ಮೃತ ರೈಲ್ವೆ ನೌಕರರ ಕುಟುಂಬಗಳಿಗೆ ವಿಮೆ ಹಣ ವಿತರಣೆ

ಮೃತಪಟ್ಟ ರೈಲ್ವೆ ಸಿಬ್ಬಂದಿಗಳ ಕುಟುಂಬಗಳಿಗೆ ರೈಲ್ವೆ ವೇತನ ಪ್ಯಾಕೇಜ್ ಯೋಜನೆಯಡಿ ಎಸ್‌ಬಿಐನಿಂದ ವಿಮಾ ಮೊತ್ತವನ್ನು ವಿತರಿಸಲಾಯಿತು. ಎಸ್‌ಬಿಐ ಡಿಜಿಎಂ ಪಂಕಜ್ ಕುಮಾರ್, ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಆಶುತೋಷ್ ಕುಮಾರ್ ಸಿಂಗ್ ಮತ್ತಿತರರಿದ್ದರು.
ಮೃತಪಟ್ಟ ರೈಲ್ವೆ ಸಿಬ್ಬಂದಿಗಳ ಕುಟುಂಬಗಳಿಗೆ ರೈಲ್ವೆ ವೇತನ ಪ್ಯಾಕೇಜ್ ಯೋಜನೆಯಡಿ ಎಸ್‌ಬಿಐನಿಂದ ವಿಮಾ ಮೊತ್ತವನ್ನು ವಿತರಿಸಲಾಯಿತು. ಎಸ್‌ಬಿಐ ಡಿಜಿಎಂ ಪಂಕಜ್ ಕುಮಾರ್, ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಆಶುತೋಷ್ ಕುಮಾರ್ ಸಿಂಗ್ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮೃತ ರೈಲ್ವೆ ನೌಕರರ ಕುಟುಂಬಗಳಿಗೆ ವಿಮೆ ಹಣ ವಿತರಣೆ
  • ‘ರೈಲ್ವೆ ವೇತನ ಪ್ಯಾಕೇಜ್’ ಅಡಿಯ 1.80 ಕೋಟಿ ರೂ. ವಿಮಾ ಮೊತ್ತ
  • ಎಸ್​ಬಿಐ ನಲ್ಲಿ ತೆರೆಯಲಾದ ರೈಲ್ವೆ ನೌಕರ ಖಾತೆದಾರ ಕುಟುಂಬಕ್ಕೆ ಉಪಯೋಗ

ಬೆಂಗಳೂರು: ಮೃತಪಟ್ಟ9 ರೈಲ್ವೆನೌಕರರ ಕುಟುಂಬಗಳಿಗೆ ಭಾರತೀಯಸ್ಟೇಟ್ ಬ್ಯಾಂಕ್ (ಎಸ್‌ಬಿಐ)‘ರೈಲ್ವೆ ವೇತನಪ್ಯಾಕೇಜ್’ (ಆರ್‌ಎಸ್‌ಪಿ)ಅಡಿಯಲ್ಲಿ ಒಟ್ಟು1.80 ಕೋಟಿರೂ. ವಿಮಾಮೊತ್ತವನ್ನು ಬುಧವಾರ ಬೆಂಗಳೂರುವಿಭಾಗೀಯ ಕಾರ್ಯಾಲಯದ ಸಭಾಂಗಣದಲ್ಲಿವಿತರಿಸಲಾಯಿತು.

ಎಸ್‌ಬಿಐರೈಲ್ವೆ ವೇತನ ಪ್ಯಾಕೇಜ್ ಭಾರತೀಯರೈಲ್ವೆ ನೌಕರರಿಗಾಗಿ ವಿಶೇಷವಾಗಿವಿನ್ಯಾಸಗೊಳಿಸಲಾದ ವೇತನಖಾತೆಯಾಗಿದ್ದು,ಅವರ ಅಗತ್ಯಗಳಿಗೆಅನುಗುಣವಾಗಿ ವಿವಿಧ ಸೌಲಭ್ಯಗಳುಮತ್ತು ಸೇವೆಗಳನ್ನು ಒದಗಿಸುತ್ತದೆ.ಎಸ್‌ಬಿಐದಲ್ಲಿತಮ್ಮ ವೇತನ ಖಾತೆಗಳನ್ನು ತೆರೆಯುವರೈಲ್ವೆ ನೌಕರರು 1ಕೋಟಿ ರೂ.ವೈಯಕ್ತಿಕ ಅಪಘಾತವಿಮೆ ಹಾಗೂ 10ಲಕ್ಷ ರೂ.ಗ್ರೂಪ್ ಟರ್ಮಲೈಫ್ ಇನ್ಶೂರೆನ್ಸ್ ಸೇರಿದಂತೆವಿವಿಧ ಸೌಲಭ್ಯಗಳಿಗೆ ಅರ್ಹರಾಗಿರುತ್ತಾರೆ.

ಈಸಂದರ್ಭದಲ್ಲಿ ಮಾತನಾಡಿದ ಎಸ್‌ಬಿಐನಡಿಜಿಎಂ ಪಂಕಜ್ ಕುಮಾರ್,ರೈಲ್ವೆ ನೌಕರರುತಮ್ಮ ಆರ್ಥಿಕ ಅಗತ್ಯಗಳನ್ನುಯೋಜಿಸಲು ಮತ್ತು ಭದ್ರಪಡಿಸಿಕೊಳ್ಳಲುಸಹಾಯ ಮಾಡಲು ಸ್ಟೇಟ್ ಬ್ಯಾಂಕ್ಬದ್ಧವಾಗಿದೆ,ರೈಲ್ವೆ ವಲಯಮತ್ತು ಅದರ ನೌಕರರ ನಿರ್ದಿಷ್ಟಅವಶ್ಯಕತೆಗಳಿಗೆ ಅನುಗುಣವಾಗಿಆರ್ಥಿಕ ಪ್ರಯೋಜನೆಗಳು ಮತ್ತುಸೇವೆಗಳನ್ನು ರೂಪಿಸಲು ಬ್ಯಾಂಕ್ಸಿದ್ಧವಾಗಿದೆ ಎಂದರು.

ಮೃತಪಟ್ಟಬೆಂಗಳೂರು ವಿಭಾಗದ 9ರೈಲ್ವೆ ನೌಕರರಕುಟುಂಬಗಳಿಗೆ ಒಟ್ಟು 1.80ಕೋಟಿ ರೂ. ವಿತರಿಸಲಾಯಿತು.ಇದರಲ್ಲಿ ಅಪಘಾತದಿಂದಸಂಭವಿಸಿದ ಒಂದು ಸಾವಿನ ಪ್ರಕರಣಕ್ಕೆ1 ಕೋಟಿ ಮತ್ತು ಸ್ವಾಭಾವಿಕ ಕಾರಣಗಳಿಂದಸಂಭವಿಸಿದ 8ಸಾವಿನ ಪ್ರಕರಣಗಳಲ್ಲಿತಲಾ 10 ಲಕ್ಷರೂ. ನಂತೆವಿತರಿಸಲಾಯಿತು.

ಈಸಂದರ್ಭದಲ್ಲಿ ಎಸ್‌ಬಿಐ ಎಜಿಎಂಮೇಘಾ ಅಗರ್ವಾಲ್,ಬೆಂಗಳೂರು ವಿಭಾಗದಹೆಚ್ಚುವರಿ ವಿಭಾಗೀಯ ರೈಲ್ವೆವ್ಯವಸ್ಥಾಪಕ ಪರೀಕ್ಷಿತ್ಮೋಹನ್‌ಪುರಿಯಾ,ಪ್ರವೀಣ್ ಕಾತರಕಿಹಾಗೂ ಮತ್ತಿತರ ಹಿರಿಯ ಅಧಿಕಾರಿಗಳುಉಪಸ್ಥಿತರಿದ್ದರು.

ಭವಿಷ್ಯವು ಅನಿಶ್ಚಿತವಾಗಿದ್ದು, ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸಲು ಪ್ರತಿಯೊಬ್ಬರೂ ಸಿದ್ಧರಾಗಿರಬೇಕು. ಈ ಹಿನ್ನೆಲೆಯಲ್ಲಿ, ‘ರೈಲ್ವೆ ವೇತನ ಪ್ಯಾಕೇಜ್’ ರೈಲ್ವೆ ನೌಕರರು ಮತ್ತು ಅವರ ಕುಟುಂಬಗಳಿಗೆ ಹೆಚ್ಚುವರಿ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net