ಭಕ್ತಿ, ಶ್ರದ್ಧೆ ಜೀವನದ ಯಶಸ್ಸಿನ ಮೂಲ The Guru's Grace

The Guru's Grace ಚಿಕ್ಕನಾಯಕನಹಳ್ಳಿ ತಾಲೂಕಿನ ಬೋರನಕಣಿವೆ ಶ್ರೀ ಸಾಯಿಧಾಮದಲ್ಲಿ ಗುರುವಾರ ಆಯೋಜಿಸಿದ್ದ "ಗುರು ಕಾರುಣ್ಯ' ಕಾರ್ಯಕ್ರಮದಲ್ಲಿ ರಾಜ್ಯಸಭೆ ಸದಸ್ಯ ಜಗ್ಗೇಶ್​ ಅವರನ್ನು ಸನ್ಮಾನಿಸಲಾಯಿತು. ಸಾಯಿ ಮಂದಿರದ ಕಾರ್ಯದರ್ಶಿ ಬಿ.ವಿಠಲ್​, ತುಕಾರಾಂ ಮಹಾರಾಜ್​, ಸಾನ್ವಿಕ ಮಹಾರಾಜ್​, ನಿವೃತ್ತ ಮುಖ್ಯ ಶಿಕಿ ಮಂಜುಳಾ, ನಿವೃತ್ತ ಶಿಕ ಶಿವರುದ್ರಯ್ಯ ಇತರರು ಇದ್ದರು.
The Guru's Grace ಚಿಕ್ಕನಾಯಕನಹಳ್ಳಿ ತಾಲೂಕಿನ ಬೋರನಕಣಿವೆ ಶ್ರೀ ಸಾಯಿಧಾಮದಲ್ಲಿ ಗುರುವಾರ ಆಯೋಜಿಸಿದ್ದ "ಗುರು ಕಾರುಣ್ಯ' ಕಾರ್ಯಕ್ರಮದಲ್ಲಿ ರಾಜ್ಯಸಭೆ ಸದಸ್ಯ ಜಗ್ಗೇಶ್​ ಅವರನ್ನು ಸನ್ಮಾನಿಸಲಾಯಿತು. ಸಾಯಿ ಮಂದಿರದ ಕಾರ್ಯದರ್ಶಿ ಬಿ.ವಿಠಲ್​, ತುಕಾರಾಂ ಮಹಾರಾಜ್​, ಸಾನ್ವಿಕ ಮಹಾರಾಜ್​, ನಿವೃತ್ತ ಮುಖ್ಯ ಶಿಕಿ ಮಂಜುಳಾ, ನಿವೃತ್ತ ಶಿಕ ಶಿವರುದ್ರಯ್ಯ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್​ ಅಭಿಮತ
  • ಬೋರನಕಣಿವೆ ಸಾಯಿಧಾಮದಲ್ಲಿ ಗುರು ಕಾರುಣ್ಯ ಆಯೋಜನೆ
ಹೊಯ್ಸಳಕಟ್ಟೆ: ಜೀವನದಲ್ಲಿ ಭಕ್ತಿ ಇದ್ದವರಿಗೆ ಭಯ ಇರುತ್ತದೆ. ಭಯ ಇದ್ದವರಿಗೆ ಶ್ರದ್ಧೆ ಇರುತ್ತದೆ. ಶ್ರದ್ಧೆ ಇದ್ದವರಿಗೆ ಜೀವನದ ಮುಂದಿನ ಗುರಿ ಸ್ಪಷ್ಟವಾಗಿ ಕಾಣಿಸುತ್ತದೆ ಎಂದು ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್​ ಹೇಳಿದರು.
ಚಿಕ್ಕನಾಯಕನಹಳ್ಳಿ ತಾಲೂಕಿನ ಬೋರನಕಣಿವೆ ಶ್ರೀ ಸಾಯಿಧಾಮದಲ್ಲಿ ಗುರುವಾರ ಆಯೋಜಿಸಿದ್ದ "ಗುರು ಕಾರುಣ್ಯ'ದಲ್ಲಿ ಮಾತನಾಡಿದರು.
ಜಗತ್ತಿನ ಮೊದಲ ಗುರು ತಾಯಿಯೇ ಆಗಿದ್ದು, ಮಕ್ಕಳಲ್ಲಿ ಬಾಲ್ಯದಿಂದಲೇ ಭಕ್ತಿ, ವಿನಯ ಮತ್ತು ಸಂಸ್ಕಾರವನ್ನು ಬೆಳೆಸುವ ಜವಾಬ್ದಾರಿ ಅವರ ಮೇಲಿದೆ. ಇಲ್ಲದಿದ್ದರೆ ಮಕ್ಕಳು ಸಮಾಜವಿರೋಧಿ ಚಟುವಟಿಕೆಗಳತ್ತ ಸಾಗುವ ಅಪಾಯವಿದೆ ಎಂದರು.
ಯಾಂತ್ರಿಕ ಬದುಕಿನಲ್ಲಿ ಜನರು ಆಧ್ಯಾತ್ಮಿಕತೆ ಮತ್ತು ಭಕ್ತಿಯಿಂದ ದೂರವಾಗುತ್ತಿರುವುದು The Guru's Grace ಉತ್ತಮ ಬೆಳವಣಿಗೆಯಲ್ಲ. ಮನೆಯಲ್ಲಿ ತಾಯಿ ಬುದ್ಧಿವಂತರಾಗಿದ್ದರೆ ಕುಟುಂಬವೂ ಸದೃಢವಾಗಿರುತ್ತದೆ. ಮನುಷ್ಯ ಸದಾ ಜಾಗೃತನಾಗಿರಬೇಕು. ಒಳಗಿನಿಂದಲೂ ಮತ್ತು ಹೊರಗಿನಿಂದಲೂ ಶುದ್ಧನಾಗಿದ್ದರೆ ಭಗವಂತನೇ ರಣೆ ನೀಡುತ್ತಾನೆ. ನಾನು ಯಾರು? ಎಂಬ ಆತ್ಮಚಿಂತನೆ ಹಾಗೂ ಬದುಕು ಶಾಶ್ವತವಲ್ಲ ಎಂಬ ಅರಿವು ಮೂಡಿದಾಗ ಅಹಂಕಾರ ಕರಗಿ ಹೋಗುತ್ತದೆ. ಶಿವಪಂಚಾರಿ ಮಂತ್ರವಾದ "ಓಂ ನಮ@ ಶಿವಾಯ' ನಾಮಸ್ಮರಣೆಗೆ ಜೀವನದ ಸಂಕಷ್ಟಗಳನ್ನು ದೂರ ಮಾಡುವ ಅದ್ಭುತ ಶಕ್ತಿ ಇದೆ ಎಂದು ಶಿವಮಹಿಮೆಯನ್ನು ವಿವರಿಸಿದರು.
ತುಮಕೂರು ಜಿಲ್ಲೆಯ ಪುಟ್ಟ ಹಳ್ಳಿಯಲ್ಲಿ ಜನಿಸಿದ ತಮ್ಮ ಬಾಲ್ಯದ ಜೀವನ ಕಷ್ಟಕರವಾಗಿತ್ತು. ಆದರೆ ಶ್ರೀ ರಾವೇಂದ್ರ ಸ್ವಾಮಿಗಳ ಕೃಪೆಯಿಂದ ಜೀವನದಲ್ಲಿ ಮಹತ್ತರ ಬದಲಾವಣೆ ಕಂಡೆ. ಭಕ್ತಿ ಇರುವವರು ಬದುಕಿನ ಸವಾಲುಗಳನ್ನು ಸುಲಭವಾಗಿ ಜಯಿಸಬಲ್ಲರು ಎಂದು ತಮ್ಮ ಜೀವನಾನುಭವ ಹಂಚಿಕೊಂಡರು.
ಉಪರಾಷ್ಟ್ರಪತಿ ಕರೆತರಲು ಚಿಂತನೆ
ಬೋರನಕಣಿವೆ ಶ್ರೀ ಸಾಯಿಧಾಮದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಸಿದ ಜಗ್ಗೇಶ್​, ಮುಂದಿನ ದಿನಗಳಲ್ಲಿ ಈ ಪವಿತ್ರ ೇತ್ರಕ್ಕೆ ಭಾರತದ ಉಪರಾಷ್ಟ್ರಪತಿಯವರನ್ನು ಇಚ್ಛೆ ಹೊಂದಿರುವೆ ಎಂದರು.
ಇದಕ್ಕೂ ಮುನ್ನ ಜಗ್ಗೇಶ್​ ಅವರು ಶ್ರೀ ಸಾಯಿಧಾಮದಲ್ಲಿರುವ ಕಣಿವೆ ಶಂಕರ ಸ್ವಾಮಿಗೆ ಅಭಿಷೇಕ ನೆರವೇರಿಸಿ, ಶ್ರೀ ಸಾಯಿಬಾಬರಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಶ್ರೀ ಸಾಯಿಧಾಮ ಟ್ರಸ್ಟ್​ ವತಿಯಿಂದ ಸನ್ಮಾನಿಸಲಾಯಿತು. ಅಭಿಮಾನಿಯೊಬ್ಬರು ಜಗ್ಗೇಶ್​ ಅವರ ಭಾವಚಿತ್ರವಿರುವ ವಿಶೇಷ ಛಾಯಾಚಿತ್ರವನ್ನು ಉಡುಗೊರೆಯಾಗಿ ನೀಡಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಅಪಾರ ಭಕ್ತರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net