ಬಾಕಿ ಬೆಳೆ ವಿಮೆ ಹಣ ಕೂಡಲೇ ವಿತರಣೆ ಮಾಡಿ

ಬಾಕಿ ಬೆಳೆ ವಿಮೆ ಹಣ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಅಫಜಲಪುರದಲ್ಲಿ ತಹಸೀಲ್ದಾರ್​ ಸಂಜೀವಕುಮಾರ ದಾಸರ ಅವರಿಗೆ ರೈತರು ಮನವಿಪತ್ರ ಸಲ್ಲಿಸಿದರು. ಗುಂಡು ಪಾಟೀಲ್​, ದತ್ತು ಕಲಬುರಗಿ, ರಾಮಚಂದ್ರ ಪಾಟೀಲ್​, ಸಿದ್ದಣ್ಣ ಮುಗುಳಿ, ಸಂಗಯ್ಯ ಸ್ವಾಮಿ ಇತರರಿದ್ದರು.
ಬಾಕಿ ಬೆಳೆ ವಿಮೆ ಹಣ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಅಫಜಲಪುರದಲ್ಲಿ ತಹಸೀಲ್ದಾರ್​ ಸಂಜೀವಕುಮಾರ ದಾಸರ ಅವರಿಗೆ ರೈತರು ಮನವಿಪತ್ರ ಸಲ್ಲಿಸಿದರು. ಗುಂಡು ಪಾಟೀಲ್​, ದತ್ತು ಕಲಬುರಗಿ, ರಾಮಚಂದ್ರ ಪಾಟೀಲ್​, ಸಿದ್ದಣ್ಣ ಮುಗುಳಿ, ಸಂಗಯ್ಯ ಸ್ವಾಮಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಫಜಲಪುರದಲ್ಲಿ ರೈತರಿಂದ ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಕೆ
ಅಫಜಲಪುರ: ಕಳೆದ ಹಂಗಾಮಿನ ಎರಡನೇ ಕಂತಿನ ಬೆಳೆ ವಿಮೆ ಹಣ ಕೆಲ ಗ್ರಾಮಗಳಿಗೆ ಬಿಡುಗಡೆಯಾಗಿದ್ದು, ಇನ್ನುಳಿದ ಗ್ರಾಮಗಳಿಗೆ ವಾರದಲ್ಲಿ ಬಿಡುಗಡೆ ಮಾಡಬೇಕು ಎಂದು ರೈತ ಮುಖಂಡ ಗುಂಡು ಪಾಟೀಲ್​ ಆಗ್ರಹಿಸಿದರು.
ಈ ಕುರಿತು ಶುಕ್ರವಾರ ತಹಸೀಲ್ದಾರ್​ ಸಂಜೀವಕುಮಾರ ದಾಸರ ಅವರಿಗೆ ಮನವಿಪತ್ರ ಸಲ್ಲಿಸಿ, 2025&26ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಬೆಳೆ ನಾಶವಾಗಿತ್ತು. ವರ್ಷ ಕಳೆದರೂ ರೈತರಿಗೆ ವಿಮೆಯ 2ನೇ ಕಂತಿನ ಪರಿಹಾರ ಬಂದಿಲ್ಲ. ಬೈರಾಮಡಗಿ, ಮದರಾ (ಬಿ), ಕೋಗನೂರ, ಗುಡೂರ, ಗೌರ (ಬಿ), ಚೌಡಾಪುರ, ಬಂದರವಾಡ, ಬಳೂರಗಿ ಮತ್ತು ಹಸರಗುಂಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಈವರೆಗೂ ವಿಮೆ ಹಣ ಜಮೆ ಆಗಿಲ್ಲ. ಕೂಡಲೇ ವಿಮೆ ಪರಿಹಾರ ಬಿಡುಗಡೆ ಮಾಡಬೇಕು, ವಿಳಂಬವಾಗಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ದತ್ತು ಕಲಬುರಗಿ, ರಾಮಚಂದ್ರ ಪಾಟೀಲ್​, ಸಿದ್ದಣ್ಣ ಮುಗುಳಿ, ಸಂಗಯ್ಯ ಸ್ವಾಮಿ, ಚನ್ನಮಲ್ಲಿಕಾರ್ಜುನ ಪಾಟೀಲ್​, ಸಿದ್ದಣ್ಣ ಹೀರಾಪುರ, ಗುರುಕಿರಣ ಮಾಸ್ತರ್​, ಶಿವಕುಮಾರ ಜಮಾದಾರ, ಶರಣಪ್ಪ ಮುಗುಳಿ, ಶ್ರೀಶೈಲ ಕಲಬುರಗಿ, ಗುರುಶಾಂತ ಹಿರಾಪುರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net