ಪೊಲೀಸರಿಂದಲೇ ತಾರತಮ್ಯ ನೀತಿ police

ಪೊಲೀಸರಿಂದಲೇ ತಾರತಮ್ಯ ನೀತಿ police
ಪೊಲೀಸರಿಂದಲೇ ತಾರತಮ್ಯ ನೀತಿ police
Published on
ಮಾಸ್ತಿ: ಮಾಲೂರು ತಾಲೂಕು ಮಾಸ್ತಿ ಪೊಲೀಸ್​ ಠಾಣೆಯಲ್ಲಿ ಸುಮಾರು ತಿಂಗಳಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಟೇಕಲ್​, ಮಾಸ್ತಿ ಭಾಗದ ಬಿಜೆಪಿ ಮುಖಂಡರು ಕಾರ್ಯಕರ್ತರೊಂದಿಗೆ ಜಮಾಯಿಸಿ ಧರಣಿ ನಡೆಸಿ ಡಿವೈಎಸ್ಪಿ ಕೃಷ್ಣಪ್ಪಗೆ ಮನವಿ ಪತ್ರ ಸಲ್ಲಿಸಿದರು. police
ಬಿಜೆಪಿ ತಾಲೂಕು ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ ಮಾತನಾಡಿ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸ್ಥಳಿಯ ಶಾಸಕರ ಅಣತೆಯಂತೆ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್​ ಕಾರ್ಯಕರ್ತರಿಗೆ ನ್ಯಾಯ ಸಿಗುತ್ತಿಲ್ಲ. ದೂರು ಕೊಟ್ಟಾಗ ಪರಿಶೀಲನೆ ಮಾಡದೆ ಆರೋಪಿಗಳ ವಿರುದ್ಧ ಕ್ರಮ ಜರುಗಿಸದೆ ಅನ್ಯಾಯ ಮಾಡುತ್ತಿದ್ದಾರೆ ಎಂದರು.
ವೃತ್ತ ನಿರೀಕ್ಷಕರ ಕಣ್ಣ ಮುಂದೆ ಹಲವು ದಂಧೆ ನಡೆಯುತ್ತಿದ್ದರೂ ಮೌನವಹಿಸಿ ದಂಧೆಕೊರರಿಗೆ ಸಹಕಾರ ನೀಡುತ್ತಿರುವುದು ಪೊಲೀಸ್​ ವೈಲ್ಯ ಎತ್ತಿ ತೋರಿಸುತ್ತಿದೆ. ಠಾಣಾ ವ್ಯಾಪ್ತಿಯ ಟೇಕಲ್​ ಸುತ್ತಮುತ್ತ ರಾತ್ರಿ ಅಕ್ರಮವಾಗಿ ಕಲ್ಲು, ದಿಮ್ಮಿಗಳ ಸಾಗಣೆ ನಡೆಯುತ್ತಿದ್ದು, ಯಾವುದಕ್ಕೂ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಠಾಣೆ ವ್ಯಾಪ್ತಿಯಲ್ಲಿ ಮಾದಕ ವಸ್ತು ಯುವಕರ ಕೈಸೇರಿ ಕೊಲೆ ಸುಲಿಗೆ ಮಾಡುತ್ತಿದ್ದು, ಸಾರ್ವಜನಿಕರು ಭಯ ಭೀತರಾಗಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್​ ಕಾರ್ಯಕರ್ತರು, ಮುಖಂಡರು ಠಾಣೆಗೆ ಬಂದರೆ ರಾಜಾತಿಥ್ಯ ನೀಡಿ ಅವರು ಹೇಳಿದ ಹಾಗೆ ವಿರೋಧ ಪಕ್ಷದ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್​ ದಾಖಲು ಮಾಡುತ್ತಿದ್ದಾರೆ. ಕೋಳಿ ಪಂದ್ಯ, ಮಾದಕ ವಸ್ತು, ಅಕ್ರಮ ಕಲ್ಲು ದಿಮ್ಮಿಗಳನ್ನು ಶಾಸಕರ ಆಪ್ತರು ನಡೆಸುತ್ತಿದ್ದು, ಯಾವುದೇ ಕ್ರಮಗಳನ್ನು ಕೈಗೊಳ್ಳುವಲ್ಲಿ ವೃತ್ತನಿರೀಕ್ಷಕರು ವಿಫಲರಾಗಿದ್ದಾರೆ ಎಂದರು.
ವೆಂಕಟಸ್ವಾಮಿ, ಬೆಳ್ಳಾವಿ ಸೋಮಣ್ಣ, ಬನಹಳ್ಳಿ ಮಂಜುನಾಥ, ಗಜೇಂದ್ರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net