ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್ ಮಾತನಾಡಿ, ಚಿಮುಲ್ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯು ಹಣವನ್ನು ಹಂಚಿ ಗೆದ್ದಿದ್ದಾರೆ. ಆದರೂ ಅನಿರೀಕ್ಷಿತ ಫಲಿತಾಂಶದ ಹೊಣೆಯನ್ನು ನಾನೊಬ್ಬನೇ ಹೊರುತ್ತೇನೆ. ತಡವಾಗಿ, ಅದರಲ್ಲೂ ಆತುರಾತುರವಾಗಿ ಕೈಗೊಂಡ ಸ್ಪರ್ಧೆಯ ನಿರ್ಧಾರಕ್ಕೆ ಸೋಲು ಕಾಣಬೇಕಾಯಿತು ಎಂದು ಹೇಳಿದರು.