ಕಾನೂನಾತ್ಮಕವಾಗಿ ಅರ್ಜಿ ವಿಲೇವಾರಿ ಮಾಡಿ / NELAMANGAL

ನೆಲಮಂಗಲ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ಬುಧವಾರ ಆಯೋಜಿಸಿದ್ದ ಜನಸ್ಪಂದನ ಸಭೆಯಲ್ಲಿ ಶಾಸಕ ಎನ್​.ಶ್ರೀನಿವಾಸ್​ಗೆ ಸಾರ್ವಜನಿಕರಿಂದ ಮನವಿ ಸ್ವೀಕರಿಸಿದರು.  ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಬಿಂದೂ, ನಗರಸಭೆ ಅಧ್ಯಕ್ಷ ಎನ್​.ಗಣೇಶ್​, ಉಪಾಧ್ಯಕ್ಷ ಆನಂದ್​,  ಪೌರಾಯುಕ್ತ ಗಂಗಾಧರ್​ ಇದ್ದರು.
ನೆಲಮಂಗಲ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ಬುಧವಾರ ಆಯೋಜಿಸಿದ್ದ ಜನಸ್ಪಂದನ ಸಭೆಯಲ್ಲಿ ಶಾಸಕ ಎನ್​.ಶ್ರೀನಿವಾಸ್​ಗೆ ಸಾರ್ವಜನಿಕರಿಂದ ಮನವಿ ಸ್ವೀಕರಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಬಿಂದೂ, ನಗರಸಭೆ ಅಧ್ಯಕ್ಷ ಎನ್​.ಗಣೇಶ್​, ಉಪಾಧ್ಯಕ್ಷ ಆನಂದ್​, ಪೌರಾಯುಕ್ತ ಗಂಗಾಧರ್​ ಇದ್ದರು.
Published on
ನೆಲಮಂಗಲ : ಪೋಡಿ, ರಸ್ತೆ ಒತ್ತುವರಿ ತೆರವು, ಪಡಿತರ ಚೀಟಿ, ನಿವೇಶನ ಹಂಚಿಕೆ, ಹಕ್ಕು ಪತ್ರ ವಿತರಣೆ, ಇ&ಖಾತೆ ಸೇರಿ ವಿವಿಧ ಸಮಸ್ಯೆ ಪರಿಹರಿಸುವಂತೆ ಸಾರ್ವಜನಿಕರು ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ಬುಧವಾರ ಆಯೋಜಿಸಿದ್ದ ಜನಸ್ಪಂದನ ಸಭೆಯಲ್ಲಿ ಶಾಸಕ ಎನ್​.ಶ್ರೀನಿವಾಸ್​ಗೆ ಮನವಿ ಸಲ್ಲಿಸಿದರು.
ತಾಲೂಕಿನ ವಿವಿಧ ಭಾಗದಿಂದ ಆಗಮಿಸಿದ್ದ ರೈತರು ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದ ಶಾಸಕರು, ೇತ್ರದ ಜನರಿಗೆ ಅನುಕೂಲವಾಗಲು ಜನಸ್ಪಂದನಾ ಸಭೆ ನಡೆಸುತ್ತಿದ್ದು, ಉತ್ತಮ ಸ್ಪಂದನೆ ದೊರಕಿದೆ. 80ಕ್ಕೂ ಹೆಚ್ಚು ಅರ್ಜಿಗಳನ್ನು ರೈತರು ಸಲ್ಲಿಸಿದ್ದು, ಕೂಡಲೇ ಅರ್ಜಿಗಳನ್ನು ಕಾನೂನಾತ್ಮಕವಾಗಿ ಬಗೆಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಸರ್ಕಾರದಿಂದ ಮನೆ ನಿರ್ಮಾಣಕ್ಕೆ ಪ್ರಸ್ತುತ 1.75 ಲಕ್ಷ ರೂಪಾಯಿ ಸಹಾಯ ಧನ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ 3.5 ಲಕ್ದ ರೂಪಾಯಿ ಹೆಚ್ಚಳ ಮಾಡಲು ಅಲೋಚನೆ ಮಾಡಿದೆ. ಮನೆ ನಿರ್ಮಾಣಕ್ಕೆ ಆರ್ಜಿ ಸಲ್ಲಿಸುವವರು ಸರ್ಕಾರದ ಆದೇಶದ ಬಳಿಕ ಸಲ್ಲಿಸಬೇಕು. ಜತೆಗೆ ಗಂಗ ಕಲ್ಯಾಣ ಯೋಜನೆಗೆ ಆರ್ಜಿ ಸಲ್ಲಿಸಿದ ಆರ್ಹ ಫಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ ಯೋಜನೆ ಸೌಲಭ್ಯ ನೀಡಲಾಗುವುದು ಎಂದು ಶಾಸಕ ಎನ್​.ಶ್ರೀನಿವಾಸ್​ ತಿಳಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇ&ಖಾತಾ ಮಾಡಲು ಇತ್ತೀಚೆಗೆ ಸರ್ಕಾರ ಹೊಸ ಕಾನೂನು ಜಾರಿಗೊಳಿಸಿದ್ದು, ಇ&ಖಾತಾ ಮಾಡಲು ವಿಳಂಬವಾಗಿದೆ. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.
30 ಅರ್ಜಿಗೆ ಪರಿಹಾರ : ತಹಸೀಲ್ದಾರ್​ ಮಲ್ಲೇಶ್​ಬೀರಪ್ಪ ಪೂಜಾರ್​ ಮಾತನಾಡಿ, 3 ತಿಂಗಳಲ್ಲಿ 5 ಜನಸ್ಪಂದನ ಸಭೆ ನಡೆಸುತ್ತಿದ್ದು, 300ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕಾರ ಮಾಡಲಾಗಿದೆ. 150ಕ್ಕೂ ಅರ್ಜಿಗಳನ್ನು ಬಗೆ ಹರಿಸಿದ್ದು , 100ಕ್ಕೂ ಹೆಚ್ಚು ಅರ್ಜಿಗಳನ್ನು ವಿವಿಧ ಇಲಾಖೆಗೆ ಹಸ್ತಾಂತರಿಸಲಾಗಿದೆ. ಇಲ್ಲಿನ ನಡೆದ ಜನಸ್ಪಂದನಾ ಸಭೆಯಲ್ಲಿ 80 ಅರ್ಜಿ ಸ್ವೀಕಾರ ಮಾಡಿದ್ದು ಸ್ಥಳದಲ್ಲೇ 30 ಅರ್ಜಿಗೆ ಪರಿಹಾರ ಒದಗಿಸಲಾಗಿದೆ. ಉಳಿಕೆ ಅರ್ಜಿಗಳ ಕುರಿತಾಗಿ ಕ್ರಮ ಕೈಗೊಳ್ಳುವುದು ಎಂದರು.
ಉಪಹಾರದ ವ್ಯವಸ್ಥೆ : ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸಾರ್ವಜನಿಕರ ಜನಸಂಪರ್ಕ ಸಭೆಗೆ ಬಂದಿದ್ದ ನೂರಾರು ಸಾರ್ವಜನಿಕರಿಗೆ ಶಾಸಕ ಎನ್​.ಶ್ರೀನಿವಾಸ್​ ಮಧ್ಯಾಹ್ನದ ಉಪಹಾರದ ವ್ಯವಸ್ಥೆ ಮಾಡಿಸಿದ್ದರು. ನೆ.ಯೋ.ಪ್ರಾಧಿಕರ ಅಧ್ಯಕ್ಷ ಎಂ.ಕೆ.ನಾಗರಾಜು, ರಾಜಸ್ವ ನಿರೀಕ್ಷಕ ಶಿವಪ್ರಸಾದ್​, ಚಂದ್ರಶೇಖರ್​, ಗ್ರಾಮ ಆಡಳಿತಾಧಿಕಾರಿ ಮಾರುತಿ, ಮುಖಂಡ ಕೆ.ಕೃಷ್ಣಪ್ಪ, ರವಿಕುಮಾರ್​, ಸಿ.ಎಂ.ಗೌಡ, ಚಿಕ್ಕಣ್ಣ , ಮುನಿರಾಜು, ಕೆಂಪರಾಜು, ಮುನಿರಾಮು ಉಪಸ್ಥಿತರಿದರು.
ಕಚೇರಿ ಸಿಬ್ಬಂದಿಗೆ ತರಾಟೆ : ತಾಲೂಕು ಕಚೇರಿಯಲ್ಲಿರುವ ಅಭಿಲೇಖಾಲಯ ಶಾಖೆಯಲ್ಲಿ (ದಾಖಲೆಗಳ ಕೊಠಡಿ) ಸಿಬ್ಬಂದಿಯೊಬ್ಬರು ಮೂಲ ದಾಖಲೆಗಳನ್ನು ನೀಡಲು ಹಣ ವಸೂಲಿ ಮಾಡುತ್ತಾರೆ ಎಂದು ಕೆಲವರು ಶಾಸಕರ ಗಮನಕ್ಕೆ ತಂದರು. ಹಣ ಪಡೆದುಕೊಂಡಿದ್ದು ಸಾಬೀತು ಆಗಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎನ್​.ಶ್ರೀನಿವಾಸ್​ ಪ್ರತಿಕ್ರಿಯಿಸಿದರು.
ಪ್ರತಿಭಾ ಪುರಸ್ಕಾರಕ್ಕೆ ಹೆಸರು ಸೇರಿಸಿ : ಫೆ.14ರಂದು ಶಾಸಕರ ನೇತೃತ್ವದಲ್ಲಿ ನಗರದ ಡಾ.ಬಿ.ಆರ್​.ಅಂಬೇಡ್ಕರ್​ ಕ್ರೀಡಾಂಗಣದಲ್ಲಿ ಪ್ರತಿಭಾ ಪುರಸ್ಕಾರ ನೀಡಲಿದ್ದು, ಹೆಸರು ಕೈ ಬಿಟ್ಟಿರುವ ಕೆಲ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡುವಂತೆ ಪಾಲಕರು ಶಾಸಕರಿಗೆ ಮನವಿ ಅರ್ಜಿ ಸಲ್ಲಿಸಿದರು.

ನಿಯಮಾನುಸಾರ ಅವಕಾಶವಿದ್ದರೆ ಕೆಲಸ ಮಾಡಿಕೊಡಬೇಕು. ಇಲ್ಲದಿದ್ದರೆ ಎಲ್ಲರಿಗೂ ಅರ್ಥವಾಗುವಂತೆ ಹಿಂಬರಹ ಕೊಡಬೇಕು. ಎಲ್ಲರಿಗೂ ಕಾಲಾವಕಾಶ ಪಡೆದುಕೊಂಡು ಅನುಪಾಲನಾ ವರದಿ ಸಲ್ಲಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net