ಹುಳಿಯಾರಿನ students ನಿವೃತ್ತ ಮುಖ್ಯಶಿಕ್ಷಕ ಎ.ಡಿ.ರವೀಂದ್ರ ಅವರು ಮಗಳ ಹುಟ್ಟುಹಬ್ಬದ ಅಂಗವಾಗಿ ಮಕ್ಕಳಿಗೆ ಆಟೋಟ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಿದರು. ನಿವೃತ್ತ ಅಂಗನವಾಡಿ ಶಿಕ್ಷಕಿ ಪೂರ್ಣಮ್ಮ, ಮುಖ್ಯಶಿಕ್ಷಕ ಈರಸಿದ್ದಯ್ಯ, ಅತಿಥಿ ಶಿಕ್ಷಕಿ ನೀಲಾಂಬಿಕೆ, ಅಂಗನವಾಡಿ ಶಿಕ್ಷಕಿ ಮಂಜುಳಾ, ಸಹಾಯಕಿ ಅಮೃತಾ, ಅಡುಗೆ ಸಿಬ್ಬಂದಿ ಕುಸುಮಾ ಇದ್ದರು.
ಜನ್ಮದಿನ ಎಂದರೆ ಭೋಜನ, ಅದ್ದೂರಿತನಕ್ಕೆ ಸೀಮಿತವಾಗುತ್ತಿರುವ ದಿನಗಳಲ್ಲಿ,
students
ನಿವೃತ್ತ ಮುಖ್ಯಶಿಕ್ಷಕರೊಬ್ಬರು ಸರ್ಕಾರಿ ಶಾಲಾ ವಿದ್ಯಾರ್ಥಿಗಳೊಂದಿಗೆ ಮಗಳ ಹುಟ್ಟುಹಬ್ಬ ಆಚರಿಸುವ ಮೂಲಕ ಮಾದರಿಯಾಗಿದ್ದಾರೆ.
ನಿವೃತ್ತ ಮುಖ್ಯಶಿಕ್ಷಕ ಎ.ಡಿ.ರವೀಂದ್ರ ತಮ್ಮ ಮಗಳು ಅನನ್ಯಾ ಹುಟ್ಟುಹಬ್ಬದ ಅಂಗವಾಗಿ, ತಾವು ಸೇವೆ ಸಲ್ಲಿಸಿ ನಿವೃತ್ತರಾದ ಮರನಡಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿ ವಿತರಿಸಿ ಕಾಳಜಿ ಮೆರೆದಿದ್ದಾರೆ. ತಾವು ಸೇವೆಯಲ್ಲಿದ್ದಾಗಿನಿಂದಲೂ ಮಗಳ ಜನ್ಮದಿನದಂದು ಈ ಶಾಲೆಗೆ ನೆರವು ನೀಡುತ್ತಾ ಬಂದಿರುವ ರವೀಂದ್ರ, ನಿವೃತ್ತಿ ನಂತರವೂ ಈ ಪರಿಪಾಠ ಮುಂದುವರಿಸಿಕೊಂಡು ಬಂದಿದ್ದಾರೆ. ಈ ವರ್ಷವೂ ಶಾಲಾ ಮಕ್ಕಳಿಗೆ ಆಟೋಟ ಸ್ಪರ್ಧೆ ಆಯೋಜಿಸಿ ಬಹುಮಾನ ವಿತರಿಸಿದರು.
ಆಟೋಟ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.