ಸಿಎಂ ಕಾರ್ಯಕ್ರಮದಲ್ಲಿ ಹಕ್ಕುಪತ್ರ ವಿತರಣೆ

Distribution of certificates at CM program
Distribution of certificates at CM program
Published on
ವೈ.ಎನ್​.ಹೊಸಕೋಟೆ: ಹೋಬಳಿಯ ಮೇಗಲಪಾಳ್ಯ ತಾಂಡಾ ದೊಡ್ಡಲಂಬಾಣಿಹಟ್ಟಿ ಗ್ರಾಮವನ್ನು ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಕಂದಾಯ ಗ್ರಾಮವಾಗಿ ರೂಪಿಸಲಾಗಿದ್ದು, ಈಗಾಗಲೇ ಹಕ್ಕುಪತ್ರ ಮಂಜೂರಾತಿಗೆ ಸಿದ್ಧವಾಗಿದ್ದು, ಮೇ 20ರಂದು ತುಮಕೂರಲ್ಲಿ ಸಿಎಂ ಸಿದ್ದರಾಮಯ್ಯ ಹಕ್ಕುಪತ್ರ ವಿತರಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇ 20ರಂದು ತುಮಕೂರಿನ ಜೂನಿಯರ್​ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲಲ್​ಇ ಹಕ್ಕುಪತ್ರ ವಿತರಣೆ ಮಾಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಲಂಬಾಣಿ ಹಟ್ಟಿ ಪ್ರದೇಶದ ಅರ್ಹ ಫಲಾನುಭವಿಗಳು ತಪ್ಪದೇ ಆಗಮಿಸಿ ತಮ್ಮ ಹಕ್ಕುಪತ್ರ ಪಡೆದುಕೊಳ್ಳಬೇಕು ಎಂದು ವೈ.ಎನ್​.ಹೊಸಕೋಟೆ ಹೋಬಳಿಯ ರಾಜಸ್ವ ನಿರೀಕ್ಷಕ ಕಿರಣ್​ ಕುಮಾರ್​ ಮನವಿ ಮಾಡಿದ್ದಾರೆ.
ಕಾರ್ಯಕ್ರಮದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೋಬಳಿಯ ಸೂಲನಾಯಕನಹಳ್ಳಿ, ಚಿಕ್ಕಹಳ್ಳಿ, ನಾಗಲಾಪುರ, ಮೇಗಲಪಾಳ್ಯ ಅಂಬೇಡ್ಕರ್​ ಬಡಾವಣೆ ಹಾಗೂ ರಾಮಕೃಷ್ಣಪುರ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net