ನೆಲಮಂಗಲ ಉತ್ಸವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತ ಮಹಿಳೆಯರಿಗೆ ಶಾಸಕ ಎನ್.ಶ್ರೀನಿವಾಸ್ ಬಹುಮಾನ ವಿತರಿಸಿದರು. ನಗರಸಭೆ ಅಧ್ಯಕ್ಷ ಎನ್.ಗಣೇಶ್, ಸದಸ್ಯ ಪುರುಷೋತ್ತಮ್, ನರಸಿಂಹಮೂರ್ತಿ, ಪೌರಾಯುಕ್ತ ಗಂಗಾಧರ್, ಆರೋಗ್ಯ ನಿರೀಕ್ಷಕಿ ಬಿಜಿ ಇತರರು ಇದ್ದರು.
ನೆಲಮಂಗಲ : ಪ್ರತಿ ಗ್ರಾಮದಲ್ಲೂ ರಂಗೋಲಿ ಸ್ಪರ್ಧೆಗೆ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ್ದಾರೆ ಎಂದು ಶಾಸಕ ಎನ್. ಶ್ರೀನಿವಾಸ್ ಹೇಳಿದರು.
ನಗರಸಭೆ ವ್ಯಾಪ್ತಿಯ ವಿವಿಧೆಡೆ ನೆಲಮಂಗಲ ಉತ್ಸವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತ ಮಹಿಳೆಯರಿಗೆ ಬಹುಮಾನ ವಿತರಿಸಿ ಮಾತನಾಡಿದರು. ರಂಗೋಲಿ ಸ್ಪರ್ಧೆಗೆ ಉತ್ತಮ ಸ್ಪಂದನೆ ದೊರಕಿದೆ. ಜನರು ಸ್ಪರ್ಧೆ ವೇಳೆ 3 ದಶಕಗಳ ಸಮಸ್ಯೆ ತಿಳಿಸಿದ್ದಾರೆ. ಕ್ಷೇತ್ರದಲ್ಲಿ ಹಿಂದಿನ 10 ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂಬುದು ಎದ್ದು ತೋರಿಸುತ್ತಿದೆ. ಕೇವಲ 3 ವರ್ಷದ ಅವಧಿಯಲ್ಲಿ ಕ್ಷೇತ್ರಕ್ಕೆ 1.5 ಸಾವಿರ ಕೋಟಿ ರೂ. ಅನುದಾನ ತರಲಾಗಿದೆ. ಜನರ ಸಮಸ್ಯೆ ಹಂತ&ಹಂತವಾಗಿ ಮಾಡಲಾಗುವುದು ಎಂದರು.
ನಗರಸಭೆ ವ್ಯಾಪ್ತಿಯ ಕೆಂಪಲಿಂಗನಹಳ್ಳಿಯಲ್ಲಿ ರಸ್ತೆ, ಚರಂಡಿ ಹಾಗೂ ಶುದ್ಧ ಕುಡಿಯುವ ನೀರಿನ ಘಟನೆ ನಿಮಾರ್ಣ, ಷರಾಪರಪಾಳ್ಯದಲ್ಲಿ ಚರಂಡಿ ಅಭಿವೃದ್ಧಿ 50 ಲಕ್ಷ ಅನುದಾನ, ಜತೆಗೆ ಕೂಲಿಪುರದಲ್ಲಿ ರಸ್ತೆ ಚರಂಡಿ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ಕೆ 1.65 ಕೋಟಿ ರೂ. ಅನುದಾನ ಮೀಸಲಿದ್ದು, ಶ್ರೀ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಶಾಸಕರು ಮಾಹಿತಿ ನೀಡಿದರು.
ರಂಗೋಲಿ ಸ್ಪರ್ಧೆ: ನಗರಸಭೆ ವ್ಯಾಪ್ತಿಯ ಬೆನಕಬಡಾವಣೆ, ಕೆಂಪಲಿಂಗನಹಳ್ಳಿ, ಷರಾಪರಪಾಳ್ಯ, ಬ್ಯಾಡರಹಳ್ಳಿ, ರಾಯನ್ನಗರ, ವಿಶ್ವೇಶ್ವರಪುರ, ಕೂಲಿಪುರ ಹಾಗೂ ಪೇಟೆಬೀದಿಯಲ್ಲಿ ರಂಗೋಲಿ ಸ್ಪರ್ಧೆ ಆಯೊಜಿಸಿದ್ದು, ಸುಮಾರು 1500ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ನೆ.ಯೋ.ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ನಾರಾಯಣ್ಗೌಡ, ಗ್ರಾಪಂ ಮಾಜಿ ಸದಸ್ಯ ಡಾ. ರಾಜಣ್ಣ, ಕೆಂಪೇಗೌಡ, ಬೈಲಮೂರ್ತಿ, ಮುಖಂಡ ರಂಗನಾಥ್, ರವಿಕುಮಾರ್, ಕೃಷ್ಣ, ಶಿವಕುಮಾರ್, ಗಂಗರಾಜು ಇತರರು ಇದ್ದರು.