ಸ್ಥಿರತೆ, ಶಿಸ್ತಿನಿಂದ ಯಶಸ್ಸು ಕಟ್ಟಿಟ್ಟ ಬುತ್ತಿ

 ನಿಪ್ಪಾಣಿಯ ವಿಎಸ್‌ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರುಗಿದ ಹರ್ಷೋತ್ಸವ-2026 ಕಾರ್ಯಕ್ರಮಕ್ಕೆ ಡಾ.ರಮೇಶ ರತಗೇರಿ ಚಾಲನೆ ನೀಡಿದರು. ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಡಾ.ರಮೇಶ ರತಗೇರಿ, ಪ್ರವೀಣ ಮಠಪತಿ, ಚಂದ್ರಕಾಂತ ತಾರಳೆ, ಸುನೀಲ ಪಾಟೀಲ, ಪಪ್ಪು ಪಾಟೀಲ, ಸಮೀರ ಬಾಗೇವಾಡಿ ಇತರರಿದ್ದರು.
ನಿಪ್ಪಾಣಿಯ ವಿಎಸ್‌ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರುಗಿದ ಹರ್ಷೋತ್ಸವ-2026 ಕಾರ್ಯಕ್ರಮಕ್ಕೆ ಡಾ.ರಮೇಶ ರತಗೇರಿ ಚಾಲನೆ ನೀಡಿದರು. ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಡಾ.ರಮೇಶ ರತಗೇರಿ, ಪ್ರವೀಣ ಮಠಪತಿ, ಚಂದ್ರಕಾಂತ ತಾರಳೆ, ಸುನೀಲ ಪಾಟೀಲ, ಪಪ್ಪು ಪಾಟೀಲ, ಸಮೀರ ಬಾಗೇವಾಡಿ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ನಿಪ್ಪಾಣಿ
ಸಮಯದ ನಿರ್ವಹಣೆ, ದೈನಂದಿನ ಅಧ್ಯಯನ, ಕಾರ್ಯಯೋಜನೆಗಳನ್ನು ಬೇಗನೆ ಪೂರ್ಣಗೊಳಿಸುವಿಕೆ, ಸಂವಹನ ಕೌಶಲ ಸುಧಾರಣೆಗೆ ಒತ್ತು ಕೊಟ್ಟಲ್ಲಿ ಎಂಜಿನಿಯರಿಂಗ್ ಕಲಿಕೆಯಲ್ಲಿರುವ ತೊಂದರೆಗಳನ್ನು ನಿವಾರಿಸಲು ಸಾಧ್ಯ ಎಂದು ಧಾರವಾಡದ ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಡಾ.ರಮೇಶ ರತಗೇರಿ ಹೇಳಿದರು.
ಸ್ಥಳೀಯ ವಿಎಸ್‌ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಹರ್ಷೋತ್ಸವ -2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಂಜಿನಿಯರಿಂಗ್ ಕಲಿಕೆ ಸವಾಲಿನಿಂದ ಕೂಡಿರುತ್ತದೆ. ಸ್ಥಿರತೆ, ತಾಳ್ಮೆ, ಶಿಸ್ತು ಮತ್ತು ನಿರಂತರ ಕಲಿಕೆಯ ಮೂಲಕ ಅದರಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರು.
ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಮಾತನಾಡಿ, ಬಡತನ ಸಾಧನೆಗೆ ಅಡ್ಡಿಯಾಗದು ಎಂಬುದನ್ನು ವಿದ್ಯಾರ್ಥಿಗಳು ತೋರಿಸಿದ್ದಾರೆ. ಹತ್ತಾರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸುತ್ತಿದ್ದೇವೆ. ಸಿಇಟಿ ಮೊದಲಾದ ಪರೀಕ್ಷೆಗಳಿಗೆ ಹೋಗಿ ಬರಲು ಸಂಕೇಶ್ವರ, ಹುಕ್ಕೇರಿ ಭಾಗದ ವಿದ್ಯಾರ್ಥಿಗಳಿಗೂ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ಅನುಭವಿ ಉಪನ್ಯಾಸಕರನ್ನು ಕರೆಯಿಸಿ ಸಿಇಟಿ ಕ್ರ್ಯಾಶ್ ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ. ಈ ಯೋಜನೆಗಳಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿವೆ ಎಂದರು.
ಮಂಡಳದ ಸಂಚಾಲಕ ಸಂಜಯ ಶಿಂತ್ರೆ, ಸಿಇಒ ಡಾ.ಸಿದ್ದಗೌಡ ಪಾಟೀಲ ಮಾತನಾಡಿದರು. ಬಿಇ ಮತ್ತು ಡಿಪ್ಲೋಮಾದಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ನಗದು ಬಹುಮಾನ ನೀಡಲಾಯಿತು.
ಮಂಡಳದ ಅಧ್ಯಕ್ಷ ಚಂದ್ರಕಾಂತ ತಾರಳೆ, ಉಪಾಧ್ಯಕ್ಷ ಸುನೀಲ ಪಾಟೀಲ, ಉಪಕಾರ್ಯಾಧ್ಯಕ್ಷ ಪಪ್ಪು ಪಾಟೀಲ, ಕಾರ್ಯದರ್ಶಿ ಸಮೀರ ಬಾಗೇವಾಡಿ, ಸಂಚಾಲಕ ಹರಿಶ್ಚಂದ್ರ ಶಾಂಡಗೆ, ಸಂಜಯ ಮೊಳವಾಡೆ, ಆನಂದ ಗಿಂಡೆ, ಶೇಖರ ಪಾಟೀಲ, ಡಿಪ್ಲೊಮಾ ಪ್ರಾಚಾರ್ಯ ಬಸವರಾಜ ಕರೋಶಿ, ಕಾರ್ಯಕ್ರಮ ಸಂಯೋಜಕ ಪ್ರೊ.ಅಕ್ಷಯ ಯಾದವಾಡ ಇತರರಿದ್ದರು. ಪ್ರಾಚಾರ್ಯ ಡಾ.ಉಮೇಶ ಪಾಟೀಲ ವರದಿ ಓದಿದರು. ಪ್ರೊ.ಗಾಯತ್ರಿ ಬನ್ನೆ ಪ್ರಾರ್ಥಿಸಿದರು. ಡಾ.ವೀರೇಶ ಮಠದ ಸ್ವಾಗತಿಸಿದರು. ಪ್ರೊ.ರೀನಾ ಖಡಬಡಿ ಪರಿಚಯಿಸಿದರು. ಪ್ರೊ.ಕವಿತಾ ವಾಸೇದಾರ ಮತ್ತು ಪ್ರೊ.ಮಾಧವಿ ಅವಳೇಕರ ನಿರೂಪಿಸಿದರು. ಪ್ರೊ.ಅನುಪ ಗಂಜಿ ವಂದಿಸಿದರು.
-----------
ಆತ್ಮವಿಶ್ವಾಸದಿಂದ ಕನಸು ಕಾಣಬೇಕು, ಕುತೂಹಲದಿಂದ ಕಲಿಯಬೇಕು, ಸಮರ್ಪಣಾಭಾವದಿಂದ ಕೆಲಸ ಮಾಡಬೇಕು ಮತ್ತು ನಮ್ರತೆಯಿಂದ ಮುನ್ನಡೆಯಬೇಕ್ತು. 16 ವರ್ಷಗಳ ಹಿಂದೆ ಕೇವಲ 18 ವಿದ್ಯಾರ್ಥಿಗಳೊಂದಿಗೆ ಆರಂಭವಾದ ತಾಂತ್ರಿಕ ಮಹಾವಿದ್ಯಾಲಯ ಚಂದ್ರಕಾಂತ ಕೋಠಿವಾಲೆ ಸಾರಥ್ಯದಲ್ಲಿ ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ಸ್ವಾವಲಂಬಿ ಬದುಕು ಕಟ್ಟಿಕೊಟ್ಟಿರುವುದು ಹೆಮ್ಮೆ.
- ಪ್ರವೀಣ ಮಠಪತಿ
ಕಾರ್ಯನಿರ್ವಾಹಕ ಎಂಜಿನಿಯರ್, ಪಂಚಾಯತ್ ರಾಜ್ ಇಲಾಖೆ ಚಿಕ್ಕೋಡಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net