ಅರ್ಹರಿಗೆ ಬಿಪಿಎಲ್​ ಕಾರ್ಡ್​ ವಿತರಿಸಿ BPL cards

ಅರ್ಹರಿಗೆ ಬಿಪಿಎಲ್​ ಕಾರ್ಡ್​ ವಿತರಿಸಿ BPL cards
ಅರ್ಹರಿಗೆ ಬಿಪಿಎಲ್​ ಕಾರ್ಡ್​ ವಿತರಿಸಿ BPL cards
Published on
ಕದರೀಪುರ: ಕೋಲಾರ ಜಿಲ್ಲೆಯಾದ್ಯಂತ ಸಾವಿರಾರು ಬಿಪಿಎಲ್​ ಕಾರ್ಡ್​ಗಳು ಎಪಿಎಲ್​ಗೆ ವರ್ಗವಾಗಿದ್ದು, ಅವುಗಳನ್ನು ಪರಿಷ್ಕರಿಸಿ ಅರ್ಹರಿಗೆ ಮರಳಿ ಬಿಪಿಎಲ್​ ಕಾರ್ಡ್​ ಒದಗಿಸುವಂತೆ ಕಾಂಗ್ರೆಸ್​ ಕಿಸಾನ್​ ಟಕದ ಜಿಲ್ಲಾಧ್ಯಕ್ಷ ಸೀತಿ ಹೊಸೂರು ಮುರುಳಿಗೌಡ ಕೋಲಾರದಲ್ಲಿ ಬುಧವಾರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. BPL cards
ಬಿಪಿಎಲ್​ ಕಾರ್ಡ್​ ಹೊಂದಲು ಇಲಾಖೆಯ ಮಾನದಂಡಗಳಿದ್ದು, ಬಿಪಿಎಲ್​ ಲಾನುಭವಿಗಳನ್ನೂ ಸಹ ಎಪಿಎಲ್​ಗೆ ಬದಲಾಯಿಸಿರುವುದು ಬಡವರಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ತೊಡಕಾಗಿದೆ. ಆದ್ದರಿಂದ ಮತ್ತೊಮ್ಮೆ ಪಡಿತರ ಚೀಟಿ ಪರಿಷ್ಕರಿಸಿ ಅರ್ಹರಿಗೆ ಬಿಪಿಎಲ್​ ಒದಗಿಸಬೇಕು ಹಾಗೂ ಹೊಸ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಸಿಬೇಕು ಎಂದರು.
ಬಿಪಿಎಲ್​ ಕಾರ್ಡ್​ ನಿಂದಾಗಿ ಬಡವರು ರಾಜ್ಯದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಿಟಿ ಸ್ಕಾ$್ಯನ್​, ಎಂಆರ್​ಐ ಸ್ಕಾ$ನ್​, ಅಲ್ಟ್ರಾಸೌಂಡ್​ ಹಾಗೂ ಇನ್ನಿತರ ಸೌಲಭ್ಯಗಳನ್ನು ಉಚಿತವಾಗಿ ಪಡೆಯಬಹುದಾಗಿದೆ. ಬಡ ಕುಟುಂಬಗಳು ಹಸಿವಿನಿಂದ ಮುಕ್ತವಾಗಬೇಕೆಂಬ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ಪಡಿತರ ದೊರೆಯಲಿದೆ ಎಂದರು.
ಆಹಾರ ಮತ್ತು ನಾಗರಿಕ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ್​ ಮನವಿ ಸ್ವೀಕರಿಸಿ ಮಾತನಾಡಿ, ಪಡಿತರ ಚೀಟಿಗಳನ್ನು ಮತ್ತೊಮ್ಮೆ ಪರಿಷ್ಕರಿಸಿ ಅರ್ಹ ಲಾನುಭವಿಗಳಿಗೆ ಬಿಪಿಎಲ್​ ಕಾರ್ಡ್​ ಸೌಲಭ್ಯ ಒದಗಿಸಲಾಗುವುದು, ರೈತಾಪಿ ವರ್ಗಕ್ಕೆ ಯಾವುದೇ ತೊಂದರೆಯಾಗದ ರೀತಿ ಗಮನಹರಿಸಲಾಗುವುದು ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net