೮೦೦ ಟನ್ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬಬಲಾದ ಗ್ರಾಮದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹವಾದ ಮರು ಬಳಕೆಯಾಗದ ಪ್ಲಾಸ್ಟಿಕ್ ವಿಲೇವಾರಿ ಮಾಡುತ್ತಿರುವುದು.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬಬಲಾದ ಗ್ರಾಮದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹವಾದ ಮರು ಬಳಕೆಯಾಗದ ಪ್ಲಾಸ್ಟಿಕ್ ವಿಲೇವಾರಿ ಮಾಡುತ್ತಿರುವುದು.
Published on
ಯಾದಗಿರಿ: ನಗರಸಭೆ ವ್ಯಾಪ್ತಿಯ ಮನೆ ಹಾಗೂ ವಾಣಿಜ್ಯ ಅಂಗಡಿ ಹಾಗೂ ಇನ್ನಿತರ ಕಡೆಯಿಂದ ೧೨ ದಿನಗಳಲ್ಲಿ ಸಂಗ್ರಹ ಮಾಡಿರುವ ಮರು ಬಳಕೆಯಾಗದ ೮೦೦ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಜಿಲ್ಲಾಧಿಕಾರಿ ಅವರ ಆದೇಶದಂತೆ ಶ್ರೀ ಸಿಮೆಂಟ್ ಕಾಂಟ್ರ್ಯಾಕ್ಟರಿಗೆ ಟೆಂಡರ್ ಮೂಲಕ ನಿಯಮಾನುಸಾರವಾಗಿ ವಿಲೇವಾರಿ ಮಾಡಲಾಗಿದೆ ಎಂದು ನಗರಸಭೆ ಪೌರಾಯುಕ್ತ ಉಮೇಶ್ ಚವ್ಹಾಣ್ ತಿಳಿಸಿದ್ದಾರೆ.
ವಡಗೇರಾ ತಾಲೂಕಿನ ಬಬಲಾದ ಗ್ರಾಮದ ಘಟಕದಲ್ಲಿ ಅಂದಾಜು ೧೦ ವರ್ಷಗಳಿಂದ ಮರು ಬಳಕೆಯಾಗದ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಮಾಡಲಾಗಿತ್ತು. ನಗರಸಭೆಯಿಂದ ಮನೆ, ಅಂಗಡಿ ಹಾಗೂ ಇನ್ನಿತರ ಸ್ಥಳದಿಂದ ಸಂಗ್ರಹವಾದ ಹಸಿ ಹಾಗೂ ಒಣಕಸ ವಿಂಗಡಿಸಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಮಾಡಲಾಗಿತ್ತು. ಈಗ ಡಿಸಿ ಅವರ ಆದೇಶ ಮೇರೆಗೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಉಚಿತವಾಗಿ ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.
ಮರು ಬಳಕೆಗೆ ಯೋಗ್ಯವಲ್ಲದ ಪ್ಲಾಸ್ಟಿಕ್ ಹಾಗೂ ಕಡಿಮೆ ಮೌಲ್ಯದ ಪ್ಲಾಸ್ಟಿಕ್ ತ್ಯಾಜ್ಯವು ಸಿಮೆಂಟ್ ಕಾರ್ಖಾನೆಯಲ್ಲಿ ಕಲ್ಲಿದ್ದಲು ಪರ್ಯಾಯವಾಗಿ ಇಂಧನವಾಗಿ ಬಳಸಲಾಗುತ್ತದೆ. ಮರು ಬಳಕೆಗೆ ಯೋಗ್ಯವಲ್ಲದ ನಿಷೇಽತ ಪ್ಲಾಸ್ಟಿಕ್ ಬಳಕೆ ಮಾಡಲು ನಿರ್ಬಂಧ ಮಾಡಲಾಗಿದ್ದು, ಇದರ ವಿರುದ್ಧ ಈಗಾಗಲೇ ದಾಳಿ ಮಾಡಿ ಪ್ಲಾಸ್ಟಿಕ್ ಜಪ್ತಿ ಮಾಡಿ ದಂಡ ಹಾಕುವ ಕಾರ್ಯ ಹಾಗೂ ಇದರ ಬಳಕೆಯಿಂದ ಆರೋಗ್ಯ ಹಾಗೂ ಪರಿಸರ ಮೇಲೆ ಆಗುವ ಪರಿಣಾಮ ಬಗ್ಗೆ ನಗರಸಭೆಯಿಂದ ನಿರಂತರ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ.
ಜನರು ಹಾಗೂ ವ್ಯಾಪಾರಸ್ಥರು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕಿದೆ. ಇದರ ಬದಲಿಗೆ ಪರ್ಯಾಯವಾಗಿ ಪರಿಸರಕ್ಕೆ ಪೂರಕವಾಗುವ ಬಟ್ಟೆ ಬ್ಯಾಗ್ ಹಾಗೂ ಇನ್ನಿತರ ವಸ್ತುಗಳ ಬಳಕೆ ಮಾಡಬೇಕು. ಜನ, ಜÁನುವಾರು, ಜಲಚರ ಹಾಗೂ ಪರಿಸರದ ಮೇಲೆ ದುಷ್ಪರಿಣಾಮ ಬೀಳುತ್ತದೆ ಎಂದು ಚವ್ಹಾಣ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net