ಡಿಜಿಪಿ ರಾಮಚಂದ್ರರಾವ್ ರಾಸಲೀಲೆ: ವಿಡಿಯೋ ವೈರಲ್.. ಡಿಜಿಪಿ ಏನಂದ್ರು? k ramachandra rao​

k ramachandra rao
k ramachandra rao
Published on
ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ರನ್ಯಾ ರಾವ್​ ಅವರ ತಂದೆ ಹಾಗೂ ಐಜಿಪಿ (DGP ಶ್ರೇಣಿ) ಕೆ. ರಾಮಚಂದ್ರ ರಾವ್ (k ramachandra rao)  ಸಮವಸ್ತ್ರದಲ್ಲಿಯೇ ಮಹಿಳೆಯರೊಂದಿಗೆ ಸರಸವಾಡಿದ್ದಾರೆ ಎನ್ನಲಾದ ಆಕ್ಷೇಪಾರ್ಹ ಮೂರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿವೆ.
ವೈರಲ್ ಆಗಿರುವ ವಿಡಿಯೋಗಳಲ್ಲಿ ರಾಮಚಂದ್ರ ರಾವ್ ಅವರು ತಮ್ಮ ಕಚೇರಿಯಲ್ಲೇ ಕುಳಿತು, ಸಮವಸ್ತ್ರದಲ್ಲಿರುವಾಗಲೇ ಹಲವು ಮಹಿಳೆಯೊಬ್ಬರೊಂದಿಗೆ  ಸರಸವಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋಗಳನ್ನು ಒಂದೆರಡು ವರ್ಷಗಳ ಹಿದೆ ರೆಕಾರ್ಡ್​ ಮಾಡಿರಬಹುದೆಂದು ಹೇಳಲಾಗಿದೆ. ಆದರೆ  ವಿಡಿಯೋದಲ್ಲಿರುವ ಮಹಿಳೆ ಯಾರು? ಓರ್ವ ಮಹಿಳೆಯಾ?  ಅಥವಾ ಹಲವು ಮಹಿಳೆಯರಾ ಎಂಬುದು ಗೊತ್ತಾಗಿಲ್ಲ. ಈ ವಿಡಿಯೋಗಳನ್ನು ಯಾರು ಚಿತ್ರೀಕರಿಸಿದ್ದಾರೆ? ಇದರ ಉದ್ದೇಶ ಏನು? ಈಗ ಈ ವಿಡಿಯೋಗಳನ್ನು ಬಹಿರಂಗ ಪಡಿಸಿದ್ಯಾಕೆ ಎಂಬುದು ನಿಗೂಢವಾಗಿದೆ.  
ಸಮವಸ್ತ್ರದ ಘನತೆ ಮರೆತು, ಕಚೇರಿಯಲ್ಲೇ ಇಂತಹ ಕೃತ್ಯವೆಸಗಿರುವುದು ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ರಾಜ್ಯ ಸರ್ಕಾರವು ತಕ್ಷಣವೇ ತನಿಖೆಗೆ ಸೂಚಿಸಿದೆ. ಗೃಹ ಇಲಾಖೆಯು ಈ ಬಗ್ಗೆ ವರದಿ ಕೇಳಿದೆ.

ವೀಡಿಯೋಗೆ ಪ್ರತಿಕ್ರೀಯೆ ನೀಡಿದ ರಾಮಚಂದ್ರ ರಾವ್​​! 

ವೈರಲ್ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ ರಾಮಚಂದ್ರ ರಾವ್​​, 'ನಾನು ಕೂಡ ಇಂದು ಆ ವಿಡಿಯೋವನ್ನು ನೋಡಿದ್ದೇನೆ. ಅದು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಿದ ಅಥವಾ ಎಡಿಟ್ ಮಾಡಿದ್ದಾರೆ. ನನ್ನ ವೃತ್ತಿಜೀವನಕ್ಕೆ ಕಪ್ಪುಚುಕ್ಕೆ ಹಚ್ಚಲು ಈ ರೀತಿಯ ಷಡ್ಯಂತ್ರ ರೂಪಿಸಿದ್ದಾರೆ' ಎಂದು ಸಮರ್ಥಿಸಿಕೊಂಡಿದ್ದಾರೆ.
ಒಂದೆಡೆ ವಿಡಿಯೋ ಎಡಿಟೆಡ್ ಎಂದು ರಾಮಚಂದ್ರ ರಾವ್ ಹೇಳುತ್ತಿದ್ದರೆ, ಮತ್ತೊಂದೆಡೆ ವಿಡಿಯೋದಲ್ಲಿರುವ ದೃಶ್ಯಗಳು ಮತ್ತು ಸ್ಥಳವು ಅವರ ಕಚೇರಿಯನ್ನೇ ಹೋಲುತ್ತಿವೆ ಎಂಬ ವಾದಗಳು ಕೇಳಿಬರುತ್ತಿವೆ.
ಅಕ್ರಮವಾಗಿ ಚಿನ್ನ ಸಾಗಾಟ​ ಕೇಸ್​​ನಲ್ಲಿ ಸಿಕ್ಕಿ ಹಾಕಿಕೊಂಡಿರುವ ನಟಿ ರನ್ಯಾ ರಾವ್​ ಅವರ ಮಲತಂದೆ ಆಗಿರುವ ಹಿರಿಯ ಐಪಿಎಸ್​ ಅಧಿಕಾರಿ ರಾಮ್​ ಚಂದ್ರರಾವ್​ ಸದ್ಯ ಡಿಸಿಆರ್​​ಇ ಡಿಜಿಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.  ಸಾಕು ಮಗಳು ರನ್ಯಾ ರಾವ್​ ಬಂಧನವಾದ ನಂತರ ಸರ್ಕಾರ ಇವರನ್ನು ಕಡ್ಡಾಯ ರಜೆ ಮೇಲೆ ಕಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net