ಬೆಳೆ ವಿಮೆ ತಾರತಮ್ಯ, 11ಕ್ಕೆ ಕಾಳಗಿ ಬಂದ್​

ಕಾಳಗಿಯಲ್ಲಿ ಹಮ್ಮಿಕೊಂಡಿರುವ ಪೂರ್ವಭಾವಿ ಸಭೆಯಲ್ಲಿ ಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ಶ್ರೀ ನೀಲಕಂಠ ಮರಿದೇವರು, ಶಾಂತಸೋಮನಾಥ ಶ್ರೀ, ಚನ್ನರುದ್ರಮುನಿ ಶ್ರೀ, ಸಿದ್ಧಲಿಂಗ ಶ್ರೀ, ಏಕನಾಥ ಮಹಾರಾಜ, ರೇವಣಸಿದ್ಧ ಶ್ರೀ, ಶ್ರೀ ಪ್ರಶಾಂತ ದೇವರು ಇತರರಿದ್ದರು.
ಕಾಳಗಿಯಲ್ಲಿ ಹಮ್ಮಿಕೊಂಡಿರುವ ಪೂರ್ವಭಾವಿ ಸಭೆಯಲ್ಲಿ ಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ಶ್ರೀ ನೀಲಕಂಠ ಮರಿದೇವರು, ಶಾಂತಸೋಮನಾಥ ಶ್ರೀ, ಚನ್ನರುದ್ರಮುನಿ ಶ್ರೀ, ಸಿದ್ಧಲಿಂಗ ಶ್ರೀ, ಏಕನಾಥ ಮಹಾರಾಜ, ರೇವಣಸಿದ್ಧ ಶ್ರೀ, ಶ್ರೀ ಪ್ರಶಾಂತ ದೇವರು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಪೂರ್ವಭಾವಿ ಸಭೆ
  • ರೈತರಿಗಾಗಿ ಹೋರಾಟಕ್ಕೆ ಬೆಂಬಲ ನೀಡಲು ಮನವಿ
ಕಾಳಗಿ: ಬೆಳೆವಿಮೆ ಪರಿಹಾರ ವಿತರಣೆಯಲ್ಲಿ ತಾಲೂಕಿನ ರೈತರಿಗೆ ಆಗಿರುವ ತಾರತಮ್ಯ ಖಂಡಿಸಿ ಆ.11ರಂದು ಕಾಳಗಿ ಬಂದ್​ಗೆ ಕರೆ ನೀಡಲಾಗಿದೆ ಎಂದು ರೈತ ವೀರಣ್ಣ ಗಂಗಾಣಿ ತಿಳಿಸಿದರು.
ಪ್ರವಾಸಿ ಮಂದಿರ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಬರದಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದಿಂದ ಸಮರ್ಪಕವಾಗಿ ಪರಿಹಾರ ದೊರೆಯುತ್ತಿಲ್ಲ. ಅಲ್ಲದೆ ಬೆಳೆ ವಿಮೆ ಪಾವತಿಯಲ್ಲೂ ರೈತರಿಗೆ ಅನ್ಯಾಯವಾಗಿದೆ. ಅರ್ಹ ಫಲಾನುಭವಿಗಳಿಗೆ ಸೂಕ್ತ ಪರಿಹಾರ ದೊರಕಿಲ್ಲ ಎಂದು ಆರೋಪಿಸಿದರು.
ರೈತರ ಸಮಸ್ಯೆಗಳಿಗೆ ತಣ ಸ್ಪಂದಿಸಬೇಕು. ಎಲ್ಲ ರೈತರಿಗೆ ಬರ ಪರಿಹಾರ ಹಾಗೂ ಬೆಳೆ ವಿಮೆ ಹಣ ಸಮರ್ಪಕವಾಗಿ ಬಿಡುಗಡೆ ಮಾಡಬೇಕು ಎಂಬುದು ಸೇರಿ ಹಲವು ಬೇಡಿಕೆಯೊಂದಿಗೆ ಕಾಳಗಿ ಬಂದ್​ಗೆ ಕರೆ ನೀಡಲಾಗಿದೆ. ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಬಂದ್​ಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಭರತನೂರಿನ ಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ಶ್ರೀ ನೀಲಕಂಠ ಮರಿದೇವರು, ಮಂಗಲಗಿಯ ಶ್ರೀ ಶಾಂತಸೋಮನಾಥ ಸ್ವಾಮೀಜಿ, ಸುಗೂರಿನ ಶ್ರೀ ಚನ್ನರುದ್ರಮುನಿ ಸ್ವಾಮೀಜಿ, ಹೊಸ್ಸಳ್ಳಿ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶ್ರೀ ಏಕನಾಥ ಮಹಾರಾಜ, ರಟಕಲ್​ನ ಶ್ರೀ ರೇವಸಿದ್ಧ ಶಿವಾಚಾರ್ಯ, ಶ್ರೀ ರೇವಣಸಿದ್ಧ ಶರಣರು, ರೈಕೋಡ ಶ್ರೀ ಪ್ರಶಾಂತ ದೇವರು ಸಾನ್ನಿಧ್ಯವಹಿಸಿದ್ದರು.
ರೈತರಾದ ಶಿವರಾಜ ಪಾಟೀಲ್​ ಗೊಣಗಿ, ಜಗದೀಶ ವಾರದ ರುದನೂರ, ಶಿವರುದ್ರಯ್ಯ ಸಾಲಿಮಠ, ಸುಂದರ ಡಿ.ಸಾಗರ, ಶರಣಪ್ಪ ಬೇಲೂರ, ಗುರುರಾಜ ಮದ್ದೂರ, ರಾಜೇಂದ್ರಬಾಬು ಹೀರಾಪುರ, ಭಂಡು ಬೊಮ್ಮಣಿ, ಮೋಹನ ಚಿನ್ನ, ಮಲ್ಲಿಕಾರ್ಜುನ ಪಾಟೀಲ್​ ಹಲಚೇರಾ, ಚಂದ್ರಶೆಟ್ಟಿ ಮಾನಶೆಟ್ಟಿ, ಮಲ್ಲಿಕಾರ್ಜುನ ದಂಡಿನ, ಪ್ರಶಾಂತ ಕೊಡದೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net