ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನವಿಲ್ಲವೆಂದು ಮುನಿಸು? ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ದಿಢೀರ್ ರಾಜೀನಾಮೆ! Sowmya Reddy

ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಸಿಗದಿದ್ದಕ್ಕೆ ಅಸಮಾಧಾನ? ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ದಿಢೀರ್ ರಾಜೀನಾಮೆ. ಸಂಪೂರ್ಣ ಮಾಹಿತಿ ಇಲ್ಲಿದೆ.
Former MLA Sowmya Reddy has resigned from her position as president of the KPCC women's wing, amid dissatisfaction over the lack of female representation in the cabinet.
ಸಚಿವ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯ ಕೊರತೆಯ ಅಸಮಾಧಾನದ ನಡುವೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ.
Published on: 

ಬೆಂಗಳೂರು: ಕೆಲ ತಿಂಗಳುಗಳ ಹಿಂದೆ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ, ತಮಗೆ ದೊರೆತಿದ್ದ ಸಚಿವ ಸ್ಥಾನದ ಬಗ್ಗೆ ಅಸಮಾಧಾನ ಹೊರಹಾಕಿ, ನಂತರ ಎಲ್ಲಾ ಸರಿಹೋಗಿತ್ತು. ಆದರೆ ಇಂದು ರಾಮಲಿಂಗಾ ರೆಡ್ಡಿ ಪುತ್ರಿ ಮಾಜಿ ಶಾಸಕಿ, ಸೌಮ್ಯಾ ರೆಡ್ಡಿ, ಕಾಂಗ್ರೆಸ್​ KPCC ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ದಿಢೀರ್​ ರಾಜೀನಾಮೆ ನೀಡಿದ್ದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ದಾರಿಮಾಡಿಕೊಟ್ಟಿದೆ.

ಮಾಹಿತಿ ಪ್ರಕಾರ, ಕಳೆದೊಂದು ತಿಂಗಳಿನ ಹಿಂದೆ ಸೌಮ್ಯಾ ರೆಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಆ ಅರ್ಜಿ ಈಗ ಅಂಗೀಕಾರವಾಗಿದೆ ಎಂದು ಹೇಳಲಾಗುತ್ತಿದೆ. ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಯಾವುದೇ ಪ್ರಾತಿನಿಧ್ಯ ನೀಡದ ಹಿನ್ನಲೆ, ಈ ಬಗ್ಗೆ ಹೈಕಮಾಂಡ್​​ ಗಮನಕ್ಕೆ ತರುವ ಸಲುವಾಗಿ, ಮಲ್ಲಿಕಾರ್ಜುನ್​ ಖರ್ಗೆ ಅವರಿಗೆ ತಮ್ಮ ರಾಜೀನಾಮೆ ಅರ್ಜಿ ಸಲ್ಲಿಸಿದ್ದರು.

ಎರಡು ವರ್ಷಕ್ಕೆ ಮಾತ್ರ...

ಇನ್ನು ತಾವು ಕೇವಲ ಎರಡು ವರ್ಷಗಳ ಮಟ್ಟಿಗೆ ಮಾತ್ರ ಈ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಸ್ಥಾನ ವಹಸಿಕೊಳ್ಳುವುದಾಗಿ ಒಪ್ಪಿಕೊಂಡಿದ್ದು, ಅದರಂತೆ ತಮ್ಮ ಅಧಿಕಾರವಧಿ ಮುಗಿದಿದೆ, ಹೀಗಾಗಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾಗಿ ಮಾಜಿ ಶಾಸಕಿ ತಿಳಿಸಿದ್ದಾರೆ. ಪಕ್ಷವು ನೂತನ ಅಧ್ಯಕ್ಷರನ್ನು ನೇಮಕ ಮಾಡುವವರೆಗೆ ತಾವು ಇದೇ ಸ್ಥಾನದಲ್ಲಿ ಮುಂದುವರಿಯೂದಾಗಿಯೂ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ವಿಧಾನಸಭೆ, ರಾಜ್ಯಸಭೆ ಹಾಗೂ ಲೋಕಸಭೆ ಚುನಾವಣೆಗಳು ನಡೆಯಲಿದ್ದು, ತಮ್ಮನ್ನು ಸಕ್ರಿಯ ಕಾಂಗ್ರೆಸ್​ ಪಕ್ಷದ ಕಾರ್ಯಕರ್ತೆಯನ್ನಾಗಿ ಗುರಿತಿಸಿಕೊಂಡು, ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟನೆಯಲ್ಲಿ ತೊಡಗುವುದಾಗಿ ಸೌಮ್ಯಾ ರೆಡ್ಡಿ ಹೇಳಿಕೊಂಡಿದ್ದಾರೆ.

Also Read
ಹೆಣಗಳ ಮಧ್ಯೆ ಎಣ್ಣೆ ಪಾರ್ಟಿ: ಶವಾಗಾರದಲ್ಲೇ ಫುಲ್ ಟೈಟ್ ಆದ ಸರ್ಕಾರಿ ವೈದ್ಯ; ವಿಡಿಯೋ ವೈರಲ್​ ಬೆನ್ನಲ್ಲೇ ಸಸ್ಪೆಂಡ್​ ಆದೇಶ! Doctor Suspended
Former MLA Sowmya Reddy has resigned from her position as president of the KPCC women's wing, amid dissatisfaction over the lack of female representation in the cabinet.

ಮಹಿಳಾ ಸಚಿವರಿಲ್ಲ; ಮಾಜಿ ಶಾಸಕಿ ಅಸಮಾಧಾನ!

ಹೈಕಮಾಂಡ್​ಗೆ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ, ರಾಜ್ಯ ಸರ್ಕಾರದಲ್ಲಿ ಒಂದೇ ಒಂದು ಸಚಿವ ಸ್ಥಾನವನ್ನು ಮಹಿಳೆಯರಿಗೆ ನೀಡಲಾಗಿಲ್ಲ. ಇದು ತಮಗೆ ವೈಯಕ್ತಿಕವಾಗಿ ಬೇಸರಕ್ಕೆ ಕಾರಣವಾಗಿದ್ದು, ಪಕ್ಷದ ಹಿರಿಯ ನಾಯಕರ ಗಮನಕ್ಕೆ ಕೂಡ ತಂದಿರುವತ್ತೇನೆ. ಈಗ ನಾನು, ಮಹಿಳಾ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು, ನಮ್ಮ ಸರ್ಕಾರದಿಂದ ರಾಜ್ಯದ ಮಹಿಳೆಯರಿಗೆ ಜಾರಿಯಾಗಿರುವ ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸಲು ಮುಂದಾಗುತ್ತೇನೆಂದು ತಿಳಿಸಿದ್ದಾರೆ. ಅಂತೆಯೇ 2028 ಹಾಗೂ 2029 ರಲ್ಲಿ ನಡೆಯಲಿರುವ ಸಾರ್ವತ್ರಿ ಚುನಾವಣೆಗಳಲ್ಲಿ ಪಕ್ಷದ ಸಕ್ರಿಯ ಕಾರ್ಯಕರ್ತೆಯಾಗಿ ಗುರುತಿಸಕೊಳ್ಳ ಬಯಸುತ್ತೇನೆಂದು ಹೇಳಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net