ಧ್ಯಾನಚಂದ್​ ಕ್ರೀಡಾಪಟುಗಳಿಗೆ ಸ್ಫೂರ್ತಿ

ಚಿಂತಾಮಣಿ ತಾಲೂಕಿನ ಕೈವಾರ ಅಂಬೇಡ್ಕರ್​ ಶಾಲೆಯಲ್ಲಿ ಕ್ರೀಡಾ ದಿನಾಚರಣೆಯಲ್ಲಿ ಶಾಲೆ ಆಡಳಿತ ಮಂಡಳಿ ನಂಜಪ್ಪ, ಎಸ್​.ಎಂ.ರೋಜಾ, ಧನುಷ್​, ವಿವೇಕ್​, ಶಿಕ್ಷಕ ಲೋಕೆಶಪ್ಪ, ವೆಂಕಟೇಶ್​ ಬಾಬು, ನೇತ್ರಾ, ಮಂಜುಳಾ, ಚಾಂದ ಪಾಷಾ, ವೆಂಕಟರತ್ನಮ್ಮ ಇದ್ದರು.
ಚಿಂತಾಮಣಿ ತಾಲೂಕಿನ ಕೈವಾರ ಅಂಬೇಡ್ಕರ್​ ಶಾಲೆಯಲ್ಲಿ ಕ್ರೀಡಾ ದಿನಾಚರಣೆಯಲ್ಲಿ ಶಾಲೆ ಆಡಳಿತ ಮಂಡಳಿ ನಂಜಪ್ಪ, ಎಸ್​.ಎಂ.ರೋಜಾ, ಧನುಷ್​, ವಿವೇಕ್​, ಶಿಕ್ಷಕ ಲೋಕೆಶಪ್ಪ, ವೆಂಕಟೇಶ್​ ಬಾಬು, ನೇತ್ರಾ, ಮಂಜುಳಾ, ಚಾಂದ ಪಾಷಾ, ವೆಂಕಟರತ್ನಮ್ಮ ಇದ್ದರು.
Published on

 ಚಿಂತಾಮಣಿ :

ತಾಲೂಕಿನ ಕೈವಾರ ಅಂಬೇಡ್ಕರ್​ ಶಾಲೆಯಲ್ಲಿ ಹಾಕಿ ಮಾಂತ್ರಿಕ ಧ್ಯಾನಚಂದ್​ 125ನೇ ಜನ್ಮ ದಿನಾಚರಣೆ ಅಂಗವಾಗಿ ಕ್ರೀಡಾ ದಿನ ಆಚರಿಸಲಾಯಿತು.

ದೈಹಿಕ ಶಿಕ್ಷಣ ಶಿಕ್ಷಕ ಶ್ರೀಧರ್​ ಹಿರೇಮಠ್​ ಮಾತನಾಡಿ, ಧ್ಯಾನ್​ ಚಂದ್​ ಹಾಕಿ ಕ್ರೀಡೆಯಲ್ಲಿ ಮಹೋನ್ನತ ಸಾಧನೆ ಮಾಡಿದರು. ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ 3 ಬಾರಿ ಬಂಗಾರದ ಪದಕ ಗೆಲ್ಲುವಲ್ಲಿ ಇವರ ನೇತೃತ್ವದ ಹಾಕಿ ತಂಡ ಯಶಸ್ವಿಯಾಗಿತ್ತು.
 ಹಾಕಿ ಕ್ರೀಡೆಯಲ್ಲಿ ಮಹತ್ತರ ಸಾಧನೆ ಮಾಡಿರುವ ಧ್ಯಾನ್​ ಚಂದ್​ ಜನ್ಮದಿನದ ನೆನಪಿಗೆ ದೇಶಾದ್ಯಂತ 2012ರಿಂದ ರಾಷ್ಟ್ರೀಯ ಕ್ರೀಡಾ ದಿನವೆಂದು ಆಚರಿಸಲಾಗುತ್ತದೆ. ಈ ದಿನ ಕ್ರೀಡಾ ಸಾಧಕರಿಗೆ ಅರ್ಜುನ, ರಾಜೀವ್​ ಗಾಂಧಿ ಖೇಲ್​ ರತ್ನ ಹಾಗೂ ದ್ರೋಣಾಚಾರ್ಯ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ ಎಂದರು.
ಮುಖ್ಯಶಿಕ್ಷಕ ಸುರೇಶ ಮಾತನಾಡಿ, ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯ ವೃದ್ಧಿಯಾಗುತ್ತದೆ. ಕ್ರೀಡಾ ಮನೋಭಾವನೆಯಿಂದ ಆಡಿ ರಾಜ್ಯ ದೇಶಕ್ಕೆ ಕೀರ್ತಿ ತರಬೇಕು ಎಂದರು.    
ಕ್ರೀಡಾ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡೆಗಳ ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net