ನಾಗಬನದಲ್ಲಿ ಭಕ್ತರ ಷಷ್ಠಿ ಸಂಭ್ರಮ

ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದಲ್ಲಿ ಷಷ್ಠಿ ಅಂಗವಾಗಿ ಬುಧವಾರ ನಾಗಬನದಲ್ಲಿ ಭಕ್ತರು ಹಾಲಿನ ತನಿ ಎರೆದರು.
ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದಲ್ಲಿ ಷಷ್ಠಿ ಅಂಗವಾಗಿ ಬುಧವಾರ ನಾಗಬನದಲ್ಲಿ ಭಕ್ತರು ಹಾಲಿನ ತನಿ ಎರೆದರು.
Published on
ಕಿಕ್ಕೇರಿ: ಹೋಬಳಿಯ ನಾಗಕ್ಷೇತ್ರವಾದ ಸಾಸಲು ಕ್ಷೇತ್ರದಲ್ಲಿನ ನಾಗಬನದಲ್ಲಿ ಸರದಿ ಸಾಲಿನಲ್ಲಿ ಭಕ್ತರು ನಿಂತು ನಾಗರ ಕಲ್ಲಿಗೆ, ಹುತ್ತಕ್ಕೆ ಹಾಲಿನ ತನಿ ಎರೆದರು.
ಬುಧವಾರ ಬೆಳಗ್ಗಿನಿಂದಲೇ ಭಕ್ತರು ರಾಜ್ಯದ ವಿವಿಧ ಮೂಲೆಗಳಿಂದ ಬಂದರು. ಸೋಮೇಶ್ವರ, ಶಂಭುಲಿಂಗೇಶ್ವರ, ಕುದುರೆಮಂಡಮ್ಮ ದೇಗುಲದಲ್ಲಿ ತೆರಳಿ ದೇವರ ದರ್ಶನ ಪಡೆದು ಹರಕೆ ತೀರಿಸಿ, ಕಾಣಿಕೆ ಒಪ್ಪಿಸಿದರು.
ನಾಗಬನಕ್ಕೆ ತೆರಳಿ ನಾಗರಕಲ್ಲಿಗೆ, ನಾಗರ ಹುತ್ತಕ್ಕೆ ಹಾಲಿನ ತನಿ ಎರೆದರು. ಹರಿಶಿಣ, ಕುಂಕುಮ ಇಟ್ಟು ಹೂವಿನಿಂದ ಅಲಂಕರಿಸಿದರು. ದೀಪದಾರತಿ ಬೆಳಗಿ ಸಂಭ್ರಮಿಸಿದರು.
ಹಾಲಿನ ತನಿ ಎರೆದ ಪರಿಣಾಮ ಇಡೀ ಪರಿಸರದಲ್ಲಿ ಹಾಲು ನಿಂತು ಭಕ್ತರು ಮುಜುಗರ ಅನುಭವಿಸಿದರು. ಕೆಲ ಭಕ್ತರು ಮೂಗು ಮುಚ್ಚಿಕೊಂಡೇ ನಾಗಪ್ಪನಿಗೆ ಪೂಜಿಸಿದರು. ಲಕ್ಷಾಂತರ ರೂ. ವರಮಾನ ಪಡೆಯುತ್ತಿರುವ ಮುಜರಾಯಿ ಇಲಾಖೆ ಇತ್ತ ಗಮನಹರಿಸದಿರುವುದರಿಂದ ಕ್ಷೇತ್ರದಲ್ಲಿ ಅನೈರ್ಮಲ್ಯ ಕಾಡುತ್ತಿದೆ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದರು.
ಶಂಭುಲಿಂಗೇಶ್ವರ, ಸೋಮೇಶ್ವರ ಅನ್ನ ದಾಸೋಹ ಸಮಿತಿಯಿಂದ ಭಕ್ತರಿಗೆ ದಾನಿಗಳ ಸಹಾಯದಿಂದ ಅನ್ನ ದಾಸೋಹ ಏರ್ಪಡಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net