ಕುರಿ&ಮೇಕೆಗಳನ್ನು ಕಳೆದುಕೊಂಡ ರೈತ ಕುಟುಂಬಗಳು ಕಷ್ಟ ಎದುರಿಸಬೇಕಾಗುತ್ತದೆ. ಆದ್ದರಿಂದ ವೈಯಕ್ತಿಕವಾಗಿ ಒಟ್ಟು 1.10 ಲಕ್ಷ ರೂ. ಹಾಗೂ ಪಂಚಾಯಿತಿಯಿಂದ 20 ಸಾವಿರ ರೂ. ಪರಿಹಾರ ವಿತರಿಸುತ್ತಿದ್ದೇವೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಕೆಲ ದಿನಗಳ ಹಿಂದೆ ನಾಯಿಗಳ ದಾಳಿಯಿಂದ ಕುರಿ&ಮೇಕೆ ಕಳೆದುಕೊಂಡ ರಾಮಪ್ಪ, ಚೌಡಪ್ಪ, ನಾರಾಯಣಸ್ವಾಮಿ, ದೇವರಾಜ್ ರೈತರಿಗೆ ನೆಲವಾಗಿಲು ಗ್ರಾಪಂನಲ್ಲಿ ಶಾಸಕರು ವೈಯಕ್ತಿಕ ಪರಿಹಾರ ಧನ ವಿತರಿಸಿ ಮಾತನಾಡಿದರು.
ಗ್ರಾಮದಲ್ಲಿ ಪಶುಪಾಲನೆಯಲ್ಲಿ ತೊಡಗಿಸಿಕೊಂಡು ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ತೊಡಗಿದ್ದ ನಾಲ್ಕೆ$ದು ಕುಟುಂಬಗಳು ಬೀದಿ ನಾಯಿಗಳ ದಾಳಿಯಿಂದ ಸುಮಾರು ಕುರಿಗಳನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ಗ್ರಾಮದ ಮುಖಂಡರು ನನ್ನ ಗಮನಕ್ಕೆ ತಂದಿದ್ದು, ಸಂತ್ರಸ್ತ ಕುಟುಂಬಗಳಿಗೆ ಧೈರ್ಯ ತುಂಬಿ ಎಲ್ಲ ರೀತಿಯಲ್ಲಿ ನಾವು ನಿಮ್ಮ ಜತೆ ಇರುತ್ತೇವೆ ಎಂದು ಹೇಳಿದರು. ಸರ್ಕಾರದಿಂದ ಸಿಗುವ ಪರಿಹಾರ ಧನವನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು. ನಾಯಿಗಳ ಹಾವಳಿ ತಡೆಗೆ ಗ್ರಾಪಂನಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರಾಪಂ ಮಾಜಿ ಅಧ್ಯೆ ಪದ್ಮಾ ನಾಗೇಶ್, ಚಂದ್ರಪ್ಪ, ಮಾಜಿ ಸದಸ್ಯ ಮಧುಸೂದನ್, ಎಸ್ಎಫ್ಸಿಎಸ್ ಮಾಜಿ ಉಪಾಧ್ಯಕ್ಷ ಎ.ಆರ್.ಕೃಷ್ಣಪ್ಪ, ಎಂಪಿಸಿಎಸ್ ಅಧ್ಯಕ್ಷ ಗಿರೀಶ್, ನಿರ್ದೇಶಕರಾದ ಜಿ.ಮೂರ್ತಿ, ಸಿಇಒ ಜಯಣ್ಣ, ಪಿಡಿಒ ಶೋಭರಾಣಿ, ಕರವಸೂಲಿಗಾರ ರವಿಚಂದ್ರ, ರೈತರು ಇದ್ದರು.