ಪರಿಸರ ಸಂರಕ್ಷಣೆಗಾಗಿ ಸಸಿಗಳ ವಿತರಣೆ

ಮದ್ದೂರು ನಗರದ ರೋಟರಿ ಸಂಸ್ಥೆ ಆವರಣದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ಕದಲೂರು ಲೋಕೇಶ್ ರೈತರಿಗೆ ತುರಬೇವು ಸಸಿಗಳನ್ನು ವಿತರಿಸಿದರು. ಗವಿಯಪ್ಪ, ಪ್ರವೀಣ್, ಹೊನ್ನೇಗೌಡ, ಕುಮಾರ್, ಪ್ರಕಾಶ್, ವೆಂಕಟೇಶ್, ಅಭಿಷೇಕ್ ಇದ್ದರು.
ಮದ್ದೂರು ನಗರದ ರೋಟರಿ ಸಂಸ್ಥೆ ಆವರಣದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ಕದಲೂರು ಲೋಕೇಶ್ ರೈತರಿಗೆ ತುರಬೇವು ಸಸಿಗಳನ್ನು ವಿತರಿಸಿದರು. ಗವಿಯಪ್ಪ, ಪ್ರವೀಣ್, ಹೊನ್ನೇಗೌಡ, ಕುಮಾರ್, ಪ್ರಕಾಶ್, ವೆಂಕಟೇಶ್, ಅಭಿಷೇಕ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೋಟರಿ ಸಂಸ್ಥೆ ಅಧ್ಯಕ್ಷ ಕದಲೂರು ಲೋಕೇಶ್
  • ರೋಟರಿ ಸಂಸ್ಥೆ ಆವರಣ
ಮದ್ದೂರು: ಪರಿಸರ ಸಂರಕ್ಷಣೆ ಹಾಗೂ ರೈತರ ಆರ್ಥಿಕಾಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ 5 ಸಾವಿರ ಸಸಿಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಕದಲೂರು ಲೋಕೇಶ್ ಹೇಳಿದರು.
ನಗರದ ರೋಟರಿ ಸಂಸ್ಥೆ ಆವರಣದಲ್ಲಿ ಇತ್ತೀಚೆಗೆ ರೈತರಿಗೆ ತುರಬೇವು ಸಸಿಗಳನ್ನು ವಿತರಿಸಿ ಮಾತನಾಡಿದರು. ಅರಣ್ಯ ಪ್ರದೇಶಗಳ ವಿಸ್ತರಣೆ, ಭೂಮಿಯ ಫಲವತ್ತತೆ ಹೆಚ್ಚಳ, ಮಳೆ ಪ್ರಮಾಣ ಸುಧಾರಣೆ ಹಾಗೂ ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಸಂಸ್ಥೆ ವತಿಯಿಂದ ತಾಲೂಕಿನ ರೈತರಿಗೆ ಉಚಿತವಾಗಿ 5 ಸಾವಿರ ಸಸಿಗಳನ್ನು ವಿತರಣೆ ಮಾಡಲಾಗಿದೆ ಎಂದರು.
ಇದು ಸಸಿ ನೆಡಲು ಅತ್ಯುತ್ತಮ ಸಮಯವಾಗಿದ್ದು, ರೈತರು ಕೃಷಿ ಜಮೀನಿನ ಬದುವಿನಲ್ಲಿ ಹಾಗೂ ಖಾಲಿ ಜಾಗಗಳಲ್ಲಿ ಸಸಿ ನೆಡುವುದರಿಂದ ಭವಿಷ್ಯದಲ್ಲಿ ಹೆಚ್ಚುವರಿ ಆದಾಯಗಳಿಸಬಹುದಾಗಿದೆ ಎಂದು ಸಲಹೆ ನೀಡಿದರು.
ಈಗಾಗಲೇ ರೋಟರಿ ಸಂಸ್ಥೆ ವತಿಯಿಂದ ವಿವಿಧ ಗ್ರಾಮಗಳಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಲೋಕೇಶ್ ತಿಳಿಸಿದರು.
ವಲಯ ಅರಣ್ಯಾಧಿಕಾರಿ ಗವಿಯಪ್ಪ, ಕಾರ್ಯದರ್ಶಿ ಪ್ರವೀಣ್, ಮಾಜಿ ಅಧ್ಯಕ್ಷರಾದ ಹೋನ್ನೇಗೌಡ, ಕುಮಾರ್, ಪ್ರಕಾಶ್, ವೆಂಕಟೇಶ್, ಸದಸ್ಯರಾದ, ವಿಜಯ್, ಮಂಜು, ಅಭಿಷೇಕ್, ಕೃಷ್ಣ, ಮೋಹನ್,ರವಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net