ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದೆ

Development works are in progress.
Development works are in progress.
Published on
ಚಿಕ್ಕನಾಯಕನಹಳ್ಳಿ: ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ, ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಸುವಾರು 3 ಸಾವಿರ ಎಕರೆ ಜಮೀನು ಭೂಸ್ವಾದೀನ ಪ್ರಕ್ರಿಯೆ ಮುಗಿದು, ಕಾಮಗಾರಿ ನಡೆಸಲು ಸಂಬಂಧಪಟ್ಟ ಇಂಜನಿಯರ್‌ಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ತಿಳಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ವಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದಂತೆ ತಾಲೂಕು ಹೋಬಳಿ ಮಟ್ಟದಲ್ಲಿ ಜನಸಂಪರ್ಕ ಸಭೆಯನ್ನು ವಾಡಲಾಗುತ್ತಿದೆ. ಹುಳಿಯಾರು ಪಟ್ಟಣ ಪಂಚಾಯಿತಿಯ ಕಸವಿಲೇವಾರಿಯ ಗ್ಗೆ, ಖಾತೆ, ಪೋಡಿ, ಕೋರ್ಟ್ ಡಿಕ್ರಿಯ ಮೇಲೆ ಖಾತೆಗಳನ್ನು ವಾಡುವ ಗ್ಗೆ, ಗ್ರಾಪಂ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಅರ್ಜಿಗಳು ಬಂದಿವೆ ಎಂದು ತಿಳಿಸಿದರು.
ಶಾಸಕ ಸಿ.ಬಿ.ಸುರೇಶ್‌ಬಾಬು ಅವರು ನಮ್ಮೊಂದಿಗೆ ಸಭೆಯಲ್ಲಿ ಭಾಗವಹಿಸಿ ಅರ್ಜಿಗಳ ಪರೀಲಿಸಿದ್ದಾರೆ, ಒಟ್ಟು 147 ಅರ್ಜಿಗಳು ಬಂದಿವೆ ಎಂದು ಮಾಹಿತಿ ನೀಡಿದರು, ಹೇವಾವತಿ ನಾಲಾ ಕಾಮಗಾರಿಯ ವಿಳಂಬಕ್ಕೆ ಅಲ್ಲಿನ ಆಳ ಹಾಗೂ ಅಗಲ ಹೆಚ್ಚಾಗಿದ್ದು, ಅಲ್ಲಿ ಮಣ್ಣು, ಹಾಗೂ ಬಂಡೆಗಳು ಸಿಕ್ಕಾಗ ಕೆಲಸ ಸ್ವಲ್ಪ ತಡವಾಗುತ್ತದೆ. ಅದರೂ ಕಾಮಗಾರಿಯನ್ನು ಮುಗಿಸುವುದಾಗಿ ತಿಳಿಸಿದರು.
ಶಾಸಕ ಸಿ.ಬಿ.ಸುರೇಶ್‌ಬಾಬು ವಾತನಾಡಿ, ತಾಲೂಕಿನಲ್ಲಿನ ಅಭಿವೃದ್ಧಿ ಕೆಲಸಗಳು ಸಮಯದೊಳಗೆ ಮುಗಿಸುವಂತೆಯು ಹಾಗೂ ಹೇವಾವತಿ ನಾಲಾ ಕಾಮಗಾರಿಯನ್ನು ತೀವ್ರಗೊಳಿಸುವಂತೆ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net