್ಥಪೂರ್ಣ ವಚನಗಳನ್ನು ನೀಡಿದ್ದಾರೆ. ತಮ್ಮ ತ್ರಿಪದಿ ಸಾಲುಗಳಲ್ಲಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ. ಸರ್ವಜ್ಞರು ಕನ್ನಡ ನಾಡಿನ ಸಂಪತ್ತು ಎಂದು ತಿಳಿಸಿದರು.

ಕಾರ್ಯಕ್ರಮದ ಮೊದಲು ನಗರದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಸಂತಕವಿ ಸರ್ವಜ್ಞ ಅವರ ಭಾವಚಿತ್ರದ ಮೆರವಣಿಗೆಗೆ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಚಾಲನೆ ನೀಡಿದರು. ಅಲ್ಲಿಂದ ಆರಂಭಗೊಂಡ ಮೆರವಣಿಗೆಯು ನಗರದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಜಿಲ್ಲಾ ರಂಗಮಅದಿರಕ್ಕೆ ಬಂದು ಸೇರಿತು.

ಡೊಳ್ಳಿನ ಕಲಾ ತಂಡಗಳ ಮೂಲಕ ಮೆರವಣಿಗೆಯು ಅದ್ಧೂರಿಯಾಗಿ ನಡೆಯಿತು.

ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ್ ಪರಶುರಾಮ, ಸಮಾಜದ ಪ್ರಮುಖರಾದ ಶಿವರಾಜಪ್ಪ, ವೀರಭದ್ರಪ್ಪ, ಬಸವರಾಜ, ಶಿವಪ್ರಕಾಶ, ಭೀಮಪ್ಪ, ಲಕ್ಷ್ಮೀ ರೆಡ್ಡಿ, ತಿಮ್ಮಪ್ಪ, ಬಸವರಾಜ, ರಮೇಶ, ನರಸಿಂಗಪ್ಪ, ಸಾಯಿಬಾಬ ಸೇರಿದಂತೆ ಅನೇಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net